ಐನೋಳಿ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಶ್ರೀದೇವಿ ಮೇತ್ರಿ ಆಯ್ಕೆ ಸಿಹಿ ಹಂಚಿ ಸಂಭ್ರಮ ಆಚರಿಸಿದ ಬೆಂಬಲಿಗರು
ಐನೋಳಿ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಶ್ರೀದೇವಿ ಮೇತ್ರಿ ಆಯ್ಕೆ ,ಸಿಹಿ ಹಂಚಿ ಸಂಭ್ರಮ ಆಚರಿಸಿದ ಬೆಂಬಲಿಗರು
ಚಿಂಚೋಳಿ : ತಾಲೂಕಿನ ಐನೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಶ್ರೀದೇವಿ ಶರಣಪ್ಪ ಮೇತ್ರಿ ಅವರು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿಗಳು ಘೋಷಿಸಿದರು.
ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಬಲ 18 ಆಗಿದ್ದು, ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ 14 ಜನ ಸದಸ್ಯರು ಭಾಗವಹಿಸಿ, ಅಧ್ಯಕ್ಷೆಗೆ ಬೆಂಬಲ ಸೂಚಿಸಿದರು.
ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಸದಸ್ಯೆ ಶ್ರೀದೇವಿ ಶರಣಪ್ಪ ಮೇತ್ರಿ ಅವರ ಏಕ ನಾಮಪತ್ರ ಸಲ್ಲಿಕೆಯ ಹಿನ್ನಲೆ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಗೊಂಡರು.
ಹಿಂದಿನ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಕಮಲಾಬಾಯಿ ಸೇವು ಪವಾರ ಅವರ ವಿರುದ್ದ ಸದಸ್ಯರು ಅವಿಶ್ವಾಸ ಮಂಡನೆ ಆದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಉಪಾಧ್ಯಕ್ಷೆ ಸುರ್ಕಿತಾ, ಸದಸ್ಯರಾದ ವೀರೇಂದ್ರ ಮುರುಡ, ಮಂಗಲಾ ಮಲ್ಲಿಕಾರ್ಜುನ, ಸಂಜೀವಕುಮಾರ ಪ್ರಭುಲಿಂಗ, ರಾಮಣ್ಣ ಸಾಯಿಬಣ್ಣ, ನಫಿಸಾಬೇಗಮ್ ಅಲ್ಲಾವುದ್ದಿನ್, ಪಾರಮ್ಮ ಬಕ್ಕಪ್ಪ, ಶಿವಕುಮಾರ ಬಸವಣಪ್ಪ, ಅಶೋಕ ಭಜಂತ್ರಿ, ಜಯಮ್ಮ ದೇವೀಂದ್ರಪ್ಪ, ಹನಮಂತ ದೊಡ್ಡಮನಿ, ಕಲಾವತಿ ಹೀರಾಸಿಂಗ್, ಸೈಯದ್ ಆಶೀಫ್ ಹುಡಾ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀರಣ್ಣ ಅವರು ಇದ್ದರು.
ವಿಜಯೋತ್ಸವ ಆಚರಣೆ : ಐನೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ನಡೆದ ಚುನಾವಣೆಯಲ್ಲಿ ಸದಸ್ಯೆ ಶ್ರೀದೇವಿ ಶರಣಪ್ಪ ಮೇತ್ರಿ ಅವರು ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿ, ಬೆಂಬಲಿಗರೊಂದಿಗೆ ಹಲಗಿಗಳ ಮೂಲಕ ಗ್ರಾಮದ ಪ್ರತಿಯೊಂದು ಓಣಿಗಳಿಗೆ ಸುತ್ತಾಡಿ ವಿಜಯೋತ್ಸವ ಆಚರಿಸಿದರು.
ಈ ಸಂಧರ್ಭದಲ್ಲಿ ಲೋಕೇಶ, ಅಲ್ಲಾವೊದ್ದಿನ್ ಅನ್ಸಾರಿ ಸೇರಿ ಇತರರು ಇದ್ದರು.