ಎಳ್ಳಮಾವಾಸ್ಯೆ ಹಬ್ಬವನ್ನು ಅದ್ದೂರಿಯಾಗಿ ಆಚರಣೆ
ಎಳ್ಳಮಾವಾಸ್ಯೆ ಹಬ್ಬವನ್ನು ಅದ್ದೂರಿಯಾಗಿ ಆಚರಣೆ
ಕಲಬುರಗಿ ತಾಲೂಕಿನ ನಂದಿಕೂರು ಗ್ರಾಮದ ಬಳಿ ಇರುವ ಮೌನೇಶ್ ಡಿ ನಿಂಬ್ಬಾಳ ಅವರ ಜಮೀನಿನಲ್ಲಿ ಎಳ್ಳಮಾವಾಸ್ಯೆ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಎಳ್ಳಮಾವಾಸ್ಯೆ ಸಂಭ್ರಮವು ಕಲಬುರಗಿ ಜಿಲ್ಲೆಯಾದ್ಯಂತ ಕಳೆಗಟ್ಟಿದ್ದು, ಮೌನೇಶ್ ಡಿ ನಿಂಬ್ಬಾಳ ಅವರ ಜಮೀನಿನಲ್ಲಿ ರೈತರು,ರಾಜ್ಯಕೀಯ ಗಣ್ಯರು ಹಾಗೂ ಕುಟುಂಬಸ್ಥರು ಭೂಮಿತಾಯಿಗೆ ಚರಗ ಚೆಲ್ಲಿ, ಸಹಪಂತಿ ಭೋಜನವನ್ನು ಸೇವಿಸಿ ವಿಜೃಂಭಣೆಯಿAದ ಆಚರಣೆ ಮಾಡಿದ್ದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅವರು, ರೈತರ ಪ್ರಮುಖ ಹಬ್ಬವಾದ ಎಳ್ಳಮಾವಾಸೆಯು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ರೈತರಿಗೆ ಇದೊಂದು ದೊಡ್ಡ ಹಬ್ಬವಾಗಿದ್ದು, ರೈತರು ಕುಟುಂಬದೊAದಿಗೆ ಜಮೀನುಗಳಿಗೆ ತೆರಳಿ ಭೂತಾಯಿಗೆ ಚರಗ ಚೆಲ್ಲಿ ಸಹಪಂಥಿ ಭೋಜನವನ್ನು ಮಾಡುವ ಮೂಲಕ ಸಂಭ್ರಮಿಸುವುದು ಈ ಹಬ್ಬದ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಅವರು, ಮೌನೇಶ್ ನಿಂಬಾಳಾಗು ಮನೋಹರ್ ಪೊದ್ದಾರ್ ಅವರ ಜಮೀನಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಎಳ್ಳಮವಾಸ್ಯೆ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಣೆ ಮಾಡಲಾಗುತ್ತಿದೆ. ಅವರಿಗೆ ದೇವರು ಇನ್ನಷ್ಟು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದ್ರು.
ಈ ಸಂಧರ್ಭದಲ್ಲಿ ಮನೋಹರ ಪೊದ್ದಾರ್, ಶಿವಾಜಿ ಪಾಟೀಲ್, ರಾಜಶೇಖರ ಅಲ್ಲಾಪೂರ್, ದೀಲಿಪ್ ಹೋಡಲ್, ದೇವೆಂದ್ರ ದೇಸಾಯಿ ಕಲ್ಲೂರ್, ಮಹಾದೇವಪ್ಪ ಅಂಗಡಿ, ಮಲ್ಲಯ್ಯ ಗುತ್ತೆದಾರ್ ಸೇರಿದಂತೆ ಮೌನೇಶ್ ನಿಂಬ್ಬಾಳ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.