ಭೀಮಾ ಕೋರೆಗಾಂವ ವಿಜಯೋತ್ಸವ : ದಲಿತರ ಬೃಹತ್ ಸಮಾವೇಶ

ಭೀಮಾ ಕೋರೆಗಾಂವ ವಿಜಯೋತ್ಸವ : ದಲಿತರ ಬೃಹತ್ ಸಮಾವೇಶ

ಭೀಮಾ ಕೋರೆಗಾಂವ ವಿಜಯೋತ್ಸವ : ದಲಿತರ ಬೃಹತ್ ಸಮಾವೇಶ 

ಶಹಾಬಾದ : - ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಜ. 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ದಲಿತರ ಸ್ವಾಭಿಮಾನ ಜಾಗೃತಿ ದಿನ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಮಹಾದೇವ ತರನಳ್ಳಿ ತಿಳಿಸಿದ್ದಾರೆ. 

ಅವರು ಮಾದ್ಯಮ ಗಳ ಜೊತೆ ಮಾತನಾಡಿ, ಅಂದು ಸಾಯಂಕಾಲ 4:30 ಗಂಟೆಗೆ ಕಲ್ಬುರ್ಗಿ ನಗರದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು. 

ತಾಲ್ಲೂಕಿನಿಂದ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸುಮಾರು 200 ಕಾರ್ಯಕರ್ತರ ಜೊತೆಗೆ ಹಿತೈಷಿಗಳು, ಭೀಮ ಅಭಿಮಾನಿಗಳು, ಪ್ರಗತಿಪರರು ಅಂದಿನ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ