ಪಾದಯಾತ್ರೆಯಲ್ಲಿ ಚಿತಾಪುರ,ಸೇಡಂ ಈಡಿಗರ ಒಗ್ಗಟ್ಟಿನ ಪ್ರದರ್ಶನ ಅಗತ್ಯ : ಸತೀಶ್ ವಿ. ಗುತ್ತೇದಾರ್

ಪಾದಯಾತ್ರೆಯಲ್ಲಿ ಚಿತಾಪುರ,ಸೇಡಂ ಈಡಿಗರ ಒಗ್ಗಟ್ಟಿನ ಪ್ರದರ್ಶನ ಅಗತ್ಯ : ಸತೀಶ್ ವಿ. ಗುತ್ತೇದಾರ್

ಪಾದಯಾತ್ರೆಯಲ್ಲಿ ಚಿತಾಪುರ,ಸೇಡಂ ಈಡಿಗರ ಒಗ್ಗಟ್ಟಿನ ಪ್ರದರ್ಶನ ಅಗತ್ಯ : ಸತೀಶ್ ವಿ. ಗುತ್ತೇದಾರ್

ಜ 6ರಿಂದ ಪ್ರಣವಾನಂದ ಶ್ರೀಗಳ ಪಾದಯಾತ್ರೆ: ಸಿದ್ಧತೆ ಅಂತಿಮ ಹಂತಕ್ಕೆ

ಕಲಬುರಗಿ : ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ 6 ರಂದು ಡಾ. ಪ್ರಣವಾನಂದ ಸ್ವಾಮೀಜಿಯವರು ಬೆಂಗಳೂರು ವರೆಗೆ ನಡೆಸುವ ಪಾದಯಾತ್ರೆ ರಾಜ್ಯದಲ್ಲಿರುವ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಶಕ್ತಿ ಪ್ರದರ್ಶನವಾಗಲಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಹೇಳಿದರು. 

    ಚಿತ್ತಾಪುರ ಹಾಗೂ ಸೇಡಂನಲ್ಲಿ ಡಿಸೆಂಬರ್ 26ರಂದು ನಡೆದ ಈಡಿಗ ಮುಖಂಡರ ಸಭೆಗಳಲ್ಲಿ ಮಾತನಾಡಿ ಗುರುಗಳ ಪಾದಯಾತ್ರೆ ಸಮಾಜದ ಕಟ್ಟ ಕಡೆಯ ಈಡಿಗ ಬಂಧುಗಳ ಬದುಕಿನ ಭವಿಷ್ಯಕ್ಕಾಗಿ, ಆದುದರಿಂದ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಬಂಧುಗಳು ಪಾದಯಾತ್ರೆ ಯಶಸ್ವಿಗೊಳಿಸಲು ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗಟ್ಟಾಗಿ ದುಡಿಯಬೇಕು ಎಂದರು.ಈ ಪಾದಯಾತ್ರೆ ಯಾವುದೇ ಪಕ್ಷ ಸಂಘಟನೆಗಳ ವಿರುದ್ಧವಲ್ಲ. ಇದು ರಾಜ್ಯದ 40 ಲಕ್ಷ ಇರುವ ಸಮಾಜ ಬಾಂಧವರ ಹಿತಕ್ಕಾಗಿ ಮಾಡುವ ಹಾಗೂ 18 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಡೆಸುವ ಪಾದಯಾತ್ರೆಯಾಗಿದೆ. ಸರಕಾರ ಕೂಡಲೇ ಸ್ಪಂದನೆ ನೀಡಬೇಕು. ಕನಿಷ್ಠ ಐದು ಬೇಡಿಕೆಗಳನ್ನು ಸದ್ಯ ಒಪ್ಪಿದರೆ ಪಾದಯಾತ್ರೆ ಕೈ ಬಿಡಲು ಚಿಂತನೆ ಮಾಡಲಾಗುವುದು ಎಂದು ಗುತ್ತೇದಾರ ಹೇಳಿದರು. 

  ಚಿತಾಪುರ ಅಂಬಿಗರ ಚೌಡಯ್ಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮಾತನಾಡಿ ಜನವರಿ 6 ರಂದು ಕರದಾಳು ಮಠದಲ್ಲಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಪಾದಯಾತ್ರೆಗೆ ಚಾಲನೆ ನೀಡಲಿರುವರು. ಬಳಿಕ 12 ಗಂಟೆಗೆ ಚಿತ್ತಾಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು ಇದರಲ್ಲಿ ಮಾಜಿ ಸಚಿವರು ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ, ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಕನಿಷ್ಠ 10 ಸಾವಿರ ಜನರು ಚಿಂಚೋಳಿ, ಕಲಬುರಗಿ ,ಸೇಡಂ, ಯಾದಗಿರಿ ಮತ್ತು ಚಿತ್ತಾಪುರ ತಾಲೂಕುಗಳಿಂದ ಆಗಮಿಸುವ ನಿರೀಕ್ಷೆ ಇದೆ. ನಂತರ ಪಾದಯಾತ್ರೆ ರಾವೂರ, ವಾಡಿ ಶಹಬಾದ್, ಜೇವರ್ಗಿ,ಶಹಾಪುರ, ದೇವದುರ್ಗ ಕ್ರಾಸ್ ಮೂಲಕ ರಾಯಚೂರು ಜಿಲ್ಲೆ ಪ್ರವೇಶಿಸಲಿದೆ. 40 ದಿನಗಳ ಪಾದಯಾತ್ರೆಯಲ್ಲಿ 15 ಬೃಹತ್ ಬಹಿರಂಗ ಸಭೆ ನಡೆಯಲಿದೆ.ಪ್ರತಿ 20 ಕಿ.ಮೀ ಸಂಚರಿಸಿ ವಾಸ್ತವ್ಯ ಮಾಡಲಾಗುತ್ತದೆ ಎಂದರು.

   ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಬಂಗಾರಪ್ಪ ಅವರ ಪುಣ್ಯ ಸ್ಮರಣೆಯ ದಿನದ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಸೇವೆಯನ್ನು ಸ್ಮರಿಸಲಾಯಿತು. 

  ತಾಲೂಕ ಅಧ್ಯಕ್ಷರಾದ ನಾಗಯ್ಯ ಗುತ್ತೇದಾರ್ ಕರದಾಳ, ಮಾತನಾಡಿ ಸ್ವಾಮೀಜಿಯವರ ಪಾದಯಾತ್ರೆ ಯಶಸ್ವಿಗೆ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು ಎಂದರು. ಮಠದ ಭೂದಾನಿ ಸುರೇಶ್ ಗುತ್ತೇದಾರ್ ಕರದಾಳ ಮೋಹನ್ ಮುಸ್ತೇಜಾರ, ದೇವಪ್ಪ ನಂದೂರ್ ಕರ್ ಅಶೋಕ್ ಗುತ್ತೇದಾರ್ ಹೋರಾಟ ಸಮಿತಿ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್, ಅಂಬಯ್ಯ ಗುತ್ತೇದಾರ ಇಬ್ರಾಹಿಂಪುರ್, ಮಹೇಶ್ ಗುತ್ತೇದಾರ್, ಹೊಳಕುಂದ ಬಿ.ಎಂ ರಾವೂರ್ ಕಾಶಿನಾಥ ಗುತ್ತೇದಾರ್ ಶ್ರೀಶೈಲ ಗುತ್ತೇದಾರ್ ವಾಡಿಯ ಸುನಿಲ ಗುತ್ತೇದಾರ್, ಸಂತೋಷ್ ಗುತ್ತೇದಾರ್ ಸಣ್ಣ ಕಾಶಣ್ಣ ಕರದಾಳ, ಅಮೃತಯ್ಯ ಗುತ್ತೇದಾರ್ ಮತ್ತಿತರ ಅನೇಕರು ಉಪಸ್ಥಿತರಿದ್ದರು. 

*ರಾಷ್ಟ್ರಮಟ್ಟದಲ್ಲಿ ಸಂಘಟನೆಗೆ ಚಿಂತನೆ: ಬಾಲರಾಜ್ ಗುತ್ತೇದಾರ್*

ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿರುವ ಸಮುದಾಯದ ಜನರು ಒಂದೇ ಹೆಸರಿನಲ್ಲಿ ಗುರುತಿಸಿಕೊಳ್ಳಲು ಮತ್ತು ಸಂಘಟನೆಯನ್ನು ಮಾಡಲು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಚರ್ಚೆ ನಡೆದಿದೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಇದು ನಮ್ಮ ಸಮಾಜದ ಬಾಂಧವರಿಗೆ ಶಕ್ತಿಯನ್ನು ನೀಡಲಿದೆ. ಸ್ವಾಮೀಜಿಗಳು ನಡೆಸುವ ಪಾದಯಾತ್ರೆಯ ಯಶಸ್ವಿಗೆ ಸೇಡಂ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಮಾಜದ ಮುಖಂಡರಾದ ಬಾಲರಾಜ ಗುತ್ತೇದಾರ್ ಹೇಳಿದರು.

  ಸೇಡಂ ನಲ್ಲಿ ಅಶೋಕ್ ಗುತ್ತೇದಾರ್ ಅವರ ನಿವಾಸದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನ್ಯಾಯವಾದಿ ಅನಂತಯ್ಯ ಮುಸ್ತಜಾರ್. ಜಗನ್ನಾಥ ಗುತ್ತೇದಾರ್. ವೆಂಕಟಯ್ಯ ಮುಸ್ತಜಾರ್, ಸಾಬಯ್ಯಾಗುತ್ತೇದಾರ್ ಮದ್ರಿ, ವಿಜಯಕುಮಾರ್ ಸುರ್ವಾರ್, ಗುತ್ತೇದಾರ್,ರಾಘವೇಂದ್ರ ಗುತ್ತೇದಾರ್. ನಾಗಯ್ಯ ಗುತ್ತೇದಾರ್. ಚಂದ್ರಯ್ಯ ಕುಕುಂದಿ.ಬಾಲರಾಜ್ ಗೌಡ್ ,ಲಕ್ಷಮಯ್ಯ ಗೌಡ್ ಮುಧೋಳ್,ನಾಗಯ್ಯ ಮುಗುನೂರ್ , ಶಂಕ್ರಯ್ಯ ಕೊಡ್ಲಾ,ಮಲ್ಲಯ್ಯ ಗುತ್ತೇದಾರ್ ಬಲಸ್ವಾಮಿ ಪಾಕಲ್.ಲಾಲಯ್ಯ ಮೆದಕ್,ವೆಂಕಟೇಶ್ ಕೊಡ್ಲಾ,ಯಂಕಟಯ್ಯ ದೇವನೂರು, ಅಮೃತಯ್ಯ ಹಾಲ್ಕೋಡ,

ಲಕ್ಷ್ಮೀ ನಾರಾಯಣ ರಾಘಪುರ್ , ಗೋವಿಂದ ರಾಘಪುರ್ ,ಸಿದ್ದಯ್ಯ ಗುತ್ತೇದಾರ್ ಮತ್ತಿತರರಿದ್ದರು