ಅರಿವು ಶಿಕ್ಷಣ ಕೇಂದ್ರದಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ
ಅರಿವು ಶಿಕ್ಷಣ ಕೇಂದ್ರದಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ
ಅಳಂದ : ಕಿಣ್ಣಿಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೆಂದ್ರ ದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು . ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಅವಿನಾಶ ದೇವನೂರ ಹಾಗೂ ಲಕ್ಷ್ಮಿಪುತ್ರ ಕೋರಳ್ಳಿ ವಹಿಸಿದರು ಅಧ್ಯಕ್ಷತೆ ವಹಿಸಿದ ಡಾ.ಧರ್ಮರಾಜ ಶ್ರೀಂಗೆರಿ ರವರು ಮಾತನಾಡಿ ಪ್ರತಿಯೊಬ್ಬರು ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಅರ್ಥೈಸಿಕೊಳ್ಳಬೇಕು ಸಂವಿಧಾನ ಈ ದೇಶ ನಡೆಸುವ ಗ್ರಂಥ ಎಂದು ನುಡಿದರು.ಬಸವರಾಜ ಶ್ರೀಂಗೇರಿ ಮಾತನಾಡಿ ಸಂವಿಧಾನದ ಮಹತ್ವ , ಪ್ರಸ್ತುತ ಸಂದರ್ಭದಲ್ಲಿ ಸಮಸ್ಯೆಗಳ ಕುರಿತು ಮಾತನಾಡಿದರು , ಮಹಾದೇವ ಕಾಂಬಳೆ ರವರು ಮಕ್ಕಳಿಗೆ ನೋಟ್ ಬುಕ್ ಹಾಗೂ ಪೇನ್ನುಗಳನ್ನು ಬಹುಮಾನ ರೂಪದಲ್ಲಿ ನಿಡಿದರು. ರವಿಕಾಂತ ಬಜೆನ, ವಿಕ್ರಾಂತ ಶ್ರೀಂಗೇರಿ,ಅಮರ ಹಿರಿನಾಯಕ, ಕೈಲಾಸ ಹಿರಿನಾಯಕ, ಅರಿವು ಶಿಕ್ಷಣ ಕೆಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಣಮಂತ ಚಿಂಚೋಳಿ ನಿರೂಪಿಸಿದರು ಮಲ್ಲಿಕಾರ್ಜುನ ಶ್ರೀಂಗೇರಿ ವಂದಿಸಿದರು.