ಮಂಜುನಾಥ ಜಮಾದಾರ ಸೇರಿ ಹಲವರಿಗೆ ಸಮತಾ ಪ್ರಶಸ್ತಿ ಪ್ರಧಾನ
ಮಂಜುನಾಥ ಜಮಾದಾರ ಸೇರಿ ಹಲವರಿಗೆ ಸಮತಾ ಪ್ರಶಸ್ತಿ ಪ್ರಧಾನ
ಕಲಬುರಗಿ : ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ನೆತೃತ್ವದಲ್ಲಿ 68ನೇ ಧಮ್ಮಚಕ್ರ ಪರಿವರ್ತನ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸಮತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೇಯರ್ ಯಲ್ಲಪ್ಪ ನಾಯಿಕೊಡಿ ಕಾರ್ಯಕ್ರಮ ಚಾಲನೆ ನೀಡಿದರು. ಸಂಜೀವ ಟಿ.ಮಾಲೆ ಅಧ್ಯಕ್ಷತೆ ವಹಿಸುವರು, ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಭಂತೆ ಧಮ್ಮದೀಪ ವಹಿಸಿದರು. ಚಿಂತಕ ಅನೀಲ ಟೆಂಗಳಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪರಾವ ಭಾವಿಮನಿ, ಗೀತಾ ಭರಣ , ಪೃಥ್ವಿರಾಜ, ಜೆ.ಶಂಕರ ಕೊಪ್ಪಳ, ರಾಮಚಂದ್ರ ಮೇಲಮನಿ, ಪರಶುರಾಮ ಅರೋಳ್ಳಿ, ಎಂಎನ್ ಸುಗಂಧಿ, ಈರಣ್ಣಾ ಜಾನೆ, ಮಲ್ಲಿಕಾರ್ಜುನ ಉದಯಕರ್, ಕತಲಪ್ಪ ಕಟ್ಟಿಮನಿ, ರಾಜು ಹರಸೂರ, ಸೇರಿದಂತೆ ಹಲವರು ಇದ್ದರು.
ಪರ್ತಕರ್ತ ಅವಿನಾಶ ದೋಡಮನಿ, ರಾಜು ಧುಮನಸೂರ ಇವರಿಗೆ ವಿಶೆಷ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಡಾ. ರಾಜಶೇಖರ ಮಾಂಗ (ಸಾಹಿತ್ಯ ಕ್ಷೇತ್ರ), ಮಂಜುನಾಥ ಜಮಾದಾರ (ಪತ್ರಿಕಾ ಛಾಯಾಗ್ರಾಹಕರು ಮಾಧ್ಯಮ ಕ್ಷೇತ್ರ), ಬಸವರಾಜ ಮೇತ್ರಿ ಸಮಾಜ (ಸೇವೆ ಕ್ಷೇತ್ರ), ಛಾಯಾ ಎಸ್. ಎಕಲೂರೆ (ಸಮಾಜ ಸೇವೆ ಕ್ಷೇತ್ರ), ಮಾಣ ಕರಾವ ಗುಲಗುಂಜಿ (ವಕೀಲ ವೃತ್ತಿ ಕ್ಷೇತ್ರ), ಸಂಜೀವಕುಮಾರ ಜೋಗ (ನೋಟರಿ ಮತ್ತು ವಕೀಲ ವೃತ್ತಿ ಕ್ಷೇತ್ರ), ರವಿಂದ್ರನಾಥ ಮೋಘಾ (ಶಿಕ್ಷಣ ಕ್ಷೇತ್ರ), ಶಿವಲಿಂಗಮ್ಮ ಸಾವಳಗಿ (ಬಿಸಿಯೂಟ ನೌಕರರ ಕ್ಷೇತ್ರ), ವಿಜಯಕುಮಾರ ಉದ್ದಾ (ಕಟ್ಟಡ ಕೂಲಿಕಾರ್ಮಿಕ ಕ್ಷೇತ್ರ), ಮಲ್ಲು ನಂದೂರ (ಪೌರ ಕಾರ್ಮಿಕರ ಕ್ಷೇತ್ರ), ಮಲ್ಲಿಕಾರ್ಜುನ ಸಿಂಗೆ (ನಿವೃತ್ತ ಕೇಂದ್ರ ಸರಕಾರ ಅಧಿಕಾರಿಗಳ ಕ್ಷೇತ್ರ), ಸೋಮಶೇಖರ ಮಾಳಗೆ (ಡಾಟಾ ಜಲ ಸಂಪನ್ಮೂಲ ಕ್ಷೇತ್ರ), ಸಿದ್ದಾರ್ಥ ಜಿ. ಕಣಮೂಸ್ (ನೃತ್ಯ ಕಲಾ ಕ್ಷೇತ್ರ) ಇವರಿಗೆ ಸಮತಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.