ಯುವನಿಧಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ಸೂಚನೆ

ಯುವನಿಧಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ  ಜಿಲ್ಲಾಧಿಕಾರಿ ಬಿ. ಫೌಜಿಯಾ ಸೂಚನೆ

ಕಲಬುರಗಿ: ಆ.6 (ಕ.ವಾ.) ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಪರಿಶೀಲನೆ ಸಭೆ ನಡೆಯಿತು. ಯುವನಿಧಿ ಯೋಜನೆಯ ಕುರಿತು ಇದು ಯುವಕರ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದ ಯೋಜನೆ.ಇದಾಗಿದೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.

 ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರ್ಹ ಫಲಾನುಭವಿಗಳಿಗೆಲ್ಲರಿಗೂ ತಲುಪುವಂತಾಗಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರು ಹಾಗೂ ಪದವಿ/ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

 ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಿಗೆ 2023-24ನೇ ಸಾಲಿನಲ್ಲಿ ಪಾಸಾಗಿರುವ ಎಲ್ಲಾ ವಿದ್ಯಾರ್ಥಿಗಳ ಪಿ.ಡಿ.ಸಿ ದಾಖಲೆಗಳನ್ನು ನ್ಯಾಡ ಪೋರ್ಟಲ್( NAD) ನಲ್ಲಿ ಅಪಲೋಡ ಮಾಡಲು ಸೂಚಿಸಿದರು. 

 ಇನ್ನೂ ಕೆಲವು ವಿಶ್ವವಿದ್ಯಾಲಯಗಳಿಂದ ಅಂತಿಮ ವರ್ಷ/ಸೆಮಿಸ್ಟ್ಟರ್ ಪರೀಕ್ಷೆ ಜಾರಿಯಲ್ಲಿದ್ದು ಇವರುಗಳ ಮೌಲ್ಯಮಾಪನವನ್ನು ಆದಷ್ಟು ಬೇಗನೆ ಮುಗಿಸಿ ಫಲಿತಾಂಶ ನೀಡಿ (NAD) ಪೋರ್ಟಲ್ ನಲ್ಲಿ ಪಿ.ಡಿ.ಸಿ ದಾಖಲೆಗಳನ್ನು ಅಪ್ ಲೋಡ ಮಾಡಲು ಸೂಚಿಸಿದರು.. ಎಲ್ಲಾ ಡಿಪ್ಲೋಮಾ ಕಾಲೇಜುಗಳ ಅಂತಿಮ ಪ್ರವಿಸನಲ್ ಡಿಪ್ಲೋಮಾ ಸರ್ಟಿಫಿಕೆಟ್‍ಅನ್ನು ಡೈರೆಕ್ಟರ್ ಆಫ್‍ಟೆಕ್ನಿಕಲ್ ಎಜ್ಯೂಕೇಷನ್ ಬೊರ್ಡ ಇವರಿಂದ (NAD) ಪೋರ್ಟಲ್‍ನಲ್ಲಿ ಅಪ್ ಲೋಡ ಮಾಡುವಂತೆ ನೋಡಿಕೊಳ್ಳಲು ಪ್ರಾಂಶುಪಾಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

 ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ಪದವಿ/ಡಿಪ್ಲೊಮಾ ಕಾಲೇಜುಗಳಲ್ಲಿ ಯುವನಿಧಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸೂಚಿಸಿದರು. ಈ ಯೋಜನೆ ಅಡಿಯಲ್ಲಿ ಮ್ಯಾನ್ಯೂವಲ್ ವೆರಿಫೀಕೇಶನ್‍ಗಾಗಿ ಪೆಂಡಿಂಗ್ ಇರುವ 8 ರಿಂದ 10ನೇ ತರಗತಿಯ ವರೆಗೆ ಡೋಮೇಶಿಯಲ್ ವೆರಿಫೀಕೇಶನ್ ಡಿ.ಡಿ.ಪಿ.ಐ, ಹಾಗೂ ಪಿ.ಯು.ಸಿ ವೆರಿಫೀಕೇಶನ್ ಡಿ.ಡಿ.ಪಿ.ಯು ಮತ್ತು ಐ.ಟಿ.ಐ, ಡಿಪ್ಲೊಮಾ ಪದವಿ ದಾಖಲೆ ಪರಿಶೀಲನೆಯನ್ನು ಡಿ.ಇ.ಇ.ಒ ರವರು ದಾಖಲೆಗಳ ಪರಿಶೀಲನೆಯನ್ನು ಆದಷ್ಟು ಬೇಗನೆ ಮಾಡಿ ಮುಗಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

     ಈ ಯೋಜನೆ ವ್ಯಾಪಕ ಪ್ರಚಾರಕ್ಕಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಯವರು ತಮ್ಮ ವಾಟ್ಸ್ಅಪ್‍ಗ್ರೂಪ್‍ನಲ್ಲಿ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಯುವನಿಧಿ ಪೋಸ್ಟರ್ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೆ ಮಾಹಿತಿ ಇದ್ದರು ಹಂಚಿಕೊಳ್ಳುವುದರ ಮೂಲಕ ಈ ಯೋಜನೆಯು ಹಳ್ಳಿಯ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ತಲುಪುವಂತ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.      

 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ರಾಯಪ್ಪ ಹುಣಸಿಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವೆ ಮೇಧಾವಿ ಕಟ್ಟಿಮನಿ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದಗೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕರಾದ ರವೀಂದರನಾಥ ಬಾಳ್ಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀ ಮುರಲೀಧರ ರತ್ನಗಿರಿ, ಶಾಲಾ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದನೇಕರ್ ಪದವಿ ಪೂರ್ವ ಶಿಕ್ಷಣ ಇಲಾಖೆ, ಅಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಪ್ರಭಾರಿ ಸಹಾಯಕ ನಿರ್ದೇಶಕ ಪ್ರಭಾಕರ,ಎಸ್.ಬಿ.ಕಾಲೇಜಿನ ಪದವಿ ಪೂರ್ವ ಪ್ರಾಂಶುಪಾಲರಾದ ದಯಾನಂದ ಹುಡೇಲ್, ಶಾಲಾ ಕಾಲೇಜಿನ ಮುಖ್ಯಸ್ಥರು ಇತರೆ ಶಾಲೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಜಿ.ಟಿ.ಟಿ.ಸಿ ಪ್ರಾಚಾರ್ಯರು ವ್ಯಾಪಕ ಪ್ರಚಾರ ಮಾಡಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೂಚನೆ

ಕಲಬುರಗಿ: ಆ.6 (ಕ.ವಾ.) ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಜಿ.ಟಿ.ಟಿ.ಸಿ.ಯ ಪ್ರಾಚಾರ್ಯರು ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಹಾಗು ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಸಂಸ್ಥೆಗಳಲ್ಲಿರುವ ಕೋರ್ಸುಗಳು ಮತ್ತು ಅದರಿಂದಾಗುವ ಪ್ರಯೋಜನೆಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮಾಡಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಸೂಚಿಸಿದರು.

 ಅವರು ಸೋಮವಾರ ದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಹಾಗು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದ ಪ್ರವೇಶಗಳ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸಕ್ತ ಸಾಲಿನ ಜಿಲ್ಲೆಯ 2024-25ನೇ ಸಾಲಿನ ಜಿಲ್ಲೆಯ ಸರಕಾರಿ ಐ.ಟಿ.ಐ.ಗಳಲ್ಲಿ 56.63% ಮತ್ತು ಜಿಟಿಟಿಸಿಯಲ್ಲಿ 64.16% ಪ್ರವೇಶಗಳಾಗಿರುವ ಪ್ರಾಂಶುಪಾಲರೊಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಎರಡೂ ತರಬೇತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೂರು ಪ್ರತಿಶತಃ ಪ್ರವೇಶಗಳನ್ನು ಮಾಡಿಕೊಳ್ಳಲು ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದರು.

 ಪ್ರವೇಶಗಳ ಪ್ರಚಾರಕ್ಕೆ ಪತ್ರಿಕೆ ಹಾಗು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲು ಹೇಳಿದರು ಈ ಕಾರ್ಯಕ್ಕೆ ಜಿಲ್ಲಾಡಳಿತ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು ಕೋರ್ಸುಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಡ್ ಹೆಲ್ಡ್ ಹೈ ಫೌಂಡೇಶನಂಥ ಸರ್ಕಾರೇತರ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ವ್ಯಾಪಕವಾದ ಪ್ರಚಾರ ಮಾಡಲು ಸಲಹೆ ನೀಡಿದರು.

  ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ಹಾಜರಾಗಿರುವ ಮತ್ತು ಪಿ.ಯು.ಸಿ. ಫೇಲಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಪ್ರಾಚಾರ್ಯರುಗಳಿಗೆ ನೀಡಲು ಜಿಲ್ಲಾಧಿಕಾರಿ ಆದೇಶಿಸಿದರು. 

ಅದಲ್ಲದೇ ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಹೊಸ ಕೋರ್ಸುಗಳ (ಟಾಟಾ ಉದ್ಯೋಗ ಮತ್ತು ಜಿ.ಟಿ.ಟಿ.ಸಿ.)ಬಗ್ಗೆ ವಿದ್ಯಾರ್ಥಿಗಳಿಗಲ್ಲದೆ ಅವರ ಪಾಲಕರಿಗೂ ಸಹ ಅರಿವು ಮೂಡಿಸಲು ಡಿ.ಡಿ.ಪಿ.ಐ., ಡಿ.ಡಿ.ಪಿ.ಯು. ಮತ್ತು ಬಿ.ಇ.ಒ.ಗಳಿಗೆ ಸೂಚನೆ ನೀಡಿದರು. 

ಅದಲ್ಲದೆ ಪ್ರವೇಶಗಳ ಪ್ರಚಾರಕ್ಕಾಗಿ ಆಗಮಿಸಿದ ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಪ್ರಾಚಾರ್ಯರುಗಳು ಮತ್ತು ಸಿಬ್ಬಂದಿಯವರಿಗೆ ಪ್ರೌಢಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರು ಸಹಕಾರ ನೀಡಲು ಸೂಚಿಸಿದರು. ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಸಂಸ್ಥೆಗಳಿಗೆ ಕೈಗಾರಿಕಾ ಭೇಟಿಯನ್ನು (Industrial) ಆಯೋಜಿಸಲು ಸೂಚನೆ ನೀಡಿದರು.

ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಸಂಸ್ಥೆಗಳ ಪ್ರಾಚಾರ್ಯರು NRLM(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ಮತ್ತು NULM (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ಯೋಜನೆಯಡಿ ಜಿಲ್ಲೆಯಲ್ಲಿರುವ ನೂರಾರು ಸ್ವಸಹಾಯ ಗುಂಪುಗಳನ್ನು ಸಂಪರ್ಕಿಸಿ ಅವರುಗಳ ವಿವರಗಳನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರವೇಶಕ್ಕಾಗಿ ಉತ್ತೇಜಿಸಲು ಸೂಚಿಸಿದರು.

ಸಿ.ಡಿ.ಪಿ.ಒ.ಗಳನ್ನು ಸಂಪರ್ಕಿಸಿ ಮಹಿಳೆಯರಾಗಿಯೇ ಇರುವ ಡ್ರೆಸ್ ಮೇಕಿಂಗ್ ನಂಥ ಕೋರ್ಸುಗಳ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ತರಬೇತಿದಾರರು ಪ್ರವೇಶ ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಲು ಜಿಲ್ಲಾಧಿಕಾರಿಗಳು ಒತ್ತು ನೀಡಿದರು. ಒಟ್ಟಾರೆಯಾಗಿ ಪ್ರವೇಶ ಪ್ರಕ್ರಿಯೆಗೆ ನಿಗಧಿ ಪಡಿಸಿದ ದಿನಾಂಕ ಆಗಸ್ಟ್ 31 ರೊಳಗೆ ಮತ್ತು ಎಸ್.ಎಲ್.ಎಲ್.ಸಿ. ಪೂರಕ ಪರೀಕ್ಷೆಯ ಫಲಿತಾಂಶವನ್ನು ಗಮದಲ್ಲಿಟ್ಟುಕೊಂಡು ಐ.ಟಿ.ಐ. ಮತ್ತು ಜಿ.ಟಿ.ಟಿ.ಸಿ. ಸಂಸ್ಥೆಗಳಲ್ಲಿ ನೂರು ಪ್ರತಿಶತಃ ಪ್ರವೇಶ ಮಾಡಿಕೊಳ್ಳಬೇಕೆಂದರು. 

       ಅಪರ ಜಿಲ್ಲಾಧಿಕಾರಿಗಳಾದ ಶ್ರೀ ರಾಯಪ್ಪ ಹುಣಸಿಗಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ರವೀಂದರನಾಥ ಬಾಳ್ಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀ ಮುರಲೀಧರ ರತ್ನಗಿರಿ, ಶಾಲಾ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದನೇಕರ್ ಪದವಿ ಪೂರ್ವ ಶಿಕ್ಷಣ ಇಲಾಖೆ, ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಚಾರ್ಯರು, ಜಿಟಿಟಿಸಿ, ಕಲಬುರಗಿ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಹಾಗು ಸಿಬ್ಬಂದಿಯವರು ಉಪಸ್ಥಿತರಿದ್ದರು.