ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದಗೆ ಭೋಜಶ್ರೀ ಪ್ರಶಸ್ತಿ ಪ್ರದಾನ.
ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದಗೆ ಭೋಜಶ್ರೀ ಪ್ರಶಸ್ತಿ ಪ್ರದಾನ.
ಶಹಾಪುರ : ತಾಲೂಕಿನ ಗೋಗಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಾಗೂ ಹುಟ್ಟು ಹೋರಾಟಗಾರ ಮಾನಪ್ಪ ಹಡಪದ ಅವರಿಗೆ ರಾಜ್ಯಮಟ್ಟದ ಭೋಜಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸುಕ್ಷೇತ್ರ ಗೌಡನಹಳ್ಳಿಯ ಶ್ರೀ ಭೋಜ ಲಿಂಗೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ 2026 ನೇ ಸಾಲಿನ ಭೋಜಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು.
ಈ ದೇಶದ ಸಂವಿಧಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು,ಮೂಲಭೂತ ಹಕ್ಕುಗಳ ಜೊತೆಗೆ ಸಾಂವಿಧಾನಿಕ ಪರಿಹಾರಗಳನ್ನು ಹಕ್ಕಿನ ಮೂಲಕ ನಾಗರಿಕರಿಗೆ ನ್ಯಾಯ ದೊರಕಿಸಿ, ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಮಾನಪ್ಪ ಹಡಪದ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಾಮಾಜಿಕ ಕಳಕಳಿ ಹಾಗೂ ಬದ್ಧತೆಗೆ ಒಲಿದ ಪ್ರಶಸ್ತಿ ಇದಾಗಿದ್ದು ಮತ್ತಷ್ಟು ನನ್ನ ಜವಾಬ್ದಾರಿಗಳು ಹೆಚ್ಚಿಸಿವೆ ಎಂದು ಪ್ರಶಸ್ತಿ ಪುರಸ್ಕೃತ ಮಾನಪ್ಪ ಹಡಪದ ಅವರು ಸನ್ಮಾನ ಸ್ವೀಕರಿಸಿ ಈ ಸಂದರ್ಭದಲ್ಲಿ ಮಾತನಾಡಿದರು.
ಗೌಡಗಾವ್ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು,ಬಸವಕಲ್ಯಾಣದ ಗವಿಮಠ ಶ್ರೀಗಳು,ಸೇಡಂ ವಿರಕ್ತಮಠದ ಶ್ರೀಗಳು, ಬೆನಕನಹಳ್ಳಿ ಶ್ರೀಗಳು,ಯಾದಗಿರಿ ಶ್ರೀಗಳು,ವೇದಿಕೆ ಮೇಲೆ ಉಪಸಿತರಿದ್ದರು,ಸೂಗುರು ಶ್ರೀಗಳು ಘನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಗೌಡನಳ್ಳಿಯ ಶ್ರೀ ಭೋಜಲಿಂಗೇಶ್ವರ ಪ್ರಕಾಶ್ ತಾತ ಶ್ರೀಗಳು ನೇತೃತ್ವ ವಹಿಸಿದ್ದರು. ಬಿಜೆಪಿ ಯುವ ಮುಖಂಡ ಮಣಿಕಂಠ ರಾಠೋಡ್ ಸೇರಿದಂತೆ ಗ್ರಾಮದ ಹಿರಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
