ರೈತರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ಭೇಟಿ ಉಪವಾಸ ಸತ್ಯಾಗ್ರಹ ಕೈ ಬಿಡಲು ಮನವಿ
ರೈತರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ಭೇಟಿಉಪವಾಸ ಸತ್ಯಾಗ್ರಹ ಕೈ ಬಿಡಲು ಮನವಿ
ಸಿದ್ಧಸಿರಿ ಕಾರ್ಖಾನೆ ಪ್ರಾರಂಭವಾಗುವರೆಗೂ ಸತ್ಯಾಗ್ರಹ ಬಿಡುವುದಿಲ್ಲವೆಂದು ರೈತರ ಪಟ್ಟು
ಚಿಂಚೋಳಿ : ತಾಲೂಕಿನ ಸಿದ್ದಸಿರಿ ಎಥಿನಾಲ್ ಕಾರ್ಖಾನೆ ಕಾನೂನು ತೊಡಕುಗಳಿಂದ ಬಂದ್ ಆಗಿದೆ ಹೊರತು ಸರಕಾರ ಮತ್ತು ಜಿಲ್ಲೆಯ ಸಚಿವರುಗಳಿಂದಾಗಿದ್ದಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ತಿಳಿಸಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು, ಕೆಲವರು ಅರಣ್ಯ ಸಚಿವ ಮತ್ತು ಜಿಲ್ಲೆಯ ಸಚಿವರುಗಳಿಂದಲೇ ಸಿದ್ಧಸಿರಿ ಕಾರ್ಖಾನೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಪ್ರಜ್ಞಾನವಂತ ರೈತರು ಅಪಪ್ರಚಾರದ ಅಂಶಗಳು ಕಿವಿಗೆ ಹಾಕಿಕೊಂಡು ನಂಬಬಾರದು. ಒಬ್ಬ ಮಾಮುಲಿ ಮನುಷ್ಯ ಒಂದು ಸಣ್ಣಪುಟ್ಟ ವ್ಯಾಪಾರ ಮಾಡಬೇಕಾದರೂ ಸರಕಾರದ ಮಾರ್ಗಸೂಚಿಗಳ ನಿಯಮಗಳು ಪಾಲಿಸಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸಿದ್ಧಸಿರಿ ಎಥಿನಾಲ್ ಕಾರ್ಖಾನೆ ಕೆಲವು ನಿಯಮಗಳು ಪಾಲಿಸದೇ ಕಾನೂನು ತೊಡಕುಗಳಿಂದ ಕಾರ್ಖಾನೆ ಬಂದ್ ಆಗಿದೆ ಹೊರತು ಜಿಲ್ಲೆಯ ಸಚಿವರುಗಳಿಂದಲ್ಲ. ಸಧ್ಯ ಪ್ರಕರಣವು ಸುಪ್ರೀಂ ಕೋರ್ಟನ ಅಂಗಳದಲ್ಲಿದ್ದು, ಸರಕಾರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ತೀರ್ಪಿಗೆ ತಲೆ ಬಾಗಲೆ ಬೇಕಾಗುವುದು ಈ ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಸರಕಾರ ರೈತರ ಹೀತಚಿಂತನೆಯ ಮನವಿಗೆ ಸ್ಪಂದಿಸಿ, ರೈತ ಬೆಳೆದ ಕಬ್ಬು ಕಟ್ಟಾವು ಮಾಡಿ ಸಾಗಿಸಲು ಸರಕಾರ ಜಿಲ್ಲಾಡಳಿತದ ಮೂಲಕ ಆದೇಶ ಹೊರಡಿಸಲಾಗಿದೆ. ಈ ಒಂದು ಆದೇಶದಲ್ಲಿ ಕಬ್ಬು ಬೆಳೆದ ಯಾವುದೇ ಗ್ರಾಮ ಕೈ ಬಿಟ್ಟರು ರೈತರು ಆತಂಕಪಡುವ ಅವಶ್ಯಕತೆಯಿರುವುದಿಲ್ಲ. ಆದೇಶದಲ್ಲಿ ಬಿಟ್ಟ ಗ್ರಾಮದ ಹೆಸರು ಇದ್ದರೆ ಗಮನಕ್ಕೆ ತಂದರೆ ಅದನ್ನು ಸೇರಿಸುವ ಕೆಲಸ ಜಿಲ್ಲಾಡಳಿತ ಮತ್ತು ಸರಕಾರ ಮಾಡುತ್ತದೆ. ಕಬ್ಬು ಬೆಳೆಗಾರ ರೈತನಿಗೆ ಅನ್ಯಾಯವಾಗಲು ಸರಕಾರ ಮತ್ತು ಜಿಲ್ಲಾಡಳಿತ ಬಿಡುವುದಿಲ್ಲ. ಸುಪ್ರೀಂ ಕೋರ್ಟಗಿಂತಲೂ ಯಾರು ದೊಡ್ಡವರಲ್ಲ. ಸಿದ್ಧಸಿರಿ ಕಂಪನಿಯ ಆಡಳಿತ ಮಂಡಳಿಯವರು ಮತ್ತು ಸರಕಾರ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕಬ್ಬು ಸಾಗಿಸಲು ಸರಕಾರ ಕ್ರಮಕೈಗೊಂಡಿದೆ. ಇಲ್ಲಿಗೆ ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ಮೊಟಕುಗೊಳಿಸಿ, ಸರಕಾರ ಮತ್ತು ಕಂಪನಿ ಆಡಳಿತ ಮಂಡಳಿ ಮಧ್ಯೆ ಸಭೆ ಏರ್ಪಡಿಸಿ, ಚರ್ಚೆ ನಡೆಸೋಣ ಎಂದು ಪ್ರತಿಭಟನೆಕಾರರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಅವರಲಿ ಮನವಿ ಮಾಡಿದರು. ಇದಕ್ಕೆ ಪ್ರತಿಭಟನೆಕಾರರು ಒಪ್ಪದೆ ಕಾರ್ಖಾನೆ ಪ್ರಾರಂಭವಾಗುವ ವರೆಗೆ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಮುಂದುವರೆಸುವ ತೀರ್ಮಾನಕ್ಕೆ ಬದ್ಧರಾಗಿ ಉಳಿದು ಬಿಟ್ಟರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಾಬುರಾವ ಪಾಟೀಲ್, ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ವಕ್ತಾರ ಶರಣು ಪಾಟೀಲ್ ಮೋತಕಪಲ್ಲಿ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಲಕ್ಷ್ಮಣ ಆವಂಟಿ, ಸಂತೋಷ ಗುತ್ತೇದಾರ, ವಿಶ್ವನಾಥ ಹೊಡೆಬೀರನಳ್ಳಿ, ರಾಮರಾವ ರಾಠೋಡ, ಖಲೀಲ ಪಟೇಲ, ರಾಮಶೆಟ್ಟಿ ಪವಾರ, ನಾಗೇಶ ಗುಣಾಜಿ ಅವರು ಇದ್ದರು.