ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ
ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ
ಚಿಂಚೋಳಿ: ಸ್ವಾಮಿ ವಿವೇಕಾನಂದರ162ನೇ ಜಯಂತೋತ್ಸವದ ಪ್ರಯುಕ್ತ ತಾಲೂಕಿನ ದೇಗಲಮಡಿ ಗ್ರಾಮದ ಸರಕಾರಿ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಬುರಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಉಚಿತ 240 ಬ್ಯಾಗ ವಿತರಣೆ ಮಾಡಲಾಯಿತು ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸಂಘಟನ ಕಾರ್ಯದರ್ಶಿ ಅವಿನಾಶ ಗೊಸೂಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಂಚಾಲಕ ಮಂಜುನಾಥ ಕೊಣ್ಣೂರ ಮಾತನಾಡಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ ಕಳೆದ 70 ವರ್ಷಗಳಿಂದ ಹಲವು ಕಾರ್ಯಕ್ರಮಗಳ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭಾಸಕ್ಕೆ ನೆರೆವು ನೀಡಲಾಗುತ್ತಿದೆ. ಮತ್ತು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಚಿಕ್ಕಪತಿ, ಎಸ್. ಎಫ್. ಐ ಜಿಲ್ಲಾ ಪ್ರಮುಖ ಶ್ರವಣ ಜಳಕಿ, ಪರಿಷತ್ತಿನ ಹಿರಿಯ ಕಾರ್ಯಕರ್ತ ಕೈಲಾಸ ಪಾಟೀಲ, ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷರಾದ ಸಿದ್ದು ಉಡಗಿ, ಸಂಘಟನ ಕಾರ್ಯದರ್ಶಿ ಅವಿನಾಶ ಗೋಸುಲ, ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ರಾಜಕುಮಾರ, ನಾಗರೆಡ್ಡಿ ಪಾಟೀಲ, ಅಶೋಕ, ಬಸವರಾಜ ಪೂಜಾರಿ, ಶಿಕ್ಷಕಿ ಮೀನಾಕ್ಷಿ, ಗುಂಡಮ್ಮ, ಬಾನುಮತಿ, ಪ್ರತಿಭಾ, ಫಿರೋಜಾ ಬೇಗಂ, ಮಾಣಿಕೇಶ್ವರಿ, ರಂಗನಾಥ ಎಂ ಮುತ್ತಂಗಿ, ಶಾಮರಾವ ಹೊಸಮನಿ, ಪ್ರದೀಪ್ ಪಾಟೀಲ ಗೌಡನೋರ, ಬಸವರಾಜ ಪಾಟೀಲ ಅಲ್ಲಾಪುರ, ವಿನೋದಮೂಲಗಿ, ಶಿವಶರಣ ಚಂದಿಮನಿ, ಚಂದು ಪಾಟೀಲ ಅಲ್ಲಾಪುರ, ಸಂಜೀವಕುಮಾರ ತಾದಲಾಪುರ ಅವರು ಉಪಸ್ಥಿತರಿದ್ದರು.