ಪುಸ್ತಕ ಜ್ಞಾನದಾಹವನ್ನು ತಣಿಸುವ ಸಾಧನ: ಶಿವರಾಜ ಪಾಟೀಲ

ಪುಸ್ತಕ ಜ್ಞಾನದಾಹವನ್ನು ತಣಿಸುವ ಸಾಧನ: ಶಿವರಾಜ ಪಾಟೀಲ
ಕಲಬುರಗಿ: ಪುಸ್ತಕ ಓದುವುದು ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಜ್ಞಾನ ವೃದ್ಧಿಗಿರುವ ದಾರಿ. ಪ್ರತಿಯೊಬ್ಬ ಓದುಗನ ಅಭಿರುಚಿ ಭಿನ್ನವಾಗಿರಬಹುದು. ಆದರೆ ಆ ಓದು ಆತನ ಜ್ಞಾನದಾಹವನ್ನು ತಣಿಸುತ್ತದೆ ಎಂದು ಸಲಹಾ ಸಮಿತಿ ಹಿರಿಯ ಸದಸ್ಯರಾದ ಪ್ರೊ.ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ಸಿದ್ದಲಿಂಗೇಶ್ವರ ಪ್ರಕಾಶನದ ಬುಕ್ ಮಾಲ್ ಎದುರುಗಡೆ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಸಂಭ್ರಮದ ಸವಿ ನೆನಪಿಗಾಗಿ 15 ದಿವಸ ಹಮ್ಮಿಕೊಂಡ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ. ಒಂದೊAದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥಾ ಮತ್ತು ಜ್ಞಾನ ಹಂದರವನ್ನು ಒಳಗೊಂಡಿದ್ದು, ಬೇರೆ ಬೇರೆ ಪ್ರಪಂಚದ ಅರಿವು ಮೂಡಿ ಸುತ್ತದೆ. ಒಟ್ಟಿನಲ್ಲಿ ಪುಸ್ತಕಗಳು ಕೇವಲ ಜ್ಞಾನದ ಗುಚ್ಚವಾಗಿರದೆ ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಇವೆಲ್ಲವನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ ಎಂದರು.
ಸಿದ್ದಲಿಂಗೇಶ್ವರ ಬುಕ್ ಮಾಲ್ ಎದುರುಗಡೆ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ನಮ್ಮ ಪ್ರಕಾಶನದಿಂದ ಪ್ರಕಟಗೊಂಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಥೆ, ಕವನ, ನಾಟಕ, ಪ್ರಬಂಧ, ವಿಮರ್ಶೆ,ಕೃತಿಗಳಿಗೆ 50% ಪ್ರತಿಶತ ಮತ್ತು ಪಠ್ಯ ಹಾಗೂ ಸ್ಪರ್ಧಾತ್ಮಕ,ಪುಸ್ತಕಗಳಿಗೆ 20% ಪ್ರತಿಶತ 15 ದಿನಗಳ ಕಾಲ ರಿಯಾಯಿತಿ ದರದಲ್ಲಿ ಮರಾಟಕ್ಕೆ ಲಭ್ಯವಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಬಸವರಾಜ ಕೊನೆಕ್ ಅವರು ವಿನಂತಿಸಿಕೊAಡರು. ಇದೇ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನ ಸಲಹಾ ಸಮಿತಿ ಸದಸ್ಯರಾದ ಪ್ರೊ.ಶಿವರಾಜ ಪಾಟೀಲ,ಡಾ. ಜಯದೇವಿ ಗಾಯಕವಾಡ, ಡಾ. ಚಿ.ಸಿ. ನಿಂಗಣ್ಣ, ಡಾ. ಕಾವ್ಯಶ್ರೀ ಮಹಾಗಾoವಕರ್, ಡಾ. ಶರಣಬಸಪ್ಪ ವಡ್ಡನಕೇರಿ,ಪ್ರಕಾಶಕರಾದ ಸಿದ್ದಲಿಂಗ ಕೊನೇಕ್,ಶರಣು ಕೊನೇಕ್, ಸೇರಿದಂತೆ ಡಾ. ಕಲ್ಯಾಣರಾವ ಪಾಟೀಲ, ಡಾ.ಶೀಲಾದೇವಿ ಬಿರಾದಾರ್ ಮೊದಲಾದವರು ಉಪಸ್ಥಿತರಿದ್ದರು.