ವಿಮೋಚನ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಗೆ ಗೃಹ ಸನ್ಮಾನ

ವಿಮೋಚನ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಗೆ ಗೃಹ ಸನ್ಮಾನ

ವಿಮೋಚನ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಗೆ ಗೃಹ ಸನ್ಮಾನ

ಕಲಬುರಗಿ : ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾದೇವಪ್ಪ ಕಡೇಚೂರ್ ಅವರನ್ನು ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಗೃಹ ಸನ್ಮಾನ ಮಾಡಿ 

" ಸಗರನಾಡು ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

   ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿ ಸುರಪುರದ ಹಿರಿಯರು ಹಾಗೂ ಹೈದರಾಬಾದ್ ವಿಮೋಚನಾ ಸತ್ಯಾಗ್ರಹ ಸಂದರ್ಭದ ಹೋರಾಟಗಾರರು ಆಗಿದ್ದ, ಸಾಹಿತಿ 95 ರ ಹರೆಯದ ಸುರಪುರ ರಂಗಂಪೇಟೆಯ ಮಹಾದೇವಪ್ಪ ಕಡೇಚೂರ್ ಅವರನ್ನು ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಪ್ರಕಾಶ ಎಸ್. ಅಂಗಡಿ ಕನ್ನೆಳ್ಳಿ ಅವರು ಕಡೇಚೂರ್ ಅವರ ಕಲಬುರಗಿಯ ಮನೆಗೆ ಡಿಸೆಂಬರ್ 26 ರಂದು ಭೇಟಿ ಮಾಡಿ ಪ್ರಶಸ್ತಿ ಪತ್ರ ಮೈಸೂರು ಪೇಟ, ಶಾಲು, ಹಾರ, ನೀಡಿ ಗೌರವಿಸಿದರು. ಸುರಪುರದ ರಂಗಂಪೇಟೆಯಲ್ಲಿ ಇದ್ದುಕೊಂಡು ಕಡೇ ಚೂರ್ ಮನೆತನದ ಹಿರಿಯರ ಜೊತೆ ರಜಾಕರ ಆಕ್ರಮಣವನ್ನು ದಿಟ್ಟತನದಿಂದ ಎದುರಿಸಿ ಸ್ವಾತಂತ್ರ್ಯ ಪ್ರೇಮವನ್ನು ವ್ಯಕ್ತಪಡಿಸಿದ ಮಹಾದೇವಪ್ಪ ಕಡೇಚೂರ್ ಅವರು ಯುವ ಜನಾಂಗಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ 10ಕ್ಕೂ ಹೆಚ್ಚಿನ ಮೌಲಿಕ ಸಾಹಿತ್ಯ ಕೃತಿಗಳು ಚಿರಕಾಲ ಉಳಿ ಯುವಂತದ್ದು. ಇಂಥ ಶ್ರೇಷ್ಠ ವ್ಯಕ್ತಿಯನ್ನು ದಶಮಾನೋತ್ಸವದ ಸಂದರ್ಭದಲ್ಲಿ "ಸಗರನಾಡು ರತ್ನ" ಎಂದು ಗುರುತಿಸಿ ಗೌರವಿಸುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

     ಸಗರನಾಡು ಸೇವಾ ಪ್ರತಿಷ್ಠಾನವು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಉತ್ತಮ ಕೆಲಸ ಮಾಡಿ ಸಮಾಜದ ಜನರನ್ನು ಗುರುತಿಸುವ ಮತ್ತು ಸಗರನಾಡು ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಮಹಾದೇವಪ್ಪ ಕಡೇಚೂರ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಸಾಹಿತಿ ಪ. ಮನು ಸಗರ ಅವರು ಮಹಾದೇವಪ್ಪ ಕಡೇಚೂರವರ ಸಾಧನೆಯನ್ನು ಕೊಂಡಾಡಿದರು. ಲೇಖಕ ಕಮಲಾಕರ ಅರಳಿಗಿಡ ಜೊತೆಗಿದ್ದು ಶುಭ ಹಾರೈಸಿದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ಸರ್ವರನ್ನು ಸ್ವಾಗತಿಸಿದರು.ಮಹೇಶ್ ಕಡೇಚೂರ್ ಧನ್ಯವಾದವಿತ್ತರು.