ಗುಲ್ಬರ್ಗ ವಿ.ವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಆರಂಭಕ್ಕೆ ಪ್ರಯತ್ನ: ಜಗದೇವ ಗುತ್ತೇದಾರ್

ಗುಲ್ಬರ್ಗ ವಿ.ವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಆರಂಭಕ್ಕೆ ಪ್ರಯತ್ನ: ಜಗದೇವ ಗುತ್ತೇದಾರ್

ಗುಲ್ಬರ್ಗ ವಿ.ವಿಯಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಆರಂಭಕ್ಕೆ ಪ್ರಯತ್ನ: ಜಗದೇವ ಗುತ್ತೇದಾರ್

ಕಲಬುರಗಿ: ರಾಜ್ಯ ಸರಕಾರದ ಈ ವರ್ಷದ ಮುಂಗಡಪತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಬೇಕೆಂದು ಮುಖ್ಯಮಂತ್ರಿ ಗಳಿಗೆ ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ತಿಳಿಸಿದರು.

   ಕಲಬುರ್ಗಿಯಲ್ಲಿ ಜನವರಿ 10 ರಂದು ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಮತ್ತು ಸಮಾಜದ ಯುವ ಮುಖಂಡರಾದ ಹರ್ಷಾನಂದ ಗುತ್ತೇದಾರ್ ನೇತೃತ್ವದ ನಿಯೋಗದ ಮನವಿಯನ್ನು ಸ್ವೀಕರಿಸಿ ಈಗಾಗಲೇ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯ ಸರಕಾರಕ್ಕೆ ಮಂಡಿಸಿದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಜಗದೇವ ಗುತ್ತೇದಾರ್ ತಿಳಿಸಿದರು. ವಿಶ್ವವಿದ್ಯಾಲಯದಿಂದ 2018ರಲ್ಲಿ ಪೀಠದ ಪ್ರಸ್ತಾವನೆ ಆರಂಭಗೊಂಡಿದ್ದು 2019ರಲ್ಲಿ ಕುಲ ಸಚಿವರು ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿ 5 ವರ್ಷ ಕಳೆದರೂ ಯಾವುದೇ ಪ್ರಗತಿ ಹೊಂದಿರದಿರುವುದರಿಂದ ಈ ಬಾರಿಯ ಬಂಗಡಪತ್ರದಲ್ಲಿ ಅಧ್ಯಯನ ಪೀಠ ಆರಂಭಿಸಲು ಘೋಷಣೆ ಮಾಡಬೇಕು ಹಾಗೂ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸಲ್ಲಿಸಿದ ಮನವಿಗೆ ಸ್ಪಂದಿಸಿ ಕೂಡಲೇ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರಸ್ತಾವನೆಯ ವಿಷಯವನ್ನು ಗಮನಕ್ಕೆ ತರಲಾಗುವುದು ಮತ್ತು ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು. ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ ಒಬ್ಬನೇ ದೇವರು ಎಂಬ ವಿಶ್ವ ಸಂದೇಶ ಸಾರಿದ ಮಹಾತ್ಮನಾಗಿದ್ದು ಶರಣರ ಭೂಮಿಯಲ್ಲಿ ಅವರ ಹೆಸರಿನ ಪೀಠ ಆರಂಭಿಸುವ ಪ್ರಸ್ತಾಪ ಅತ್ಯಂತ ಅಗತ್ಯವಾಗಿದ್ದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ನಾರಾಯಣ ಗುರುಗಳ ತತ್ವದರ್ಶನ ಮೆಚ್ಚಿಕೊಂಡು ಅಳವಡಿಸಿಕೊಂಡವರು ಇದನ್ನು ಅವರ ಗಮನಕ್ಕೂ ತರಲಾಗುವುದು ಎಂದು ಗುತ್ತೇದಾರ್ ಹೇಳಿದರು. 

10 ಲಕ್ಷ ರೂ. ಘೋಷಣೆ :

ಈಡಿಗ ಸಮಾಜದವರು ಕುಲಗಸುಬು ಕಳೆದುಕೊಂಡ ಬಗ್ಗೆ ಸರಕಾರ ಕೂಡ ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆದಿದೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಪುನರ್ ವಸತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾಪವನ್ನು ಸೂಚಿಸಿದ್ದು ಮುಖ್ಯಮಂತ್ರಿಗಳ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಜೊತೆಗೆ ಇನ್ನಿತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ನಾಯಕರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ ಎಂದರು. ಈಡಿಗ ಸಮುದಾಯದ ನಿವೇಶನ ಸ್ಥಳ ಕಲ್ಬುರ್ಗಿಯ ಆರ್ ಟಿ ಓ ಕಚೇರಿಯ ಹಿಂಭಾಗದಲ್ಲಿದ್ದು ಆವರಣ ಗೋಡೆ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಖಾತೆ ಸಚಿವರಾದ ಬೈರತಿ ಸುರೇಶ್ ಅವರಿಗೆ ಮನವಿ ಮಾಡಿ ಮಂಜೂರಾತಿ ಸಿಕ್ಕಿದೆ ಚಿತಗಾರ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಹಿಂದುಳಿದ ಈಡಿಗ ಸಮುದಾಯದವರ ಶ್ರೀ ಅಭಿವೃದ್ಧಿಗೆ ಸರಕಾರದ ಎಲ್ಲಾ ನೆರವುಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಗತ್ತಿಗುತ್ತೇದಾರ ತಿಳಿಸಿದರು.

  ನಿಯೋಗದಲ್ಲಿ ವೆಂಕಟೇಶ್ ಕಡೇಚೂರ್, ಹರ್ಷಾನಂದ ಗುತ್ತೇದಾರ್, ಡಾ. ಸದಾನಂದ ಪೆರ್ಲ, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ತಿಮ್ಮಪ್ಪ ಗಂಗಾವತಿ, ಅಂಬಯ್ಯ ಗುತ್ತೇದಾರ್ ಶಾಬಾದಿ, ಹನುಮಯ್ಯ ಆಲೂರು, ಚಂದ್ರಕಾಂತ್ ಗುತ್ತೇದಾರ್ ಮುಧೋಳ್, ರುಕ್ಮಯ್ಯ ಗುತ್ತೇದಾರ್ ಗೊಬ್ಬುರುವಾಡಗಿ, ಮಲ್ಲಯ್ಯ ಕುಕ್ಕುಂದಿ, ಬಾಬು ಶೇಟ್ ಚಿತ್ತಾಪುರ ಇದ್ದರು.