ಮುರ್ಕಿ ಸರಕಾರಿ ಶಾಲೆಯಲ್ಲಿ ಬಸವ ಜಯಂತಿ ಭಾವಪೂರ್ಣವಾಗಿ ಆಚರಣೆ"

ಇಲ್ಲಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಮುರ್ಕಿ ಯಲ್ಲಿ ಬಸವ ಜಯಂತಿಯನ್ನು ಅದ್ದುರಿಯಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಮಲಾ ಮಾಶೆಟ್ಟಿ ವಹಿಸಿದರು ಮತ್ತು ಮುಖ್ಯ ಅತಿಥಿಗಳಾಗಿ ಡಾ.ಅಮರಜೀತ್ ಠಾಕೂರ ಸಂತೋಶ ಬಾರೋಳೆ, ಮಾರುತಿರಾವ ಬಿರಾದರ ,ಉಮಾಕಾಂತ ಬಾರೋಳೆ, ರಾಮಲಿಂಗ ಹಲ್ಕಂಡಗೆ ಮನೋಜ್ ಬಿರಾದರ ಭಾಗವಹಿಸಿದರು. ಬಸವೇಶ್ವರರ ಭಾವಚಿತ್ರಕ್ಕೆ ಅತಿಥಿಗಳಿಂದ ಪೂಜೆಯನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .
ಮುಖ್ಯಗುರುಗಳಾದ ಶ್ರೀ ರಾಜು ಸಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಡಿ ಬಸವಣ್ಣನವರ ಜೀವನ ಸಾದನೆ ಬಗ್ಗೆ ತಿಳಿಸುತ್ತಾ 12 ನೇ ಶತಮಾನದ ಸಾಮಾಜಿಕ ಚಳುವಳಿ ಮತ್ತು ವಚನ ಸಾಹಿತ್ಯದ ಕುರಿತು ಹಾಗು ಅನುಭವ ಮಂಟಪ ಮತ್ತು ಜಾಗತ್ತಿಗೆ ಅದರ ಕೊಡುಗೆಯ ಬಗ್ಗೆ ತಿಳಿಸಿದರು
ಶ್ರೀ ಮಾರುತಿರಾವ ಬಿರಾದರ ಮಾತನಾಡಿ ಬಸವಣ್ಣನವರ ಹೋರಾಟ ಮತ್ತು ಸಮಾಜಕ್ಕೆ ಅವರ ಕೊಡುಗೆಯ ಬಗ್ಗೆ ತಿಳಿಸಿದರು
ಸಂತೋಶ ಬಾರೋಳೆ ಮಾತನಾಡಿ ಶಾಲೆಯಲ್ಲಿ ಇಂತಹ ಮಾಹಾನ ವ್ಯಕ್ತಿಗಳ ಜಯಂತಿಗಳನ್ನು ಆಚಿರಿಸುವುದರಿಂದ ಮುಂದಿನ ಪೀಳಿಗೆ ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ನುಡಿದರು ಶಾಲೆಯಲ್ಲಿ ಎಸ್.ಡಿ.ಎಮ್.ಸಿ ತಂಡ ಮತ್ತು ಮುಖ್ಯಗುರುಗಳು ಸೇರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ತುಂಬಾ ಆನಂದವಾಗಿದೆ ಎಂದರು
ಕಾರ್ಯಕ್ರಮವನ್ನು ಶ್ರೀ ಅಂಕೂತ ಖಂಡಿವಾಲೆ ನಿರೂಪಿಸಿದರು ಶ್ರೀಮತಿ ಸಂಗೀತಾ ನೆಳೆಗೆ ಸ್ವಗತ ಗೀತೆ ಹಾಡಿದರು ಮತ್ತು ಕುಂಟೆ ರವಿಕಾಂತ ಅತಿಥಿಗಳಿಗೆ ಸ್ವಾಗತ ಕೋರಿದರು ಸುನೀಲ್ ಬಾರೋಳೆ ವಚನ ನುಡಿದರು ಡಾ ಅಮರಜೀತ ಠಕೂರ ವಂದನಾರ್ಪನೆ ಮಾಡಿದರು ಮತ್ತು ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂಜಯಕುಮಾರ ಮಮದಪುರೆ ,ಶಶಿಕಾಂತ ಜಾದವ,ಬಸ್ವಂತ ದೇವರ್ಶೆ, ಸಂಗೀತಾ ಬಾಲುರಕರ,ರಸೀಕಾ ಬಾಯಿ ಮದುಕರ ಖಂದಾರೆ,ಪ್ರಕಾಶ ಎಡವೆ,ಮಹೇಶ ಜೋಂಡೆ ಬಾಗವಹಿಸಿದರು ಮತ್ತು ಗ್ರಾಮದ ಹಿರಿಯರು ಗಣ್ಯವಕ್ತಿಗಳು ಸಹ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು