ವೃದ್ಧರಿಗೆ ಹೊದಿಕೆ ವಿತರಣೆ ಸಾಮಾಜಿಕ ಸೇವೆ ಶ್ಲಾಘನಿಯ : ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ

ವೃದ್ಧರಿಗೆ ಹೊದಿಕೆ ವಿತರಣೆ ಸಾಮಾಜಿಕ ಸೇವೆ  ಶ್ಲಾಘನಿಯ : ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ

ವೃದ್ಧರಿಗೆ ಹೊದಿಕೆ ವಿತರಣೆ ಸಾಮಾಜಿಕ ಸೇವೆ ಶ್ಲಾಘನಿಯ : ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ

ಚಿಂಚೋಳಿ : ಕ್ರಿಸ್ ಮಸ್ ಹಬ್ಬದ ಆಚರಣೆ ನಿಮಿತ್ಯವಾಗಿ ಚಂದಾಪೂರದ ಸಾರಾ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯು ವೃದ್ಧಾವ್ಯವಸ್ಥೆಯಲ್ಲಿರುವ ಹಿರಿಯ ನಾಗರಿಕರಿಗೆ ಉಚಿತವಾಗಿ ಹೊದಿಕೆ ವಿತರಿಸುವ ಕಾರ್ಯಕ್ರಮವನ್ನು ಚಂದಾಪೂರದ ವಿದ್ಯಾ ನಗರದಲ್ಲಿ ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಮುಖ್ಯಅಧಿಕಾರಿ ನಿಂಗಮ್ಮ ಬಿರಾದಾರ ಅವರು, ಸಾರಾ ಚಾರಿಟೇಬಲ್ ಸಂಸ್ಥೆ ಬಡ ಕುಟುಂಬದ ವೃದ್ಧರಿಗೆ ಹೊದಿಕೆಗಳು ವಿತರಿಸುವುದರ ಮೂಲಕ ದೇವರು ಮೆಚ್ಚುವಂತಹ ಸಾಮಾಜಿಕ ಕಾರ್ಯ ನಡೆಸಿರುವುದು ಶ್ಲಾಘನಿಯವಾದದ್ದು. ಹಬ್ಬದ ಪ್ರಯುಕ್ತವಾಗಿ ಪ್ರತಿ ವರ್ಷ ಬಡ ಕುಟುಂಬಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಟ್ರಸ್ಟ್ ನ ವೇದಿಕೆಯಿಂದ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಒಳ್ಳೆಯ ಕೆಲಸ ಮಾಡುತ್ತಿರುವ ಸಂಸ್ಥೆಗೆ ಯೇಸುವಿನ ಕೃಪೆ ಇರಲಿದೆ. ಕ್ರಿಸ್ ಮಸ್ ಹಬ್ಬವು ಎಲ್ಲರಿಗೂ ಸುಖ, ಸಮೃದ್ಧಿ, ಶಾಂತಿ, ಸಂತೋಷ ಕರುಣಿಸಲ್ಲಿ ಎಂದು ಪ್ರಾರ್ಥಿಸಿದರು.

ಮುಖಂಡ ಜಗನ್ನಾಥ ಕಟ್ಟಿ ಮಾತನಾಡಿ, ಯೇಸು ಕ್ರಿಸ್ತನನ್ನು ಆರಾಧನೆಯಲ್ಲಿ ತೊಡಗಿಕೊಂಡವರಿಗೆ ಎಂದಿಗೂ ಕೈಬಿಡುವುದಿಲ್ಲ. ಪ್ರತಿಯೊಬ್ಬರು ಯೇಸುವಿನ ಸನ್ನಿಧಿಯಲ್ಲಿ ಬಂದು ಭಕ್ತಿ ಪೂರ್ವಕ ಆರಾಧನೆಯಲ್ಲಿ ತೊಡಿಗಿಸಿಕೊಂಡು ದೇವರ ಮೆಚ್ಚುವಂತಹ ಸಾಮಾಜಿಕ ಕಾರ್ಯಕ್ರಮಗಳು ಮಾಡಬೇಕೆಂದರು.

ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ನಂದಿಕೇಶ್ವರ ಅವರು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಪ್ರಭು ಯೇಸುವಿನ ಆಋಆಧನೆಯ ಭಕ್ತರು, ವಯೋವೃದ್ಧರು ಉಪಸ್ಥಿತರಿದರು.