ಪುಸ್ತಕ ಓದಿನಿಂದ ವ್ಯಕ್ತಿತ್ವ ವೃದ್ಧಿ:ಡಾ.ಕೊನೇಕ್

ಪುಸ್ತಕ ಓದಿನಿಂದ  ವ್ಯಕ್ತಿತ್ವ ವೃದ್ಧಿ:ಡಾ.ಕೊನೇಕ್

ಪುಸ್ತಕ ಓದಿನಿಂದ ವ್ಯಕ್ತಿತ್ವ ವೃದ್ಧಿ:ಡಾ.ಕೊನೇಕ್ 

ಕಮಲಾಪುರ:ಜ್ಞಾನದ ಭಂಡಾರವಾಗಿರುವ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ಮಾತೋಶ್ರೀ ಶಿಕ್ಷಣ,ಆರ್ಥಿಕ,ಸಾಮಾಜಿಕ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನಾವದಗಿ ದೇಶಿ ಕೇಂದ್ರೀಯ ವಸತಿ ಶಾಲೆಯ ಸಾಂಸ್ಕೃತಿಕ ಲೋಕದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶರಣಬಸಪ್ಪ ವಡ್ಡನಕೇರಿ ಯವರು ರಚಿಸಿದ ಚನ್ನ ಬಸವಣ್ಣ ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಂಥ ಮೂಲ, ಗುರುಮೂಲ, ಸ್ವಾನುಭವ ಈ ಮೂರು ಕಡೆಯಿಂದ ಜ್ಞಾನರ್ಜನೆಯಾಗುತ್ತದೆ. ಅತಿ ಚಿಕ್ಕವಯಸ್ಸಿನಲ್ಲಿ ಅನುಭಾವ ಧಾರೆ ಎರೆಯುವ ಶರಣ ಚೆನ್ನಬಸವಣ್ಣ ಚಿನ್ಮಯಿಜ್ನ್ಯಾನಿಯಾದ ಸಂಗತಿ,ದೊಡ್ಡ ಅಧಿಕಾರಿಯಾಗಿದ್ದರೂ ಒತ್ತಡದ ಬದುಕಿನ ಮಧ್ಯೆ ಮಹತ್ವದ ಕೃತಿಗಳನ್ನು ರಚಿಸಿ ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಮಾಸ್ತಿ ಕನ್ನಡದ ಆಸ್ತಿಯಾಗಿದ್ಥಾರೆ. ಈ ಎರಡು ಕೃತಿಗಳು ಚಿಕ್ಕದಾಗಿ, ಕಡಿಮೆ ಬೆಲೆಗೆ ಜನರ ಕೈಗೆಟುಕುವಂತೆ ನಮ್ಮ ಪ್ರಕಾಶದಿಂದ ಜನಪ್ರಿಯ ಮಾಲಿಕೆಯಲ್ಲಿ ಮುಸ್ರಿಸಿದ್ದು ಎಂದರು.

ನಿವೃತ ಪ್ರಾಚಾರ್ಯರಾದ ಶ್ರೀ ಶಾಂತಕುಮಾರ ಪಾಟೀಲ ಮಾತನಾಡಿ ಪುಸ್ತಕ ಪ್ರಕಟಿಸುವುದರ ಜೊತೆಗೆ ಡಿಜಿಟಲಿಕರಣಗೊಳಿಸುವುದು ಅನಿವಾರ್ಯವಾಗಿದೆ. ಕಾಲಕ್ಕೆ ತಕ್ಕಂತೆ ಸಾಹಿತ್ಯ ಕೃಷಿ ಕೈಗೊಳ್ಳಬೇಕು ಎಂದರು.

ಸಾಂಸ್ಕೃತಿಕ ಲೋಕದ ಅಧ್ಯಕ್ಷ ಡಾ. ರಾಜೇಂದ್ರ ಯರನಾಳೆ ಮಾತನಾಡಿ ಕವಿತ್ವ ಪಕ್ವಗೊಂಡಾಗ ಒಳ್ಳೆಯ ರಚನೆಗಳು ಹೊರಹೊಮ್ಮುತ್ತವೆ. ನಿರಂತರ ಪ್ರಯತ್ನ ಶೀಲತೆಯಿಂದ ಸಾಹಿತ್ಯ ಸೃಷ್ಟಿಯಲ್ಲಿ ಸುಧಾರಣೆ ಸಾಧ್ಯ ಅಲ್ಲದೆ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಸಾಹಿತ್ಯಕ್ಕೆ ಯಾವತ್ತು ಪ್ರೋತ್ಸಾಹ ಸಿಗಬೇಕು ಎಂದರು.

ಮಾತೋಶ್ರೀ ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು.

ಸಾಹಿತಿ ಗವಿಸಿದ್ದಪ್ಪ ಪಾಟೀಲ, ಪತ್ರಕರ್ತ ತೀರ್ಥಕುಮಾರ ಬೆಳಕೋಟಾ, ಶಿವರಾಜ ಧಟ್ಟಿ, ವಿಜಯಕುಮಾರ ರಟಕಲ್ ಹಾಜರಿದ್ದರು. 

ಕಸ್ತೂರಿಬಾಯಿ ರಾಜೇಶ್ವರ, ಭುವನೇಶ್ವರಿ ಧಟ್ಟಿ, ಅನಂತಕುಮಾರ ಪಾಟೀಲ, ಬಸವರಾಜ ಗೌಡ,ಅಂಬಾರಾಯ ಮಡ್ದೆ, ಗುರುರಾಜ ಹಿರೇಮಠ, ರವೀಂದ್ರ ಬಿ.ಕೆ, ಶಂಕರಲಿಂಗ, ರಾಜಕುಮಾರ ಮಾಳಗೆ,ದೇವಿಂದ್ರಪ್ಪ ಕಟ್ಟಿಮನಿ ಕವಿತೆ ವಾಚನ ಮಾಡಿದರು.