ವಾಡಿ| ಬಿಜೆಪಿ ಕಛೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ

ವಾಡಿ| ಬಿಜೆಪಿ ಕಛೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ

ವಾಡಿ| ಬಿಜೆಪಿ ಕಛೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಮುಖಂಡರು ಪೂಜೆಯನ್ನು ಸಲ್ಲಿಸಿ ಜಯಂತಿ ಆಚರಿಸಿದರು.

ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿvಭಾರತೀಯ ಇತಿಹಾಸದಲ್ಲಿ ಕಲೆಗೆ ತನ್ನದೇ ಆದ ಇತಿಹಾಸ ಇದೆ. ಆ ದಿಸೆಯಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಕೆತ್ತನೆಗಳೆ ಸಾಕ್ಷಿ ಎಂದರು.

ಶಿಲ್ಪಕಲೆ ಎನ್ನುವುದು ಅತ್ಯಂತ ನಾಜೂಕಾದ ಕೆತ್ತನೆಯ ಕಲೆ ಇಂತಹ ವಿಶೇಷವಾದಂತಹ ಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ಅವರು ನಾಡಿನ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ.ವಿದೇಶಿಗರು ನಮ್ಮ ನಾಡಿನ ಶಿಲ್ಪಕಲೆಯನ್ನು ನೋಡಿ ಬೆರಗಾಗುವಂತೆ ಮತ್ತು ನೋಡುಗರನ್ನು ಸೆಳೆಯುವಂತಹ ಕಲೆಯನ್ನು ಹೊಂದಿದ ನಮ್ಮ ನಾಡು ಪುಣ್ಯಭೂಮಿಯಾಗಿದೆ. ಇಂತಹ ಶಿಲ್ಪಕಲೆಗಳನ್ನು ನಿರ್ಮಿಸಿದ ಅಮರ ಶಿಲ್ಪಿ ಜಕಣಾಚಾರಿಯವರನ್ನು ಇಂದು ನಾವುಗಳು ಸ್ಮರಿಸುವ ಮೂಲಕ ಶಿಲ್ಪಕಲೆಗಳನ್ನು ಗೌರವದಿಂದ ಪೋಷಿಸಬೇಕಾಗಿದೆ.

ಅದರಂತೆ ನಮ್ಮ ಪ್ರಧಾನಿ ಮೋದಿ ಜಿ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದು ನಮ್ಮ ಸಂಸ್ಕೃತಿ,ನಮ್ಮಲ್ಲಿನ ಕುಲ ಕಸುಬುಗಳಿಗೆ ಜೀವತುಂಬುವಂತ ಕಾರ್ಯ ಮಾಡುತ್ತಿದ್ದುದ್ದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದರು. 

ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅಮರಶಿಲ್ಪಿ ಜಕಣಾಚಾರಿ ಅತ್ಯಂತ ಶ್ರೇಷ್ಠ ಶಿಲ್ಪಿ , ಅವರ ವಿಚಾರಧಾರೆ, ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಶಿಲ್ಪಕಲೆಗೆ ಮತ್ತೊಂದು ಹೆಸರೇ ಜಕಣಾಚಾರಿ. ಅವರು ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನಾಡಿನಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿ ನಮ್ಮ ಭವ್ಯ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ

ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ,ರಾಮು ರಾಠೊಡ,ಶರಣಗೌಡ ಚಾಮನೂರ,ಪ್ರಮೋದ ಚೊಪಡೆ,ರವೀಂದ್ರ ವಾಲ್ಮೀಕ ನಾಯಕ,ಮಲ್ಲಿಕಾರ್ಜುನ ಸಾತಖೇಡ,ದೇವೀಂದ್ರ ಬಡಿಗೇರ ಹಲಕರ್ಟಿ, ಅರ್ಜುನ ಪಂಚಾಳ,ಮೋನಪ್ಪ ವಿಶ್ವಕರ್ಮ,ಬಸವರಾಜ ಪಂಚಾಳ ರಾವೂರ, ಮಂಜುನಾಥ ಪಂಚಾಳ, ಬಿಕೆ ಕಾಳಪ್ಪ,ಪೂನಮ್ ರಾಠೊಡ, ಹೀರಾ ರಾಠೊಡ ಸೇರಿದಂತೆ ಇತರರು ಇದ್ದರು.