ಸಾವಳಗಿಯಿಂದ ತಾಡ ತೇಗ್ನೂರ್ ಜಿಲ್ಲಾ ಮುಖ್ಯರಸ್ತೆ ಸುಧಾರಣೆಯ 20 ಕೋಟಿ ರು ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಗುದ್ದಲಿ ಪೂಜೆ
ಸಾವಳಗಿಯಿಂದ ತಾಡ ತೇಗ್ನೂರ್ ಜಿಲ್ಲಾ ಮುಖ್ಯರಸ್ತೆ ಸುಧಾರಣೆಯ 20 ಕೋಟಿ ರು ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಗುದ್ದಲಿ ಪೂಜೆ
ಕಲಬುರಗಿ; ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನಮನ ಗೆದ್ದಿದೆ ಎಂದಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ರಸ್ತೆ, ಸೇತುವೆ, ಬೀದಿದೀಪ, ಬಸ್ಸು, ಕೃಷಿ ಸಬ್ಸೀಡಿಯಂತಹ ಹತ್ತು ಹಲವು ಯೋಜನೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸೋದಾಗಿ ಹೇಳಿದ್ದಾರೆ.
ತಾಲೂಕಿನ ಹಡಗೀಲ್ ಹಾರುತಿಯಲ್ಲಿ ಭಾನುವಾರ 20 ಕೋಟಿ ರು ವೆಚ್ಚದಲ್ಲಿ ಕಡಗಂಚಿ, ಬೋಧನ ಜಿಲ್ಲಾ ಮುಖ್ಯ ರಸ್ತೆಯಿಂದ ತೊನಸನಳ್ಳಿ ರಾಜ್ಯ ಹೆದ್ದಾರಿವರೆಗೆ ಗೋಳಾ, ಭೀಮಳ್ಳಿ, ಸಾವಳಗಿ, ಹಡಗಿಲ್ ಹಾರುತಿ, ಕಡಣಿ, ಫರತಾಬಾದ್, ತೇಗ್ನೂರ್ ವರೆಗಿನ ಆಯ್ದ 16. 80 ಕಿಮೀ ನಿಂದ 33. 20 ಕಿಮೀ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಹಡಗಿಲ್ ಹಾರುತಿಯಲ್ಲಿ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.
ರಸ್ತೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ 40 ಕೋಟಿ ರು ವೆಚ್ಚದಲ್ಲಿ ಜಿಎಂಡಿಎಸ್‌ವೈ ಅಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆಗಳಿವೆ. ಕಲ್ಯಾಣ ಪಥ ಯೋಜನೆಯಲ್ಲಿ ರೈತರ ಹೊಲಗದ್ದೆ ರಸ್ತೆಗಳ ಪ್ರಗತಿಗೆ ಅವಕಾಶಗಳನ್ನು ಬಳಸಲಾಗುತ್ತಿದೆ. ಇದಲ್ಲದೆ ತಾಂಡಾಗಳಿಗೂ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕರು ಹೇಳಿದರು.
ತೊಗರಿ ರೈತರು ಭಯ ಬಿಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರೋದರ ಜೊತೆಗೇ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೂ ಹಣ ನೀಡುತ್ತಿದೆ. ಕಲಬುರಗಿ ತಾಲೂಕಿನಲ್ಲಿ ತೊಗರಿ ನೆಟೆ ರೋಗದಿಂದ ಹಾಳಾಗಿದೆ. ಕಲೆದ ಬಾರಿ ವಿಮೆ ಮಾಡಿಸಿದ ರೈತರಿಗೆ 3. 55 ಕೋಟಿ ರು ವಿಮೆ ಬಂದಿದೆ. ಈ ಬಾರಿಯೂ ಬೇಗ ರತರಿಗೆ ವಿಮೆ ಪರಿಹಾರ ದೊರಕುವಂತೆ ಮಾಡುತ್ತೇವೆ. ಕಲಬುರಗಿ ತ್ಕ್ಷೇತ್ರದಲ್ಲಿ 4, 523 ರೈತರಿಗೆ ವಿಮೆ ಹಣ ಪಾವತಿಯಾಗಿದೆ. ನೆಯೋ ರೋಗದಿಂದ ತೊಗರಿ ಹಳಾಗಿರುವ ರೈತರು ಧೃತಿ ಗೆಡುವ ಕಾರಣವಿಲ್ಲ. ಸರಕಾರ ನಿಮ್ಮ ಜೊತೆಗಿದೆ ಎಂದರು.
ಈಗಾಗಲೇ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದ್ದು ತೊಗರಿ ಹಾನಿ ಸಮೀಕ್ಷೆ ಸಾಗಿದೆ. ಸಮೀಕ್ಷೆ ನಡೆದಾಗ ಹಾನಿಗೊಳಗಾದ ರೈತರು ತಮ್ಮ ಸರ್ವೇ ನಂಬರ್ ದಾಖಲಿಸಿರಿ. ಪರಿಹಾರದ ಜೊತೆಗೇ ವಿಮೆ ಪರಿಹಾರವೂ ನಿಮಗೆ ತಲುಪೋಹಾಗೆ ಮಾಡುತ್ತೇವೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ತೊಗರಿ ಚರ್ಚೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ತೊಗರಿ ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡೋದಾಗಿ ಅಲ್ಲಂಪ್ರಭು ಪಾಟೀಲ್ ಹೇಳಿದರು.
ಸರಕಾರ ನಮ್ಮದೇ ಇದೆ. ಜನರ ಸಮಸ್ಯೆ, ರೈತರ ಸಮಸ್ಯೆ ಸರಕಾರದ ಗಮನಕ್ಕೆ ತರುವುದೇ ನಮ್ಮ ಕರ್ತವ್ಯ. ಹೀಗಾಗಿ ತೊಗರಿ ರೈತರನ್ನು ಕಾಡುತ್ತಿರುವ ಚಿಂತೆಗಳನ್ನೆಲ್ಲ ಸದನದಲ್ಲಿ ತೆರೆದಿಟ್ಟು ನಿಮಗೆ ಸೂಕ್ತ ನೆರವಿನ ಹಸ್ತ ದೊರಕುವಂತೆ ಮಾಡುತ್ತೇವೆ. ರೈತರು ಧೃತಿ ಗೆಡಬಾರದು ಎಂದು ಅಲ್ಲಂಪ್ರಭು ಹೇಳಿದರು.
ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರದಿದ್ದರೆ ಪ್ರಶ್ನಿಸಿ ಸಾವಳಗಿ- ತೇಗ್ನೂರ್ 20 ಕೋಟಿ ರು ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಿ. ನಿಮ್ಮೂರು, ನಿಮ್ಮದೆ ರಸ್ತೆ, ಹೀಗಾಗಿ ಕೆಲಸ ಪಕ್ಕಾ ಆಗಬೇಕು. ಆಗದೆ ಹೋದಲ್ಲಿ ಪ್ರಶ್ನಿಸಿರಿ. ಗುಣಮಟ್ಟದ ಕೆಲಸವಾಗದೆ ಹೋದಲ್ಲಿ ಅದು ಬೇಗ ಹಾಳಾಗುತ್ತದೆ. ಹಣ ಯಾರದೋ ಪಾಲಾಗುತ್ತದೆ. ಜನರ ಸಹಭಾಗಿತ್ವ ಮುಖ್ಯ ಎಂದರು.
ಕಂಠೀಬಸವೇಶ್ವರ ದೇಗುಲಕ್ಕೆ 10 ಲಕ್ಷ ಅನುದಾನ ಘೋಷಿಸಿದ ಸಾಸಕರು ಇದೇ ಸಮಾರಂಭದಲ್ಲಿ ಹನುಮಂತ ದೇವರ ಮಂಗದಿರದ ಮುಂದೆ ಹೈಮಾಸ್ಟ್ ದೀಪ, ಊರಲ್ಲಿ 2 ಬೋರ್‌ವೆಲ್, ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಕಾಂಗ್ರೆಸ್ ಮುಖಂಡರಾದ ಸಂತೋಷ ಪಾಟೀಲ್ ದಣ್ಣೂರ, ಮಹಾದೇವಪ್ಪ ಪಾಟೀಲ, ಭೀಮರಾಯ ಮೇಳಕುಂದಾ, ಗ್ರಾ,ಪಂ.ಸದಸ್ಯ ಮೈಹಿಬೂಬ್ ಪಟೇಲ್, ಶಿವುಕುಮಾರ ಕಟ್ಟಿ, ಚಂದ್ರಪ್ಪ, ಪ್ರಕಾಶ, ಅನೀಲ ಮಂಹಾಂತೇಶ ಪಾಟೀಲ್, ಬಸವರಾಜ ನೈಕೋಡಿ, ಗಜೇಂದ್ರ ಬಿರಾದಾರ್, ಸುನೀಲ ಮದನಕರ್, ಶರಣಸರಸಗಿ, ಕಣ್ಣಿ, ಅನೀಲ ಭರಣಿ, ರಮೇಶ, ಪ್ರಕಾಶ ಯಕ್ಕಂಚಿ, ಗೌತಮ ಕರೇಕಲ್, ಮಲ್ಲಣ್ಣ, ಬಸನಗೌಡ ಪಾಟೀಲ್, ದಾವಲ್ ಸಾಬ್ ಕಮಟಗಿ, ಬಸಲಿಂಗ ಬಿರಾದಾರ್ ಸೇರಿದಂತೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಗ್ರಾಮಸ್ಥರು ಇದ್ದರು.