ದೂರದರ್ಶನ ಚಂದನದಲ್ಲಿ ಬಸವರಾಜ್ ಪಾಟೀಲ್ ಸೇಡಂ ಸಂದರ್ಶನ ಜಿ. 11ರಂದು
ದೂರದರ್ಶನ ಚಂದನದಲ್ಲಿ ಬಸವರಾಜ್ ಪಾಟೀಲ್ ಸೇಡಂ ಸಂದರ್ಶನ ಜ. 11ರಂದು
ಕಲಬುರಗಿ : ಭಾರತೀಯ ವಿಕಾಸ ಸಂಗಮದ ಆಶಯದಲ್ಲಿ ಜನವರಿ 29ರಿಂದ ಫೆಬ್ರವರಿ 6 ರ ತನಕ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿ ನಡೆಯಲಿರುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವ ತಯಾರಿಯ ಕುರಿತಾಗಿ ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ್ ಪಾಟೀಲ್ ಸೇಡಂ ಅವರ ಜೊತೆ ನಡೆಸಿದ ಸಂದರ್ಶನವನ್ನು ಜನವರಿ 11ರಂದು ಶನಿವಾರ ಮಧ್ಯಾಹ್ನ 2.30ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದು
ಭಾರತೀಯ ಸಂಸ್ಕೃತಿ ಉತ್ಸವವು ಬೀರನಹಳ್ಳಿಯ 240 ಎಕರೆ ಪ್ರದೇಶದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು ಇದರಲ್ಲಿ ಕೃಷಿ ಲೋಕ, ಜ್ಞಾನಲೋಕ, ಉದ್ಯೋಗ ಲೋಕ, ಕಲಾ ಲೋಕ, ಪುಸ್ತಕ ಪ್ರದರ್ಶನ, ವಿಚಾರಸಂಕಿರಣ ಹೀಗೆ ಹಲವು ವೈಶಿಷ್ಟ್ಯಗಳ ಬಗ್ಗೆ ಮತ್ತು 53ಕ್ಕೂ ಹೆಚ್ಚು ಪದ್ಮಶ್ರೀಪುರಸ್ಕೃತರು ಭಾಗವಹಿಸುವ ಬಗ್ಗೆ ಪೂರ್ಣ ವಿವರ ನೀಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರಿಗೆ ಪೂರ್ಣವಾದ ಮಾಹಿತಿಯನ್ನು ಸಂದರ್ಶನದಲ್ಲಿ ಬಸವರಾಜ ಪಾಟೀಲ್ ಸೇಡಂ ಅವರು ತಿಳಿಸಿದ್ದಾರೆ. ಇವರನ್ನು ಕಲಬುರಗಿ ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರೂಪಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಸಂಗಮೇಶ ಮತ್ತು ಮಲ್ಲಿಕಾರ್ಜುನ್ ಹಾಗೂ ಸಿದ್ದರಾಮ ಕಾರ್ಯಕ್ರಮ ಸಿದ್ಧಪಡಿಸಿದ್ದಾರೆ ಎಂದು ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್. ರುಳಿ ತಿಳಿಸಿದ್ದಾರೆ.