8 ರಂದು ಬಸವೇಶ್ವರ ಆಸ್ಪತ್ರೆಯ ವಿವಿಧ ಯೋಜನೆಗಳ ಉದ್ಘಾಟನೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ

8 ರಂದು ಬಸವೇಶ್ವರ ಆಸ್ಪತ್ರೆಯ ವಿವಿಧ ಯೋಜನೆಗಳ ಉದ್ಘಾಟನೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ

 8 ರಂದು ಬಸವೇಶ್ವರ ಆಸ್ಪತ್ರೆಯ ವಿವಿಧ ಯೋಜನೆಗಳ ಉದ್ಘಾಟನೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ

ಕಲಬುರ್ಗಿ: ಬಸವಣ್ಣನವರ ಕಾಯಕವೇ ಕೈಲಾಸ ನಾಣ್ಣುಡಿ ಹಾಗೂ ದಾಸೋಹದ ಕಲ್ಪನೆಯಂತೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯನ್ನು ಸಾರ್ವಕಾಲಿಕವಾಗಿ ತಮ್ಮ ಪರಿಶ್ರಮದಿಂದ ಬದಲಿಸಲು ಹೆಜ್ಜೆ ಇಟ್ಟಿದ್ದಾರೆ ಹೆಚ್‌ಕೆಇ ಅಧ್ಯಕ್ಷರಾಗಿರುವ ಮತ್ತು ವಿಧಾನ ಪರಿಷತ್ ಸದಸ್ಯ ಶಶೀಲ್ ಗಂಗಾಧರ ನಮೋಶಿ ಹಾಗೂ ಪ್ರಸ್ತುತ ಆಡಳಿತ ಮಂಡಳಿ ಸದಸ್ಯರು.

ಆರೋಗ್ಯ ಸೇವೆಯೆಂದರೆ ವಾಣಿಜ್ಯ ಉದ್ದೇಶವೇ ಮುಖ್ಯವಾಗಿರುವ ಈಗಿನ ಕಾಲದಲ್ಲೂ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳನ್ನೊಳಗೊಂಡ ಆರೋಗ್ಯ ಸೇವೆ ನೀಡಬೇಕೆಂಬ ಆಶಯದಲ್ಲಿ ಈಗಲೂ ಉಚಿತ ಹೊರ ರೋಗಿ ವಿಭಾಗ ಹೊಂದಿರುವ ಈ ಭಾಗದ ಏಕೈಕ ಆಸ್ಪತ್ರೆ ಇದಾಗಿದೆ. ಸರ್ಕಾರದ ಸೇವೆಯನ್ನು ಮೀರಿದ ಉಚಿತ ಸೇವೆಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಸಿಗುತ್ತಿವೆ

.ಉಚಿತ ಹೊರ ರೋಗಿ ವಿಭಾಗದಲ್ಲಿ ಪ್ರತಿ ತಿಂಗಳು ಸಾವಿರಾರು ರೋಗಿಗಳು ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಈ ಸೇವೆಯೊಂದಿಗೆ ಅವಶ್ಯಕತೆಗೆ ಅನುಗುಣವಾಗಿ ಉಚಿತ ಅತೀಅವಶ್ಯ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಇದು ಕಡು ಬಡವ ರೋಗಿಗಳಿಗೆ ಆರೋಗ್ಯ ಸೇವೆ ಲಭಿಸುವಂತೆ ನೋಡಿಕೊಂಡಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಕೇವಲ ಉಚಿತ ಹೊರರೋಗಿ ವಿಭಾಗವಲ್ಲದೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ವೈದ್ಯಕೀಯ ಉಪಕರಣ ಬಳಸಿ ಅತಿಕಡಿಮೆ ಬೆಲೆಗೆ ಸೇವೆನೀಡಲಾಗುತ್ತಿದೆ. ಬಡ ಜನರಿಗೆ ದುಬಾರಿಯಾಗಿ ಕಾಣಿಸುವ

ಡಯಾಲಿಸಿಸ್, ಎಂಆರ್‌ಐ, ಸಿಟಿ ಸ್ಯಾನ್, ಎಕ್ಸ್‌ರೇ ಸೇವೆಗಳು ಸರ್ಕಾರಿ ಆಸ್ಪತ್ರೆ ದರದಲ್ಲಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ಶಾಲಾ ಸಂಜೀವಿನಿ,ಮಾತೆಯರಿಗಾಗಿ ಮಾತೃ ಸಂಜೀವಿನಿಯಂತಹ ಹೃದಯ ಸ್ಪರ್ಶಿ ಯೋಜನೆಗಳ ಮುಖಾಂತರ ಈ ಆಡಳಿತ ಮಂಡಳಿಯ ಅವಧಿಯಲ್ಲಿ ಆರಂಭವಾಗಿ ಅಣ್ಣ ಬಸವಣ್ಣನವರ ಆಶಯವನ್ನು ಪೂರ್ಣ ಗೊಳಿಸುತ್ತಿವೆ.

ಇದೆ ನಿಟ್ಟಿನಲ್ಲಿ ಈಗ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಹೈಟೆಕ್ ಸ್ಪರ್ಶ ನೀಡಲು ಅಧ್ಯಕ್ಷರಾದ ಡಾ ಶಶೀಲ್ ಜಿ ನಮೋಶಿ ಹಾಗೂ *ಪ್ರಸ್ತುತ ಆಡಳಿತ ಮಂಡಳಿಯ ಇದೆ ದಿನಾಂಕ 08/02/2026 ರ ರವಿವಾರ ದಂದು ಮುಂಜಾನೆ 10-45 ಗಂಟೆಗೆ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡಿರುವ ನಡೆದಾಡುವ ದೇವರು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಸವೇಶ್ವರ ಆಸ್ಪತ್ರೆಯ ನೂತನ ಬ್ಲಾಕ್ ನಲ್ಲಿ ಸೂಪರ್ ಸ್ಪೆಷಾಲಿಟಿ ಸರ್ವಿಸಸ್, ಕಾರ್ಡಿಯಾಲಜಿ ಯುನಿಟ್ ವಿತ್ ಕ್ಯಾತಲಾಬ್ ಮತ್ತು ಓಟಿ,, ಮಾಡರ್ನ್ ಓಟಿ ಕಾಂಪ್ಲೆಕ್ಸ್ ಉಯಿತ್ 8 ಮಾಡ್ಯುಲರ್ ಓಟಿ, ಐಸಿಯು, 240 ಬೆಡ್ ಜನರಲ್ ವಾರ್ಡ್ ಫೆಸಿಲಿಟಿ,ಸ್ಪೇಶಲ್ ರೂಂ, ಹಾಗೂ ಸ್ವತಂತ್ರ ವಾಗಿ ವಿದ್ಯುಚ್ಛಕ್ತಿ ಸ್ವಾವಲಂಬನೆಯ ಗುರಿಯನ್ನು ಇಟ್ಟುಕೊಂಡು ಆಸ್ಪತ್ರೆಯ ಸಂಪೂರ್ಣ ವಾಗಿ ವಿದ್ಯುಚ್ಛಕ್ತಿ ಗೊಳಿಸಲು ಸೋಲಾರ್ 650 KW ಆನ್ ಗ್ರೀಡ್ ರೂಪ್ ಟಾಪ್ ಪ್ಲಾಂಟ್ ಉದ್ಘಾಟನೆ ಗೊಳ್ಳಲಿವೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ ಶಶೀಲ್ ಜಿ ನಮೋಶಿ ವಹಿಸಲಿದ್ದಾರೆ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯಾದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ ದೇಶಮುಖ್ ಎಂ ಆರ್ ಎಂ ಸಿ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ ಹಾಗೂ ಡೀನ್ ಡಾ ಶರಣಗೌಡ ಪಾಟೀಲ್, ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಉಪಸ್ಥಿತರಿರಲಿದ್ದಾರೆ