ನನಗೆ ಮತ್ತು ನನ್ನ ಮಗನಿಗೆ ಎರಡು ಬಾರಿ ಶಾಸಕ, ಸಂಸದರನ್ನಾಗಿ ಮಾಡಿದ್ದೀರಿ, ಸಾಯುವ ವರೆಗೆ ನಿಮ್ಮ ಋಣ ತಿರಿಸಲು ಆಗುವುದಿಲ್ಲ : ಡಾ. ಉಮೇಶ ಜಾಧವ

ನನಗೆ ಮತ್ತು ನನ್ನ ಮಗನಿಗೆ ಎರಡು ಬಾರಿ ಶಾಸಕ, ಸಂಸದರನ್ನಾಗಿ ಮಾಡಿದ್ದೀರಿ,  ಸಾಯುವ ವರೆಗೆ ನಿಮ್ಮ ಋಣ ತಿರಿಸಲು ಆಗುವುದಿಲ್ಲ : ಡಾ. ಉಮೇಶ ಜಾಧವ

ನನಗೆ ಮತ್ತು ನನ್ನ ಮಗನಿಗೆ ಎರಡು ಬಾರಿ ಶಾಸಕ, ಸಂಸದರನ್ನಾಗಿ ಮಾಡಿದ್ದೀರಿ, 

ಸಾಯುವ ವರೆಗೆ ನಿಮ್ಮ ಋಣ ತಿರಿಸಲು ಆಗುವುದಿಲ್ಲ : ಡಾ. ಉಮೇಶ ಜಾಧವ 

ಚಿಂಚೋಳಿ :   ಕಳೆದ ಹನ್ನೆರಡು ವರ್ಷಗಳ ಹಿಂದೆ ಬಂಜಾರ ಸಮಾಜ ಕತ್ತೆಲೆಯಲ್ಲಿ ಬದುಕು ಸಾಗಿಸುತ್ತಿತ್ತು. ದನ - ಕರುಗಳಿಗೆ ಕುಡಿಯಲಿಕ್ಕೆ ನೀರು ಸಿಗುತ್ತಿರಲಿಲ್ಲ. ತಾಂಡ ನಿವಾಸಿಗಳು ತೊಟ್ಟು ನೀರಿಗಾಗಿ ಪರಿತಪ್ಪಿಸುತ್ತಿದ್ದರು. ನನಗೆ ಮತ್ತು ನನ್ನ ಮಗ ಡಾ.ಅವಿನಾಶ ಜಾಧವಗೆ ಎರಡು ಬಾರಿ ಶಾಸಕರಾಗಿ ನನಗೂ ಸಂಸದರಾಗಿ ಮಾಡಿದ್ದೀರಿ, ಸಾಯುವ ವರೆಗೆ ಚಿಂಚೋಳಿ ತಾಲೂಕಿನ ಎಲ್ಲಾ ಸಮುದಾಯಗಳ ಋಣ ತೀರಿಸಲಿಕ್ಕೆ ಆಗುವುದಿಲ್ಲ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

ತಾಲೂಕಿನ ಗಡಿಲಿಂಗದಳ್ಳಿಯ ಶಿವರಾಮ ನಾಯಕ ತಾಂಡದಲ್ಲಿ 44ನೇ ಹನುಮಾನ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಮಾತಾನಾಡಿದವರು, 

ಬಂಜಾರ ಸಮಾಜ ಬಂಧುಗಳು ಆವತಾರ ಪುರಷ ರಾಮನ ಬಗ್ಗೆ ಅಪಾರ ನಂಬಿಕೆ ಹಾಗೂ ಶ್ರೆದ್ದೆ ಇಟ್ಟುಕೊಂಡಿದ್ದಾರೆ.

ಪ್ರತಿ ದಿನ ಮುಂಜಾನೆ ಎದ್ದ ತಕ್ಷಣ ರಾಮ ರಾಮವೆಂದು ಜಪಿಸಿಕೊಂಡು ಮುನ್ನಡೆಯುವದು ನಮ್ಮಲ್ಲಿ ಇದೆ. 

ಆತ್ಮ ಶುದ್ಧಿಯಿಂದ ರಾಮನನ್ನು ಕಂಡರೆ ಜನ್ಮವು ಪಾವನವಾಗುವುದು. ನಿಸ್ವಾರ್ಥ ಭಾವನೆಯಿಂದ ಶ್ರೀರಾಮನ ನಾಮಸ್ಮರಣೆ ಮಾಡಿದರೆ ಜೀವನವು ಬೆಳಗಿ, ಅಜ್ಞಾನ ಹಾಗೂ ಅತಿ ಆಸೆಯಿಂದ

ಕೂಡಿದ ನಮ್ಮ ಕತ್ತಲು ತೊಲಗಿ ಬದುಕಿಗೆ ಶ್ರೀ ರಾಮನ ಸ್ಮರಣೆಯಿಂದ ಜ್ಞಾನದ ಅರಿವಿನ ಬೆಳಕು ಚೆಲ್ಲುವುದು ಎಂದರು. 

ಈ ಸಂದರ್ಭದಲ್ಲಿ ಗ್ರಾಮಾಂತರ ಮಾಜಿ ಉಪಾಧ್ಯಕ್ಷರಾದ ಶಾಂತರೆಡ್ಡಿ ನರನಾಳ, ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ರವಿರಾಜ ಕೊರವಿ, ತಾ.ಪಂ.ಮಾಜಿ ಅಧ್ಯಕ್ಷ ಈಶ್ವರ ನಾಯಕ, ಶಾಮರಾವ ರಾಠೋಡ

 ಪ್ರೇಮಸಿಂಗ್ ಜಾಧವ, ರಾಜಕುಮಾರ ಪವಾರ

ಅರುಣಕುಮಾರ ಪವಾರ ಕಲಬುರಗಿ, ರೇವಪ್ಪ ಉಪ್ಪಿನ್, ಬನ್ಸಿಲಾಲ್ ಪವಾರ ಸುಭಾಶ ನಾಯಕ ಯಲ್ಮಾಮಡಿ, ಗೊರಮ್ ನಾಯಕ, ಲಕ್ಷ್ಮಣ ಜಾಧವ ಭೂಂಯಾರ, ಗೋಪಾಲ ಜಾಧವ ಕಲಭಾವಿ, ಗೇಮಸಿಂಗ ಭಾವನಗುಡಿ ತಾಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.