ಭಾರತೀಯ ಸಂತ ವಿವೇಕರು- ಡಾ.ಪೆರ್ಲ ಸದಾನಂದ
ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಸರಣಿ ಉಪನ್ಯಾಸ ಉದ್ಘಾಟನೆ: ಅನನ್ಯ ಕಾಲೇಜಿನಲ್ಲಿ....
ಭಾರತೀಯ ಸಂತ ವಿವೇಕರು- ಡಾ.ಪೆರ್ಲ ಸದಾನಂದ
ಕಲಬುರಗಿ:ಪ್ರಚಾರಕ್ಕೆ ಮಾತ್ರ ಇರದೇ ವಿಚಾರಗಳನ್ನು ತಲುಪಿಸುವ ಪ್ರಾಂಜ್ವಲ ಮನಸ್ಸಿನಿಂದ ಸಿರಿಗನ್ನಡ ವೇದಿಕೆ ಕಾರ್ಯ ಅನುಕರಣೀಯ
ವಿದ್ಯಾರ್ಥಿಗಳು ಕೇವಲ ಪರೀಕ್ಷೆಯ ದೃಷ್ಟಿಯಿಂದ ಓದುತ್ತಿದ್ದಾರೆ ಅದು ಅನಿವಾರ್ಯವೂ ಇಂದಿನ ಯುವಕರು ಕೇವಲ ಅಂಕಗಳಿಗೆ ಸೀಮಿತವಾಗದೆ ಭಾರತೀಯ ಮಹಾನ್ ಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇಂದಿನ ದಿನ ಅಪೂರ್ವವಾದ ದಿನ ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದಲ್ಲಿ ಭಾರತೀಯ ವಿಚಾರಗಳು, ಭಾರತೀಯ ಸಂಸ್ಕೃತಿಯ ಅನಾವರಣ ಮಾಡುತ್ತಾರೆ. ಇದರಿಂದ ಈಡೀ ಜಗತ್ತಿಗೆ ಭಾರತದ ಜೀವನ ಕ್ರಮವನ್ನು ತಿಳಿಸುತ್ತದೆ.
ಸಹೋದರತೆಯ ಭಾವ ವಿಶ್ವ ಭ್ರಾತೃತ್ವದ ಸಂದೇಶ ಕೊಟ್ಟ ಸರ್ವಶ್ರೇಷ್ಠ ಭಾರತೀಯ ಸಂತ ಎಂದೇ ಹೆಸರು ಪಡೆದವರು ವಿವೇಕಾನಂದರು ಎಂದು ಸಾಹಿತಿ ಮತ್ತು ವಿಶ್ರಾಂತ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಅಭಿಮತ ವ್ಯಕ್ತಪಡಿಸಿದರು
ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾಘಟಕದ ಆಶ್ರಯದಲ್ಲಿ ಚಿಕಾಗೋ ಭಾಷಣದ ೧೩೧ ನೆಯ ಸ್ಮರಣೆಗಾಗಿ ಕಾಲೇ ಜಿನಿಂದ ಕಾಲೇಜಿಗೆ ವಿವೇಕಾನಂದ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಸಂತತತ್ವವನ್ನು ಪ್ರಸಾರ ಮಾಡಲು ಚಿಕಾಗೊ ಸಮ್ಮೇಳನಕ್ಕೆ ಹೋಗಲು ಇವರಿಗೆ ಬಡತನ ಮಾಡುತ್ತದೆ ಇದರಿಂದ ಅವರು ಆ ಸಮ್ಮೇಳನದಲ್ಲಿ ಭಾರತದ ಬಡವರ ಕುರಿತು ಮಾತನಾಡುತ್ತಾರೆ. ಹಣದ ಕೊರತೆ ಕಾಡಿದರು ಅವರು ಎದೆಗುಂದದೆ ಏನಾದರು ಮಾಡೋಣವೆಂದು ಮುಂದೆ ಸಾಗಿರುವುದು ಇಂದಿನ ಯುವಕರಿಗೆ ಮಾದರಿಯಾಗಬೇಕಾಗಿದೆ. ಇವರ ಒಳ್ಳೆಯ ಗುಣಕ್ಕೆ ಹಲವು ಕಡೆಯಿಂದ ಸಹಾಯ ಸಹಕಾರ ದೊರೆಯುತ್ತದೆ. ಅನೇಕ ವಿದೇಶಿಯರ ಸಹಾಯ ದೊರೆಯಲೂ ಅವರಲ್ಲಿ ಇರುವ ಸಂತತನದ ವಿಚಾರಗಳು ಎಂದರೆ ತಪ್ಪಾಗದು. ಸಹೋದರತೆಯ ಭಾವ ವಿಶ್ವ ಭ್ರಾತೃತ್ವದ ಸಂದೇಶ ಕೊಟ್ಟ ಸರ್ವಶ್ರೇಷ್ಠ ಭಾರತೀಯ ಸಂತ ಎಂದೇ ಹೆಸರು ಪಡೆದವರು ವಿವೇಕಾನಂದರು ಎಂದರು
ಸಹೋದರ ಸಹೋದರಿ ಎಂಬ ಪದಗಳ ಮಹತ್ವ ವಿದೇಶಿಯರಿಗೆ ಮೊದಲು ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ವಿದೇಶಿ ಯುವತಿಯ ಮದುವೆಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರು ಇದು ಭಾರತದ ಶ್ರೇಷ್ಠತೆ ಎಂದರು. ಹೆಸರಿಗೆ ಅನ್ವಯವಾದಂತೆ ಇದ್ದವರು. ಯುವಕರಿಗೆ ಸ್ಪೂರ್ತಿದಾಯಕ ವಾದ ನುಡಿಗಳನ್ನು ಹೇಳಿದರು. ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ. ವಿದ್ಯಾರ್ಥಿಗಳು ದೊಡ್ಡ ಕನಸುಗಳು ಕಾಣಬೇಕು. ಹೇಡಿಗಳಾಗಬೇಡಿ ದೈರ್ಯವಂತರಾಗಿ, ಕಾಯಕ ಜೀವಿಗಳಾಗಿ, ಪ್ರಯತ್ನಶೀಲರಾಗಿ ದೇಶ ಕಟ್ಟಲೂ ಅಣಿಗೊಳಿಸಿ ಎಂದರು. ದೇಶಕ್ಕೆ ಸತ್ಯವಂತ, ಚಾರಿತ್ರೈವಂತ ಸಶ್ಯಕ್ತ ಯುವಕರ ಅವಶ್ಯಕತೆ ಇದೆ. ಸಮಾಜದಲ್ಲಿ ಸ್ವಾಭಿಮಾನದ ಗುಣ ಬಿತ್ತಬೇಕಿದೆ ಮೋಸ ವಂಚನೆಯ ಗುಣಗಳನ್ನು ಕಳಚಬೇಕಿದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂಬ ಅಂಶಗಳಿಂದ ಕೂಡಿದ ಭಾಷಣ ವಿವೇಕಾನಂದರು ಮಾಡಿದರು. ಮನುಷ್ಯನ ಮನುಷ್ಯರಂತೆ ಕಾಣಬೇಕು. ಸಹ ಬಾಳ್ವೆಯ ಗುಣವಿರಬೇಕು. ಜಗತ್ತಿಗೆ ಬೇಕಾದ ಮಹಾನ್ ಮನುಷ್ಯ ಸ್ವಾಮಿ ವಿವೇಕಾನಂದ ಎಂದು ಉಪನ್ಯಾಸವನ್ನು ಪತ್ರಕರ್ತ- ಸಾಹಿತಿ ಡಾ.ಶಿವರಂಜನ ಸತ್ಯಂಪೇಟ ನುಡಿದರು.
ಅಧ್ಯಕ್ಷತೆಯನ್ನು ಡಾ.ಶರಣಪ್ಪ ಬಿ.ಹೊನ್ನುಗೆಜ್ಜೆ ವಹಿ ಸಿ ಉತ್ತಮ ಸರಣಿ ಉಪನ್ಯಾಸ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಅವಶ್ಯವೆಂದರು. ವೇದಿಕೆ ಗೌರ ವಾಧ್ಯಕ್ಷ ಡಾ.ಕೆ.ಎಸ್.ಬಂಧು,ಉಪನ್ಯಾಸಕ ಡಾ.ರಾಜಕುಮಾರ ಮಾಳಗೆ ಉಪಸ್ಥಿತಿ. ವೇದಿಕೆ ಜಿಲ್ಲಾ ಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಚಿಕಾಗೋ ಭಾಷಣ ಜಮನ ಸೋರೆಗೊಂ ಡಿದೆ.ಎಲ್ಲಾ ಜಾತಿ,ಮತ,ಧರ್ಮ ಮೀರಿದ ಮಾನವೀ ಯ ಹರಿಕಾರರೆಂದರು. ಸಂಸ್ಥೆ ಕಾರ್ಯ ದರ್ಶಿ ಶ್ರೀಮತಿ ಸುಷ್ಮಾವತಿ ಹೊನ್ನಗೆಜ್ಜೆ, ಡಾ.ಸರಿತಾ ನಿರೂಪಿಸಿದರು ವೇದಿಕೆ ಸಂಘಟನಾ ಕಾರ್ಯದರ್ಶಿ ಡಾಕಪ್ಪ ಮೋತಿ ಲಾಲ ವಂದಿಸಿದರು.