ಡಾ. ಶ್ರೀಶೈಲ ನಾಗರಾಳ ಪರಿಚಯ

ಡಾ. ಶ್ರೀಶೈಲ ನಾಗರಾಳ ಪರಿಚಯ

ಡಾ. ಶ್ರೀಶೈಲ ನಾಗರಾಳ ಪರಿಚಯ 

ಸುಮಾರು ನಾಲ್ಕು ದಶಕಗಳಿಂದ ಜಾನಪದ, ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆ ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಶ್ರೀಶೈಲ ನಾಗರಾಳ ಕಲ್ಯಾಣ ಕರ್ನಾಟಕದ ಹಿರಿಯ ಸಂವೇದನಾಶೀಲ ಲೇಖಕ. 1961ರಲ್ಲಿ ಜನಿಸಿದರು. ಸಿಂದಗಿಯ ಜಿ.ಪಿ. ಪೋರವಾಲ ಪದವಿ ಮಹಾವಿದ್ಯಾಲಯದಿಂದ 1984ರಲ್ಲಿ ಪದವಿ ಶಿಕ್ಷಣ. ಗುಲಬರ್ಗಾ ವಿಶ್ವವಿದ್ಯಾಲಯದಿಂದ 1986ರಲ್ಲಿ ಎಂ.ಎ. ಕನ್ನಡ ಮತ್ತು ಜಾನಪದ ಪದವಿ 2001ರಲ್ಲಿ ಡಾ. ಎಂ.ಎಂ. ಕಲಬುರಗಿಯವರ ಮಾರ್ಗ ಸಂಪುಟದ ಶರಣರ ಲೇಖನ ಗಳು ವಿಷಯ ಕುರಿತು ಎಂ.ಫಿಲ್. ಅಧ್ಯಯನ 2007ರಲ್ಲಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರ ಜೀವನ ಮತ್ತು ಕೃತಿಗಳು ವಿಷಯದಲ್ಲಿ ಪಿಎಚ್.ಡಿ. ಅಧ್ಯಯನ 1986ರಲ್ಲಿ ಬಾಗಲಕೋಟಿ ಜಿಲ್ಲೆಯ ಗುಳೇದಗುಡ್ಡ ಹುನಗುಂದ ಕಲಬುರಗಿ ಜಿಲ್ಲೆಯ ಆಳಂದ, ಚಿಂಚೋಳಿ, ಶಹಾಬಾದ, ಸುರಪುರ ಮತ್ತು ಕಲಬುರಗಿಯ ಪದವಿ ಕಾಲೇಜುಗಳಲ್ಲಿ ಸಹ ಪ್ರಾಧ್ಯಾಪಕನಾಗಿ ಕೆಲಸ ಮಾಡಿ ಸುರಪುರ ಮತ್ತು ಚಿಂಚೋಳಿ ಪದವಿ ಮಹಾವಿದ್ಯಾಲಯಗಳಲ್ಲಿ ಕ್ರಮವಾಗಿ ಪ್ರಾಚಾರ್ಯರಾಗಿ ಸೇವೆ.

ಪ್ರಕಟಿತ ಕೃತಿಗಳು 

ಕಲಬುರಗಿ ಶರಣ ಬಸವೇಶ್ವರ, ವೀರೇಂದ್ರ ಪಾಟೀಲ, ಪ್ರೊ.ಟಿ.ವಿ. ಕಟ್ಟಿಮನಿ ಜೀವನ ಚರಿತ್ರೆ ಉರಿವ ಬದುಕು. ಕೆರೆಯ ಚಂದಮ್ಮ ಆರ್. ದೊಡ್ಡಗೌಡರು ಜೀವನ ಚರಿತ್ರೆಗಳು, ವಿಮರ್ಶೆ ಕೃತಿಗಳು: ಕೃತಿಲೋಕ, ಸಿದ್ಧರಾಮ, ಬಸವಭಾರತ, ವಚನ ವಿವೇಕ, ಜಾನಪದ ಕೃತಿಗಳು: ಜಾನಪದ ವಿವೇಕ, ಜಾನಪದ ಸಾಹಿತ್ಯ ಸಂಗ್ರಹ, ಜಾನಪದ ಬಾಗಿನ, ಜಾನಪದ ದೀಪ್ತಿ, ಹೊನ್ನರಾಗೋಲ, ಜಾನಪದ ಸಮಾಜೋ ಸಂಸ್ಕೃತಿ, ಸಂಪಾದನೆಗಳು: ಡಾ. ಎಂ.ಎಸ್. ಲಡ್ಡೆ, ಆತ್ಮೀಯ ನೆನಪು ನಡುಗನ್ನಡ ಕಾವ್ಯ. ತಳವರ್ಗದ ವಚನಕಾರರು, ಹಳಗನ್ನಡ ಸಾಹಿತ್ಯ ಸಂಚಯ, ಜ್ಞಾನಗಂಗಾ-2, ಸಣ್ಣಕಥೆಗಳು, ಸುವರ್ಣ ದಾಂಪತ್ಯ, ಹೇಮ ಸಂಗಮ, ಪಠ್ಯಗಳು: ಕನ್ನಡ ಸಾಹಿತ್ಯ ಸಂಸ್ಕೃತಿ, ಪ್ರಾಚೀನ ಕನ್ನಡ ಕಾವ್ಯಗಳ ಭಾಷಿಕ ಮತ್ತು ಛಂದಸ್ಸು.

ಪ್ರಶಸ್ತಿ /ಪುರಸ್ಕಾರಗಳು : 

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಲೋಹಿಯಾ ಪ್ರಶಸ್ತಿ ಟಿ.ವಿ.ಜಿ. ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಯಲ್ಲಾಲಿಂಗ ಪ್ರಶಸ್ತಿ, ಸಪ್ನಾ ಸುವರ್ಣ ಮಹೋತ್ಸವ ಲೇಖಕ ಪುರಸ್ಕಾರ ಅಮ್ಮ ಗೌರವ ಪ್ರಶಸ್ತಿ, ಸಮ್ಮೇಳನಾಧ್ಯಕ್ಷತೆ ಜೇವರಗಿ ತಾಲೂಕ 4ನೇ ಶರಣ ಸಾಹಿತ್ಯ ಸಮ್ಮೇಳನ, ಸಗರನಾಡು ಸಂಸ್ಕೃತಿ ಉತ್ಸವ, ವಿದೇಶ ಪ್ರವಾಸ, ಇಂಗ್ಲಂಡ, ಐರ್‌ಲೆಂಡ, ಸಿಂಗಪೂರ, ಬ್ಯಾಂಕಾಕ್ ಐ‌ಲೆಂಡಿನ ಡಿ.ಸಿ.ವ್ಯೂ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಣ್ಣ ಕಥೆಗಳಲ್ಲಿ ಸಾಮಾಜಿಕತೆ (ಪ್ರೊ. ಎಚ್.ಟಿ.ಪೋತೆಯವರ ಸಣ್ಣಕಥೆಗಳು ಅನ್ವಯಿಸಿ) 2021ರಲ್ಲಿ ನಿವೃತ್ತಿ ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕ.

ಡಾ. ಶರಣಬಸಪ್ಪ ವಡ್ಡನಕೇರಿ