ಕಂದಕೂರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಬಾಲ ಮೇಳ.
(ಗುರುಮಠಕಲ್ ತಾಲೂಕ ವರದಿಗಾರರು :ಭೀಮರಾಯ ಯಲ್ಹೇರಿ)
ಕಂದಕೂರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಬಾಲ ಮೇಳ.
ಅಂಗನವಾಡಿ ಕಾರ್ಯಕರ್ತರು, ಕಾರ್ಯಕರ್ತರು ಅಲ್ಲ ಶಿಕ್ಷಕಿಯರು - ಡಾ. ಸಿದ್ದಲಿಂಗ ರೆಡ್ಡಿ ಕಂದುಕೂರ.
ಯಾದಗಿರ/ಗುರುಮಿಟ್ಕಲ್ : ಕಂದಕೂರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಚಿನ್ನರ ಮೇಳವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಜೀಂ ಪ್ರೇಮ್ ಜೀ ಫೌಂಡೇಶನ್ ಹಾಗೂ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಸಂಘದ ಸಂಯೋಗದೊಂದಿಗೆ ಏರ್ಪಡಿಸಲಾಗಿಯಿತು,ಬಾಲ ಮೇಳ ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕರು ಮತ್ತು ಅಂಗನವಾಡಿ ಮಕ್ಕಳೊಂದಿಗೆ, ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಡಾ. ಸಿದ್ದಲಿಂಗ ರೆಡ್ಡಿ ಕಂದುಕೂರ,
ಮಾತನಾಡಿ ಅಂಗನವಾಡಿ ಮಟ್ಟದಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕವಾಗಿ ಸದೃಢಗೊಳ್ಳಲು, ಗರ್ಭಿಣಿಯರ ಆರೋಗ್ಯದಿಂದಿರಲು ಅಂಗನವಾಡಿ ಶಿಕ್ಷಕಿಯರ ಪಾತ್ರ, ಮತ್ತು ಅವರ ಕಾರ್ಯ ವೈಕರಿಯನ್ನು ಪ್ರಸಂಶಿಸಿದರು, ಈ ಒಂದು ಸಂದರ್ಭದಲ್ಲಿ ಜಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಮೊಗದಂಪುರ್, ಅಜೀಮ್ ಪ್ರೇಮ್ ಜಿ ಫೌಂಡೇಶನನ ಸಚಿನ್, ಧರ್ಮಸ್ಥಳ ಸಂಘದ ವತಿಯಿಂದ ಕು.ಸುಪ್ರಿಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗಂಗೂಬಾಯಿ ಭಾಗವಹಿಸಿದ್ದರು .