ಹಾರಕೂಡ ಶ್ರೀಗಳಿಂದ- ಗೋಮಾತೆಗೆ ಪೂಜೆ

ಹಾರಕೂಡ ಶ್ರೀಗಳಿಂದ- ಗೋಮಾತೆಗೆ ಪೂಜೆ
ಬಸವಕಲ್ಯಾಣ : ತಾಲೂಕಿನ ಹಾರಕೂಡ ಪಶು ಚಿಕಿತ್ಸಾ ಲಯ ವತಿಯಿಂದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಂದ ಗೋಮಾತೆಗೆ ಪೂಜೆ ಸಲ್ಲಿಸಿ ಜಾನುವಾರಗಳಿಗೆ ಚರ್ಮ ಗಂಟು ರೋಗದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ. ಹಿರೇಮಠ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮಂಜುನಾಥ ಹಳ್ಳಿ, ಹಾರಕೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವ ಪೂಜಾರಿ, ಪಶು ವೈದ್ಯಕೀಯ ಪರೀಕ್ಷಕರಾದ ಮಲ್ಲಿಕಾರ್ಜುನ ಹತ್ತರಕೆ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳಾದ ಮಂಜುನಾಥ ಹಳ್ಳಿ ಮಾತನಾಡಿ ರೈತರು ತಮ್ಮ ರಾಸುಗಳಿಗೆ ಘನ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿರುವ ಚರ್ಮ ಗಂಟು ರೋಗದ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿಕೊಂಡರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಚರ್ಮ ಗಂಟು ರೋಗದ ಲಸಿಕೆ(Lumpy Skin Disease Vaccine) ನೀಡುವ ಕಾರ್ಯಕ್ರಮವು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಡಿಯುತ್ತಿದ್ದು, ದಿನಾಂಕ 24/09/2025 ರಂದು ಹಾರಕೂಡ ಗ್ರಾಮದ ರಾಸುಗಳಿಗೆ ಲಸಿಕೆ ನೀಡಲಾಯಿತು.