ಕರ್ನಾಟಕ ಸಾಹಿತ್ಯ ಸಂಘದಿಂದ ನೂತನ ಕುಲಸಚಿವರು ಶ್ರೀಮತಿ ಸುರೇಖಾ ಕಿಣಗಿ ಅವರಿಗೆ ಗೌರವ ಸನ್ಮಾನ.
ಕರ್ನಾಟಕ ಸಾಹಿತ್ಯ ಸಂಘದಿಂದ ನೂತನ ಕುಲಸಚಿವರು ಶ್ರೀಮತಿ ಸುರೇಖಾ ಕಿಣಗಿ ಅವರಿಗೆ ಗೌರವ ಸನ್ಮಾನ.
ಡಿ.10: ಕರ್ನಾಟಕ ಸಾಹಿತ್ಯ ಸಂಘ ಬೀದರ ಪರವಾಗಿ ಬೀದರ ವಿಶ್ವವಿದ್ಯಾಲಯ ಬೀದರಗೆ ಆಡಳಿತ ವಿಭಾಗಕ್ಕೆ ನೂತನವಾಗಿ ಕುಲಸಚಿವರಾಗಿ ನೇಮಕಗೊಂಡ ಶ್ರೀಮತಿ ಸುರೇಖಾ ಕಿಣಗಿ ಯವರನ್ನು ಸಾಹಿತ್ಯ ಸಂಘದ ಪದಾಧಿಕಾರಿಗಳು ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಸಾಹಿತಿಗಳು ಆದ ಡಾ.ಜಗನ್ನಾಥ ಹೆಬ್ಬಾಳೆ ಪ್ರಧಾನ ಕಾರ್ಯ ದರ್ಶಿಗಳಾದ ಶ್ರೀ ನಿಜಲಿಂಗಪ್ಪ ತಗಾರೆ ಪ್ರೊ ಉಮಾಕಾಂತ ಪಾಟೀಲ, ಪ್ರೊ ರಾಜೇಂದ್ರ ಬಿರಾದರ, ಪ್ರೊ ಸಂಜುಕುಮಾರ ತಾಂದಳೆ , ಪ್ರೊ ಪ್ರಭುಶೆಟ್ಟಿ ಮೂಲಗೆ, ಡಾ ಸುನಿತಾ ಕೂಡ್ಲಿಕರ , ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಶ್ರೀ ಪ್ರಕಾಶ ಕನ್ನಾಳೆ , ಶ್ರೀ ಶಿವಶರಣಪ್ಪ ಗಣೇಶಪೂರ, ಶ್ರೀ ಉಮಾಕಾಂತ ಮಾನಶೆಟ್ಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಬೀದರ ದ ಕರ್ನಾಟಕ ಸಾಹಿತ್ಯ ಸಂಘದ ಜಂಟಿ ಕಾರ್ಯದರ್ಶಿ ಯವರಾದ ಡಾ.ರಾಜುಕುಮರ ಹೆಬ್ಬಾಳೆಯವರು ಪತ್ರಿಕೆಗೆ ತಿಳಿಸಿದ್ದಾರೆ.
ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್