ಲೇಖಕ ಅನೀಲ್ ಗುನ್ನಾಪುರ ಗೆ ಸಹಾಯಕ ನಿರ್ದೇಶಕ ಶ್ರೀಕಂಠ ಅವರಿಂದ ಸನ್ಮಾನ
ಲೇಖಕ ಅನೀಲ್ ಗುನ್ನಾಪುರ ಗೆ ಸಹಾಯಕ ನಿರ್ದೇಶಕ ಶ್ರೀಕಂಠ ಅವರಿಂದ ಸನ್ಮಾನ
ಬೆಂಗಳೂರು : ನಗರದಲ್ಲಿ ಇಂದು ಸರ್ವೇ ನಂಬರ್ - 97 ಕಥಾ ಸಂಕಲನದ ಲೇಖಕ - ಉದಯೋನ್ಮುಖ ಬರಹಗಾರ ಮತ್ತು ಬಾಗಲಕೋಟೆಯ ಸರ್ಕಾರಿ ಭೂ ದಾಖಲೆಗಳ ಇಲಾಖೆಯಲ್ಲಿ ಭೂಮಾಪಕರ ರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಿಲ್ ಗುನ್ನಾಪುರ ಅವರನ್ನು ಬೆಂಗಳೂರು ದಕ್ಷಿಣ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶ್ರೀಕಂಠ ರವರು ಅಭಿನಂದಿಸಿ ಸನ್ಮಾನಿಸಿದರು.
ಅನೀಲ್ ಗುನ್ನಾಪುರ ಪ್ರಕಾಶನದಲ್ಲಿ ಪ್ರಕಟವಾಗಿರುವ *ಸರ್ವೇ ನಂಬರ್ - 97* ಕಥಾ ಸಂಕಲನದ ಸುಮಾರು 100 ಪ್ರತಿಗಳನ್ನು ಸಾಹಿತ್ಯಾಸಕ್ತರಿಗೆ ನೀಡುವ ಸಂಕಲ್ಪದೊಂದಿಗೆ ಖರೀದಿಸಿ ಲೇಖಕರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿದರು.
ಶ್ರೀಕಂಠ ಅವರ ಈ ಸಾಹಿತ್ಯ ಪೋಷಣೆ ಕಾರ್ಯಕ್ಕೆ ಸಹೋದ್ಯೋಗಿಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ಭೂದಾಖಲೆಗಳ ಸಂಘದ ಕಲಬುರಗಿ ವಿಭಾಗದ ಉಪಾಧ್ಯಕ್ಷರಾದ ಈಶ್ವರಚಂದ್ರ ವಿದ್ಯಾಸಾಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.