ಮುಖ್ಯ ಶಿಕ್ಷಕ ಶೇಷರಾವ್ ಪಾಟೀಲ್ ಸೇವಾ ನಿವೃತ್ತಿ ಅವರ ಬಿಳ್ಕೋಡಗೆ ಸಮಾರಂಭ
ಮುಖ್ಯ ಶಿಕ್ಷಕ ಶೇಷರಾವ್ ಪಾಟೀಲ್ ಸೇವಾ ನಿವೃತ್ತಿ ಅವರ ಬಿಳ್ಕೋಡಗೆ ಸಮಾರಂಭ
ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಇಂದು (31/12/2024)ಮಹಾತ್ಮಾ ಜ್ಯೋತಿಬಾ ಫುಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ -ಶೇಷರಾವ ಪಾಟೀಲ ಅವರ ವಯೋನಿವೃತಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಶಾಲೆಯಲ್ಲಿ ಇಷ್ಟು ದಿನ ಕಾರ್ಯನಿರ್ವಹಿಸಿದ್ದು ಸಂತೋಷವಾಗಿದೆ.ಈಗ ಶಾಲೆ ಬಿಟ್ಟು ಮಕ್ಕಳಿಂದ ದೂರ ಹೋಗಲು ಮನಸ್ಸಿಗೆ ದುಃಖವಾಗುತ್ತಿದೆ ಶಿಕ್ಷಕ ವೃತ್ತಿಯು ಆನಂದವನ್ನು ಕೊಟ್ಟಿದೆ ಅದಕ್ಕಾಗಿ ಶಿಕ್ಷೆ ಇಲಾಖೆಯಲ್ಲಿ ಸೇವಿ ಸಲ್ಲಿಸಿ ಒಳ್ಳೆಯ ರೀತಿಯಿಂದ ಸೇವೆ ಮಾಡಿದ್ದು ನನಗೆ ಸಂತೋಷ ವಾಗಿದೆ ಎಂದು ಶೇಷರಾವ ಪಾಟೀಲ್ ಮನದಾಳದ ಮಾತುಗಳನ್ನು ಆಡಿದರು.
ಈ ಸಂದರ್ಭದಲ್ಲಿ ಸಿ ಆರ್ ಪಿ
ಮಾದಪ್ಪಾ ಮಡಿವಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ,ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನೂದನೂರೆ, ರಾಜಕುಮಾರ ಶಿವಣಕರ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಂಜೀವಕುಮಾರ ಡೊಂಗ್ರೆ, ರಾಜಕುಮಾರ ಕೊಡಗೆ, ಸೂರ್ಯಕಾಂತ ದರೆಗಾವೆ, ಸೂರ್ಯಕಾಂತ ಮೂಳೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಂಚೆ ಬಸವರಾಜ ಪಾಟೀಲ್ ಸರ್ವರನ್ನು ಸ್ವಾಗತವನ್ನು ಕೋರಿದರು.