ಮಾಹಿತಿ ಹಕ್ಕುಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ

ಮಾಹಿತಿ ಹಕ್ಕುಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ

ಮಾಹಿತಿ ಹಕ್ಕುಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ 

ಕಲಬುರಗಿ: ಅ.27 ಕರ್ನಾಟಕ ಮಾಹಿತಿಆಯೋಗ ಜಾರಿಗೆ ಬಂದ ನಂತರ ಒಂದಿಷ್ಟು ಭ್ರಷ್ಟಾಚಾರ ಕಡಿಮೆಯಾಗುತ್ತಿದೆ.

ಈ ವಿಚಾರ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರವಿವಾರ ಮಾಹಿತಿ ಆಯೋಗ ಕಲಬುರಗಿ ಪೀಠ ಆಯೋಜಿಸಿದ್ದ ಮಾಹಿತಿ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಕಲಬುರಗಿ ಪೀಠವನ್ನು 2019 ರಲ್ಲಿ ಸ್ಥಾಪನೆಯಾಯಿತು. 10 ಸಾವಿರ ಪ್ರಕರಣಗಳಲ್ಲಿ , 3 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.

ಪೀಠದಲ್ಲಿನ ಖಾಲಿ ಇರುವ ಹುದ್ದೆಗಳನ್ನು 371 ಜಿ ಅಡಿ ಭರ್ತಿ ಮಾಡಬೇಕಾಗಿದೆ. ಈ ಹುದ್ದೆಗಳು ತುಂಬಿದ್ದಲ್ಲಿ ಕೆಲಸ ಮಾಡುಲು ಅನುಕೂಲವಾಗುತ್ತದೆ ಎಂದರು.

 'ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಮಾಧ್ಯಮಗಳು ಓದುಗರ, ವೀಕ್ಷಕರ, ಕೇಳುಗರ ಪರವಾಗಿ ಕೆಲಸ ಮಾಡಬೇಕು' ಎಂದು ಲೇಖಕ ಶ್ರೀನಿವಾಸ ಸಿರನೂರಕರ್ ಹೇಳಿದರು. 

ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಜಗನಾಥ ಹಲಿಂಗೆ, ಗ್ರಾಹಕರ ವೇದಿಕೆ ಸಂಘದ ಅಧ್ಯಕ್ಷೆ ಮಾಲತಿ ರೇಷ್ಮೆ , ಪ್ರಮುಖರಾದ ದೀಪಕ ಗಾಲಾ, ಶೇಖ್ ಶಫಿ ಅಹಮದ್ 

ಶ್ರೀಮತಿ. ಸವಿತಾ ಗಿರಿ, ನ್ಯಾಯವಾದಿ ಜೇನವೆರಿ ವಿನೋದಕುಮಾರ, ಮಲ್ಲಿಕಾರ್ಜುನ ಸಿಂಪಿ, ವಿನೋದ, ಶಿವಲಿಂಗಪ್ಪಾ ಅಷ್ಟಗಿ, ಸಂತೋಷ ಗುರಮೀಟಕಲ, ಸದಾಶಿವ ಎಲ್ಗೊಡ್, ಈರಣ್ಣ ಝಲಕಿ ಇತರರು ಉಪಸ್ಥಿತರಿದ್ದರು ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪಧಾದಿಕಾರಿಗಳು ಸೇರಿದಂತೆ ಆರ್‌ಟಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.