ಚಿಂಚೋಳಿ ಪುರಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗನ್ನಾಥ ಗುತ್ತೇದಾರ ಅಧಿಕಾರ ಪದಗ್ರಹಣ

ಚಿಂಚೋಳಿ ಪುರಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗನ್ನಾಥ ಗುತ್ತೇದಾರ ಅಧಿಕಾರ ಪದಗ್ರಹಣ

ಚಿಂಚೋಳಿ ಪುರಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗನ್ನಾಥ ಗುತ್ತೇದಾರ ಅಧಿಕಾರ ಪದಗ್ರಹಣ

ಚಿಂಚೋಳಿ : ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸದಸ್ಯ ಜಗನ್ನಾತ ಗುತ್ತೇದಾರ ಶುಕ್ರುವಾರ ಬೋವಿ ಸಮುದಾಯದ ಬಳಗ ಮತ್ತು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಲಿ, ಮಾಜಿ ಅಧ್ಯಕ್ಷ ಅನೀಲ ದೇವೀಂದ್ರಪ್ಪ ಜಮದಾರ ಅವರ ಉಪಸ್ಥಿಯಲ್ಲಿ ಅಧಿಕಾರ ಪದಗ್ರಹಣ ಮಾಡಿದರು. 

ಬಳಿಕ ಮಾತನಾಡಿದವರು, ಹಿರಿಯರ ಮಾರ್ಗದರ್ಶನದಲ್ಲಿ ಪುರಸಭೆ ಪ್ರತಿಯೊಂದು ವಾರ್ಡಗಳ ಸಮಸ್ಯೆಗಳು ಅರೆತು ಅಧ್ಯಕ್ಷರೊಂದಿಗೆ ಸ್ಪಂದಿಸುವ ಕೆಲಸ ಮಾಡುವುದರ ಮೂಲಕ ಪಟ್ಟಣದ ನೈರ್ಮಲ್ಯದ ಸ್ವಚ್ಚತೆ ಮತ್ತು ಬೀದಿ ದೀಪಗಳ ನಿರ್ವಹಣೆಯೊಂದಿಗೆ ವ್ಯಾಪ್ತಿಯ ಎಲ್ಲಾ ವಾರ್ಡಗಳಿಗೂ ನೀರಿನ ಸಮಸ್ಯೆ ಆಗದಂತೆ ನಿಗವಹಿಸಲಾಗುವುದು ಎಂದರು. 

ಪುರಸಭೆ ಮುಖ್ಯಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿ,ಮಾತನಾಡಿದವರು, ಹಲವು ದಿನಗಳಿಂದ ನೆನೆಗುಂದಿಗೆ ಬಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ ಗುತ್ತೇದಾರ ಅವರು ಆಯ್ಕೆಗೊಂಡು ಹೊಸ ವರ್ಷದ ಪ್ರಾರಂಭದಲ್ಲಿ ಅಧಿಕಾರ ಪದಗ್ರಹಣಿಸಿದ್ದು ಪುರಸಭೆ ಆಡಳಿತಕ್ಕೆ ಮೆರಗು ಬಂದಿದ್ದು, ಅಧ್ಯಕ್ಷರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಮನ್ವಯತೆಯಿಂದ ನಡೆದು ಪುರಸಭೆ ವ್ಯಾಪ್ತಿಯ ಸಮಸ್ಯೆಗಳಿಗೆ ಸಕರಾತ್ಮಕ ಸ್ಪಂದಿಸಿ ನಿವಾರಿಸುವಲ್ಲಿ ಜನತೆಗೆ ಉತ್ತಮ ಆಡಳಿತ ಕ್ಕೆ ಕೈಜೊಡಿಸುತ್ತೇವೆ ಎಂದರು. 

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಲಿ, ಅನೀಲ ದೇವೀಂದ್ರಪ್ಪ ಜಮದಾರ, ಶರಣು ಪಾಟೀಲ ಮೋತಕಪಳ್ಳಿ, ಅಬ್ದುಲ್ ಬಾಷಿದ್, ಅನ್ವರಖತೀಬ್, ಹಾದಿ ಸಾಬ್, ಸಂತೋಷ ಗುತ್ತೇದಾರ, ಬಸವರಾಜ ವಾಡಿ, ಹಣಮಂತ ಭೋವಿ ಅವರು ಮಾತನಾಡಿ 2024 ರಲ್ಲಿ ನಡೆದ ರಾಜಕೀಯ ಕಹಿ ನೆನಪುಗಳನ್ನು ಮರೆತು ಸ್ವೀಕರಿಸಿದ ಅಧಿಕಾರದಿಂದ ಜನತೆಗೆ ಮುಂದೆ ಮಾಡುವ ಉತ್ತ್ಮ ಕೆಲಸಕಡೆ ಗಮನ ಹರಿಸಬೇಕೆಂದು ಶುಭಕೋರಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸೈಯದ್ ಶಬ್ಬೀರ್, ರಾಧಬಾಯಿ ಓಲಗೇರಿ, ಬಸವರಾಜ ಸಿರಸಿ, ಲಕ್ಷ್ಮೀಕಾಂತ ಸುಂಕದ, ಶಶಿಧರ ಕಳಸ್ಕರ್, ಶ್ರೀನಿವಾಸ ಬಂಡಿ, ನೀಲಕಂಠ ಸಿಳ್ಳಿನ್, ಗುಂಡಯ್ಯಸ್ವಾಮಿ, ಸುಭಾಷ್ಚಂದ್ರ ಯಂಪಳ್ಳಿ, ಶಿವರಾಜ ಪಾಟೀಲ ಐನಾಪೂರ, ನಾಗೇಶ ಗುಣಾಜಿ, ಗಂಗಾಧರ ಗಡ್ಡಿಮನಿ, ಚಾಂದ್, ವಿಠಲ್ ಕುಸಾಳೆ, ರಾಜು ಪವಾರ, ಸುರೇಶ ಸಂದಾಪೂರ, ಸುರೇಶ ಹುಡಗಿ ಸೇರಿದಂತೆ ಆಪ್ತರು, ಹೈತೈಷಿಗಳು, ಸಮುದಾಯದ ಮುಖಂಡರುಗಳು ಉಪಸ್ಥಿತರಿದರು.