ಕಾಯಕ ಶರಣರ ಜಯಂತಿ ಯಶ್ವಸಿಗೆ ರವಿ ವಾಲಿ ಮನವಿ
ಕಾಯಕ ಶರಣರ ಜಯಂತಿ ಯಶ್ವಸಿಗೆ ರವಿ ವಾಲಿ ಮನವಿ
ಕಲಬುರಗಿ: ಜಿಲ್ಲಾಡಳಿತ,ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಸಂಯುಕ್ತಾಶ್ರಯದಲ್ಲಿ ಪೆ.10 ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾಯಕ ಶರಣರ ಜಯಂತಿಯ ಪ್ರಯುಕ್ತ ಶಿವಶರಣ ಮಾದಾರ ಚೆನ್ನಯ್ಯ ಕಾಯಕ ಶರಣರಲ್ಲಿ ಶಿವಶರಣ ಮಾದಾರ ಚೆನ್ನಯ ಜಯಂತಿಯೂ ನಡೆಯಲಿರುವ ನಿಮಿತ್ಯವಾಗಿ ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು,ಅಧಿಕಾರಿಗಳು, ಮತ್ತು ಕಾಯಕ ಶರಣರ ಅನುಯಾಯಿಗಳು ಭಾಗವಹಿಸಲಿದ್ದು,ಅಧ್ಯಕ್ಷರು ಅಖಿಲ ಕರ್ನಾಟಕ ಬಸವ ಮಾದಾರ ಚೆನ್ನಯ ಸಂಘದ ಅಧ್ಯಕ್ಷರಾದ ರುದ್ರಪ್ಪ ಎಸ್ ಹೊಳಕುಂದಾ(ರವಿ ವಾಲಿ) ಅವರು ಮಾಧ್ಯಮ ಮೂಲಕವಾಗಿ ಮಾದಿಗ ಸಮುದಾಯದ ಹಿರಿಯ ಮುಖಂಡರು,ಮಹಿಳೆಯರು ಹೋರಾಟಗಾರರು, ಬುದ್ದಿಜೀವಿಗಳು,ಸಾಹಿತಿಗಳು,ಚಿಂತಕರು ಎಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಯಕರ ಶರಣರ ಜಯಂತಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
