ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ 

ಕಲಬುರಗಿ: ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಾಲರಾಜ ಅಶೋಕ ಗುತ್ತೇದಾರ ಅವರ ಆದೇಶದ ಮೇರೆಗೆ ಜಿಲ್ಲಾ ಜನತಾದಳ(ಜಾತ್ಯತೀತ) ಪಕ್ಷದ ಜಿಲ್ಲಾ ಮಹಾಪ್ರದಾನ ಕಾರ್ಯದರ್ಶಿ ಡಾ. ಸಿದ್ದಣ್ಣ ಎಸ್ ಪಾಟೀಲ ನೇತೃತ್ವದಲ್ಲಿ ಆಚರಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನತಾದಳ (ಜಾತ್ಯತೀತ ) ಪಕ್ಷದ ಪರಿಶಿಷ್ಟ ಪಂಗಡ ವಿಭಾಗ ಜಿಲ್ಲಾ ಅಧ್ಯಕ್ಷ ಬಸವರಾಜ್ ಪಾಟೀಲ, ಪಕ್ಷದ ರಾಜ್ಯಕಾರ್ಯದರ್ಶಿ ಹಣಮಂತ ಕಂದಹಳ್ಳಿ, ಜಿಲ್ಲಾ ಎಸ್ ಸಿ, ಘಟಕದ ಅಧ್ಯಕ್ಷ ಸುನಿಲ್ ಗಾಜರೆ, ಮುಖಂಡರಾದ ಮುಸ್ತಾಕ್ ಅಲಿ, ಸೈಯದ್ ಜಾಕಿರ್ ಹುಸೇನ್, ನಾಗಣ್ಣ ವಾರದ, ಸಂಜುಕುಮಾರ ಸಿ ಮಡಕಿ, ಕಾಶಿನಾಥ್ ಉಡಗಿ, ಸುನಾಥ್ ನಂಬಿ, ನಾಗಯ್ಯ ಸ್ವಾಮಿ ಹೆಬ್ಬಾಳ, ಹಣಮಂತ ಒಡೆಯರ್, ಚಂದ್ರಕಾಂತ ಕೊಂಡಪುರ್, ಮಲ್ಲಿಕಾರ್ಜುನ್ ಬಗಲಿ, ಶಿವಕುಮಾರ್ ಮಾಲಿಪಾಟೀಲ್, ಮೊಹಮ್ಮದ್ ಪಟೇಲ್, ಮಹೇಶ್ ಕುಲಕರ್ಣಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.