ಟೈಪಿಂಗ್ ದಿನಾಚರಣೆ
ಟೈಪಿಂಗ ದಿನ ಆಚರಣೆ
ಜನವರಿ ೮ ರಂದು ವಿಶ್ವ ಟೈಪಿಂಗ್ ದಿನವೆಂದು ಆಚರಿಸುತ್ತಾರೆ. ಅಂದು ಲಿಖಿತ ಸಂವ್ಹನದ ಮೂಲಕ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳಲು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ದಿನ ಕೆಲವು ಕಡೆ ಸ್ಪೀಡ್ ಟೈಪಿಂಗ್ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ೨೦೧೧ ರಲ್ಲಿ ಮೊದಲ ಬಾರಿಗೆ ಮಲೇಷಿಯಾದಲ್ಲಿ ಟೈಪಿಂಗ್ ಸ್ಪರ್ಧೆ ಏರ್ಪಡಿಸುವ ಮೂಲಕ ವಿಶ್ವ ಟೈಪಿಂಗ್ ದಿನಾಚರಣೆಯನ್ನು ಆಚರಿಸಲಾಯಿತು. ೧೮೦೦ ರ ದಶಕದ ಹಿಂದೆ ಅನೇಕ ಲೇಖಕರು ತಮ್ಮ ಹಸ್ತ ಪ್ರತಿಗಳನ್ನು ಬರೆಯಲು ಟೈಪರೈಟರಗಳನ್ನು ಬಳಸುತಿದ್ದರು. ತದನಂತರ ಮುಂದೆ ibm ಕಂಪನಿಯು ವಿದ್ಯುತ್ ಟೈಪ್ ರೈಟರಗಳನ್ನು ಅಭಿವೃದ್ಧಿ ಪಡಿಸಿತು. ೧೯೮೦ ರ ದಶಕದಲ್ಲಿ ಕಂಪ್ಯೂಟರಗಳ ಯುಗ ಪ್ರಾರಂಭವಾದ ತರುವಾಯ ಟೈಪರೆಟರಗಳು ಹಂತ ಹಂತವಾಗಿ ಮೂಲೆಗುಂಪಾದರೂ ಇನ್ನೂ ಬೆರಳಣಿಕೆ ಅಷ್ಟೇ ಮಾತ್ರ ಉಳಿದಿದ್ದಾರೆ. ಇಂದಿನ ದಿನಮಾನಗಳಲ್ಲಿ ನಾವೆಲ್ಲರೂ ಟೈಪ್ ಮಾಡದೇ ಯಾವುದೇ ಸಂದೇಶಗಳು ಸುದ್ದಿಗಳು ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುವಷ್ಟು ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಪ್ರತಿಯೊಬ್ಬರು ತಮ್ಮ ಫೋನ್ ಗಳ ಮೂಲಕ ಸಂದೇಶ ಸಂವನಗಳನ್ನು ಹಂಚಿಕೊಳ್ಳುತಿದ್ದೇವೆ. ನನ್ನ ಅನಿಸಿಕೆ ನಾನು ಮೊದಲಿಂದಲು ಕೈ ಬರಹದ ಮೂಲಕ ಕವನ, ಲೇಖನ, ಕಥೆಗಳು ಅನೇಕ ಬರಹಗಳನ್ನು ದಿನ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟಣೆಗೆ ಕೊಡುತಿದ್ದೆ ಅವುಗಳಲ್ಲಿ ಕೆಲವು ಸಲ ಪ್ರಕಟವಾಗಿ ಇನ್ನು ಕೆಲವು ಸಲ ಪ್ರಕಟಣೆಗೊಳ್ಳದೆ ಮಾಯವಾಗುತ್ತಿದ್ದಾವು. ಆದರೆ ಇವಾಗ ಆ ಪರಿಸ್ಥಿತಿ ಇಲ್ಲ ನಮ್ಮ ಬರಹಗಳು ನಮ್ಮ ಮೊಬೈಲ್ ನಲ್ಲಿ ಟೈಪಿಸುವ ಮೂಲಕ ಫೇಸ್ ಬುಕ್ ವ್ಹಾಟ್ಸಪ್, ಟ್ವಿಟರ್ ಗಳ ಮೂಲಕ ಕ್ಷಣಾರ್ಧದಲ್ಲಿ ಹಂಚಿಕೊಳ್ಳುತ್ತೇವೆ. ಅದೇ ರೀತಿ ಓದುವವರು ಕೊಡುವ ಒಳ್ಳೆ ಕಾಮೆಂಟ್ (ಅಭಿಪ್ರಾಯ )ಗಳ ಮೂಲಕ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಕಾರಣ ನನ್ನ ಬರಹಕ್ಕೆ ಇನ್ನಷ್ಟು ಬಲ ಸ್ಫೂರ್ತಿ ಸಿಕ್ಕಿದೆ ಅನ್ನುವುದು ನನ್ನ ಭಾವನೆ. ಲೇಖನ ಬರೆಯಲು ಅನುವು ಮಾಡಿಕೊಟ್ಟ ಕಾಯಕವೇ ಕೈಲಾಸ ಸಾಹಿತ ಸಾಹಿತ್ಯಾಸಕ್ತರೆಲ್ಲರಿ ಗೂ ವಿಶ್ವ ಟೈಪಿಂಗ್ ದಿನಾಚರಣೆಯ ಶುಭಾಶಯಗಳು
-ಓಂಕಾರಪಾಟೀಲ ಬೀದರ ಮೊ ೬೩೬೦೪೧೩೯೩೩