134ನೇ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರ ಅಭಿನಂದನೆ ಹಾಗೂ ಹುಟ್ಟು ಹಬ್ಬದ ಸಮಾರಂಭ :..

134ನೇ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರ ಅಭಿನಂದನೆ ಹಾಗೂ ಹುಟ್ಟು ಹಬ್ಬದ ಸಮಾರಂಭ :..

134ನೇ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರ ಅಭಿನಂದನೆ ಹಾಗೂ ಹುಟ್ಟು ಹಬ್ಬದ ಸಮಾರಂಭ :..

ಶಹಾಬಾದ : - ಡಾ.ಬಾಬಾ ಸಾಹೇಬ ಅಂಬೇಡ್ಕರ ರವರ 134ನೇ ಜಯಂತಿಯ ಅಧ್ಯಕ್ಷರಾಗಿ ಶಂಕರ ಅಳೋಳ್ಳಿ ಯವರು ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ನೇರವೇರಿಸಿದಕ್ಕೆ ಅಭಿನಂದನೆ ಹಾಗೂ ಜು.30ರಂದು ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಭವ್ಯವಾದ ಸಮಾರಂಭ ಆಯೋಜಿಸಲಾಗಿದೆ ಎಂದು ಹುಟ್ಟು ಹಬ್ಬ ಹಾಗೂ ಅಭಿನಂದನಾ ಸಮಾರಂಭದ ಉಸ್ತುವಾರಿ ಮಹಾದೇವ ತರನಳ್ಳಿ ತಿಳಿಸಿದರು.

ಅವರು ಹುಟ್ಟು ಹಬ್ಬದ ಮತ್ತು ಅಭಿನಂದನಾ ಸಮಾರಂಭದ ಅಂಗವಾಗಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. 

ಅಂದು ಸಾಯಂಕಾಲ 5 ಗಂಟೆಗೆ ನಗರದ ರಾಯಲ್ ಫಂಕ್ಷನ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಾಡಾ ನಿಗಮ ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ಎಂಎ ರಶೀದ, ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ, ಉದ್ದಮಿದಾರ ನರೇಂದ್ರ ವರ್ಮ, ಬಿಜೆಪಿ ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ವಿವರಿಸಿದರು. 

ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಮತ್ತು ಮಹಿಳೆಯರು ಹಾಗೂ ರೈತ, ಕಾರ್ಮಿಕರನ್ನು ಪುರಸ್ಕರಿಸಿ, ಸನ್ಮಾನಿಸುವುದರ ಜೊತೆಗೆ ಅನ್ನಸಂತರ್ಪಣೆ ಕೂಡ ಮಾಡಲಾಗುವುದು ಎಂದರು. 

ಪತ್ರಿಕಾ ಗೋಷ್ಠಿಯಲ್ಲಿ ಭೀಮಯ್ಯ ಗುತ್ತೆದಾರ ಭಂಕೂರ, ಕಿರಣ ಚಹ್ವಾಣ, ಶಿವಕುಮಾರ ನಾಟೀಕಾರ, ಬಸವರಾಜ ದಂಡಗುಲಕರ, ಮಹ್ಮದ ಮಸ್ತಾನ, ಮಲ್ಲಣ್ಣ ಮಸ್ಕಿ, ಗಂಗಾರಾಮ ರಾಠೋಡ, ಸುಭಾಷ ಸಾಕ್ರೆ, ಶರಣು ಧನ್ನೇಕರ, ಅಮ್ಜದ ಜಮಾದಾರ, ಅನಿಲ ಮೈನಾಳಕರ, ಬಾಬಾ ಖಾನ, ಯೂಸುಷ ಹುಸೇನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.