ಶಿಕ್ಷಣ ನೀತಿಗಳಲ್ಲಿನ ಗೊಂದಲ ನಿವಾರಿಸಿ ತಳಹಂತದಿಂದಲೇ ವ್ಯವಸ್ಥೆ ಬದಲಾಯಿಸಿ: ಡಾ. ಸಿ.ಸಿ. ಪಾಟೀಲ್

ಶಿಕ್ಷಣ ನೀತಿಗಳಲ್ಲಿನ ಗೊಂದಲ ನಿವಾರಿಸಿ ತಳಹಂತದಿಂದಲೇ ವ್ಯವಸ್ಥೆ ಬದಲಾಯಿಸಿ: ಡಾ. ಸಿ.ಸಿ. ಪಾಟೀಲ್

ಶಿಕ್ಷಣ ನೀತಿಗಳಲ್ಲಿನ ಗೊಂದಲ ನಿವಾರಿಸಿ ತಳಹಂತದಿಂದಲೇ ವ್ಯವಸ್ಥೆ ಬದಲಾಯಿಸಿ: ಡಾ. ಸಿ.ಸಿ. ಪಾಟೀಲ್

ಕಲಬುರಗಿ, ಆ.೧೨- ರಾಷ್ಟç ಹಾಗೂ ರಾಜ್ಯ ಸರ್ಕಾರಗಳ ನಡುವಿನ ಒಮ್ಮತವಿಲ್ಲದ ಶಿಕ್ಷಣ ನೀತಿಗಳು ಗೊಂದಲಕಾರಿಯಾಗಿವೆ. ಇಂತಹ ಗೊಂದಲಗಳನ್ನು ನಿವಾರಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ತಳಹಂತದಿಂದಲೇ ಬದಲಾವಣೆ ತರಬೇಕು ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಸಿ.ಸಿ. ಪಾಟೀಲ್ ಅವರು ಹೇಳಿದರು.

ನಗರದ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ೨೦೨೩-೨೦೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಈ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಆ ನೀತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಆಗಿನ ರಾಜ್ಯ ಸರ್ಕಾರವು ಸಹಮತ ವ್ಯಕ್ತಪಡಿಸಿ ಕಾರ್ಯಯೋಜನೆ ರೂಪಿಸಿತ್ತು. ಆದಾಗ್ಯೂ, ರಾಜ್ಯದಲ್ಲಿ ಬದಲಾದ ಸರ್ಕಾರದಿಂದಾಗಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ರಾಜ್ಯದಲ್ಲಿ ವಿಶೇಷ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದರಿಂದಾಗಿ ರಾಜ್ಯದಲ್ಲಿ ಗೊಂದಲಕಾರಿ ಶಿಕ್ಷಣ ನೀತಿಗಳು ಸಾಕಷ್ಟು ಶಿಕ್ಷಣ ವ್ಯವಸ್ಥೆಗೆ ತೊಡಕುಂಟು ಮಾಡಿವೆ ಎಂದರು.

ಈಗ ಇರುವ ಸರ್ಕಾರ ಒಂದು ನೀತಿ ಜಾರಿಗೆ ತಂದರೆ, ಮತ್ತೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಇನ್ನೊಂದು ಸರ್ಕಾರವು ಮತ್ತೊಂದು ಹೊಸ ನೀತಿಯನ್ನು ರೂಪಿಸುತ್ತದೆ. ಹೀಗಾಗಿ ಸರ್ಕಾರಗಳು ಬದಲಾದೆಂತೆಲ್ಲ ಶಿಕ್ಷಣ ನೀತಿಗಳೂ ಸಹ ಬದಲಾಗುತ್ತವೆ ಎಂಬ ಗೊಂದಲದ ವಾತಾವರಣ ನಿರ್ಮಾಣವು ಶಿಕ್ಷಣ ವ್ಯವಸ್ಥೆಗೆ ಸರಿಯಲ್ಲ. ಇಂತಹ ಗೊಂದಲದ ನೀತಿಗಳನ್ನು ಬಿಟ್ಟು ಒಮ್ಮತದ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ಸಲಹೆ ಮಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಕರೆ ನೀಡಿದ ಅವರು, ರಾಷ್ಟ್ರೀಯ ಶಿಕ್ಷಣ ಯೋಜನೆಯು ಮಕ್ಕಳಾಟಿಕೆಯಾಗಿದೆ. ಆರನೇ ಸೆಮ್ ವಿದ್ಯಾರ್ಥಿಗಳು ಪದವಿ ಮುಗಿಸುವ ಹಂತದಲ್ಲಿದ್ದರೂ ಪ್ರಥಮ ಸೆಮ್ ಅಂಕಪಟ್ಟಿ ಇನ್ನೂ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ದೇಶವು ಈಗಾಗಲೇ ೭೫ ವರ್ಷ ಸ್ವಾತಂತ್ರ್ಯೋವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸಹ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗುತ್ತಿಲ್ಲ. ನಮ್ಮ ಸಾಧನೆಯನ್ನು ನಾವು ನೋಡಿಕೊಂಡರೆ ನಮ್ಮ ಸ್ಥಿತಿ ಅರ್ಥವಾಗುತ್ತದೆ. ಕ್ರೀಡೆಯಲ್ಲಿಯೂ ಸಹ ನಾವು ಹಿಂದುಳಿದಿದ್ದೇವೆ. ಓಲಂಪಿಕ್ಸ್ ದಲ್ಲಿ ಚಿನ್ನ ಹೊರತುಪಡಿಸಿ ನಮ್ಮ ದೇಶ ಕೇವಲ ಆರು ಪದಕಗಳನ್ನು ಗೆದ್ದಿದೆ. ಇದು ನಮ್ಮ ವ್ಯವಸ್ಥೆಯ ಅಧೋಗತಿಯನ್ನು ತೋರಿಸುತ್ತದೆ. ಇದರ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅತ್ಯವಶ್ಯ ಎಂದು ಅವರು ಹೇಳಿದರು.

ನಮ್ಮ ಮಹಾವಿದ್ಯಾಲಯಕ್ಕೆ ನ್ಯಾಕ್‌ನಿಂದ ಬಿ++ ಗ್ರೇಡ್ ಬಂದಿದ್ದು ಹೆಮ್ಮೆಯ ಸಂಗತಿಯಾಗಿದೆ. ಮಹಾವಿದ್ಯಾಲಯದಲ್ಲಿ ನುರಿದ ಪ್ರಾಧ್ಯಾಪಕರಿದ್ದಾರೆ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರೋಹಿನಿಕುಮಾರ್ ಎಸ್. ಹಳ್ಳಿ ಅವರು ಮಾತನಾಡಿದರು. ಅತಿಥಿಗಳಾಗಿ ರಸಾಯನಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಬಡಿಗೇರ್, ಸಾಂಸ್ಕೃತಿಕ ಸಲಹೆಗಾರರಾದ ಡಾ. ಮೈತ್ರಾದೇವಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶಂಕ್ರೆಪ್ಪ ಕಲಬುರ್ಗಿ ಅವರು ಆಗಮಿಸಿದ್ದರು. ಆರಂಭದಲ್ಲಿ ಡಾ. ಮೈತ್ರಾದೇವಿ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಡಾ. ಶಂಕ್ರೆಪ್ಪ ಕಲಬುರ್ಗಿ ಅವರು ಕ್ರೀಡಾ ವಾರ್ಷಿಕ ವರದಿಯನ್ನು ಓದಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮೈತ್ರಾದೇವಿ ಅವರು ಸ್ವಾಗತಿಸಿದರು. ಗ್ರಂಥಪಾಲಕ ಡಾ. ಪ್ರಾಣೇಶ್ ಅವರು ವಂದಿಸಿದರು. ಬಿಎಸ್‌ಸಿ ದ್ವಿತೀಯ ಸೆಮ್ ವಿದ್ಯಾರ್ಥಿನಿ ನಾಗರತ್ನ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.