ನೆಲದ ಸಾಕ್ಷಿ ಪ್ರಜ್ಞೆ-ಕವಿರಾಜಮಾರ್ಗ: ಡಾ.ಸಿದ್ಧರಾಮ ಹೊನ್ಕಲ್
ನೆಲದ ಸಾಕ್ಷಿ ಪ್ರಜ್ಞೆ-ಕವಿರಾಜಮಾರ್ಗ: ಡಾ.ಸಿದ್ಧರಾಮ ಹೊನ್ಕಲ್
ಓದುವ ಮೂಲಕ ಪಂಪ,ಶರಣರು,ದಾಸರು,ಕವಿಗಳು ಮೊದಲಾದವರು ಸಾಂಸ್ಕೃತಿಕ ಲೋಕ ತೆರೆದವರು.ಕವಿರಾಜಮಾರ್ಗ ಕೃತಿ ನಮ್ಮ ಸಾಹಿತ್ಯ ಸಂಸ್ಕೃತಿಯನ್ನು ಅವಲೋಕಿಸುವುದಾಗಿದೆ.ನೈತಿಕ ರೂಪ ಮೌಲ್ಯವನ್ನು ಚಕೋರ ನಿಮ್ಮ ಜ್ಞಾನ ವಿಸ್ತರಿಸ ಲು ಕವಿರಾಜ ಮಾರ್ಗ ಕೃತಿ ನಮ್ಮ ನೆಲದ ಹೆಮ್ಮೆಯ ಸಾಕ್ಷಿ ಪ್ರಜ್ಞೆ ಎಂದು ಪ್ರಖ್ಯಾತ ಸಾಹಿತಿ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅಭಿಪ್ರಾಯ ಪಟ್ಟರು
ಮಾಡಬೂಳ ಸರಕಾರಿ ಕಿರಿಯ ಮಹಾವಿದ್ಯಾಲಯ ದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಮ್ಮಿಕೊಂಡ ಚಕೋರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದು
ಆಸಕ್ತಿ ಮೂಡಿಸಲಿ ಎಂದು ಕರೆ ನೀಡಿದರು.
ಕವಿರಾಜಮಾರ್ಗ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಅವರು ಕನ್ನಡ ನಾಡಿನ ಮೇರುಗಳು, ಕನ್ನಡ ಸಂಸ್ಕೃತಿ, ಜನ ಜೀವನದ ವಿವರಗಳ ಜೊತೆಗೆ ಅಲಂಕಾರ,ಛಂದಸ್ಸು, ವ್ಯಾಕರಣ ಪರಂಪರೆ ಶಾಸ್ತ್ರ ಕೃತಿಯ ವೈಶಿಷ್ಟ್ಯತೆ ವಿವರಿ ಸಿದರು. ಪ್ರಾಂಶುಪಾಲರಾದ ಪ್ರಭಾವತಿ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ನಮ್ಮ ಕವಿರಾಜಮಾರ್ಗ ಕೃತಿ ನಮ್ಮ ನೆಲದ ಹೆಮ್ಮೆಯ ಸಂಗತಿ. ಅತಿಥಿಗಳು ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಇದೊಂದು ಮಹತ್ವದ ಕಾರ್ಯ ಎಂದರು.
ಸಾಹಿತಿ ಡಾ. ಭವಾನಿ ಚಟ್ನಳ್ಳಿ ಸಾಲೇಹ ಸಿದ್ಧಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಪಿ.ಎಸ್.ಪ್ರಾಥಮಿಕ ಶಾಲೆ ಗಣಪತಿ ಪೂಜಾರ ಪ್ರಾರ್ಥಿಸಿದರು. ಸುರೇಖಾ ಹಿಪ್ಪರಗಿ ಸ್ವಾಗತಿಸಿ ಪರಿಚಯಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಪ್ರಾಸ್ತಾವಿಕ ನುಡಿ ಆಡಿದರು. ಬಸವರಾಜ ಹಿರೇಮಠ ನಿರೂಪಿಸಿದರು ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ವಂದಿಸಿದರು.