ವರದಶಂಕರ್ ಶೆಟ್ಟಿ ಅವರಿಗೆ ಗೌರವ ಸನ್ಮಾನ
ವರದಶಂಕರ್ ಶೆಟ್ಟಿ ಅವರಿಗೆ ಗೌರವ ಸನ್ಮಾನ
ಕಲಬುರಗಿ : ಮಹಾನಗರದ ಭಾರತೀಯ ಜನತಾ ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ್ ಅವರ ಆದೇಶದ ಮೇರೆಗೆ ಕಲಬುರಗಿ ಉತ್ತರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ವರದಶಂಕರ್ ಶೆಟ್ಟಿ ಅವರಿಗೆ ಹರಿ ಓಂ ಲಿಗಲ್ ಸೊಲ್ಯೂಷನ್ಸ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಚಂದ್ರಕಾಂತ್ ಆರ್ ಕಾಳಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾರ್ವಜನಿಕ ಕಾನೂನು ಕಾಯ್ದೆ ವಿಭಾಗದ ಅಧ್ಯಕ್ಷ ವೀರಣ್ಣ ಎಂ ಬೇಲೂರೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರವಿ ಮಹಾಗಾವ್, ಅಶೋಕ್ ಇಂಡಿ, ಶಾಂತು ಸುಗುರ್, ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಗಂಗಾಧರ್ ಬಿಲಗುಂದಿ, ವೀರೇಶ್ ನಿಲಾ, ದಯಾನಂದ ಕಬಾಡೆ, ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷ ಅನಿಲ್ ಬೆಳಕೇರಿ ಇದ್ದರು.