ವಿದ್ಯಾರ್ಥಿಗಳ ಗುರಿ ಸಾಧನೆ ಕಡೆ ಇರಲಿ ಆರ್.ಕೆ.ಪಾಟೀಲ

ವಿದ್ಯಾರ್ಥಿಗಳ ಗುರಿ ಸಾಧನೆ ಕಡೆ ಇರಲಿ ಆರ್.ಕೆ.ಪಾಟೀಲ

ಪದವಿ ವಿದ್ಯಾರ್ಥಿಗಳಿಗೆ.ಸ್ವಾಗತ

 ಆಳಂದ: ವಿದ್ಯಾರ್ಥಿಗಳ ಗುರಿ ಸಾಧನೆಯೆಡೆಗೆ ಮುಖ ಮಾಡಿರಲಿ ಎಂದು ಕೆ.ಎಮ್.ಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ತಿಳಿಸಿದರು.

ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ 2024-25 ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.

ಪದವಿ ಮುಗಿದ ತಕ್ಷಣ ಕೆಲವು ಉದ್ಯೋಗದತ್ತ ಮುಖ ಮಾಡಿದರೆ, ಮತ್ತೆ ಕೆಲವರು ಉನ್ನತ ವಿದ್ಯಾಭ್ಯಾಸದ ಹೋಗುತ್ತಾರೆ. ಇದರ ಜತೆಗೆ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಯಾವುದಕ್ಕೂ ಹೆದರದೆ ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಾಂಶುಪಾಲರಾದ ಸಂಜಯ ಎಸ್. ಪಾಟೀಲ.ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಬಸವಂತರಾವ ಎಸ್. ಪಾಟೀಲ, ಪ್ರಾಂಶುಪಾಲರು, ಶ್ರೀ.ಶಿ.ಸ. ಪದವಿ ಕಾಲೇಜು ಮಾದನಹಿಪ್ಪರಗಾ ಮಹಾದೇವಪ್ಪ ಪಾಟೀಲ, ಆಡಳಿತಾಧಿಕಾರಿಗಳು, ಸ.ಲೋ.ಶಿ.ಸ.ಆಳಂದ.ನಿವೃತ್ತ ಶಿಕ್ಷಕ ಅಪ್ಪಾಸಾಹೇಬ ತೀರ್ಥ ಕಾರ್ಯಕ್ರಮದಲ್ಲಿ ಇದ್ದರು