ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ಸಭೆ – ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ಸಭೆ – ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

 ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ಸಭೆ – ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ವತಿಯಿಂದ ಕಲಬುರಗಿ ವಿಭಾಗದ ಸಭೆ ಜರುಗಿತು. ಸಭೆಯಲ್ಲಿ ಮುಂದಿನ ಸಂಘಟನಾ ಚಟುವಟಿಕೆಗಳು, ಕಾರ್ಮಿಕರ ಹಕ್ಕುಗಳು, ಕಲ್ಯಾಣ ಯೋಜನೆಗಳ ಜಾರಿ ಹಾಗೂ ಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮತಗಳ್ಳತನ ವಿರೋಧಿಸಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸಹಿ ಸಂಗ್ರಹ ಅಭಿಯಾನವನ್ನು ಕೂಡ ಕೈಗೊಳ್ಳಲಾಯಿತು. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ, ಪ್ರಜಾಪ್ರಭುತ್ವದ ಕಾಪಾಡುವಿಕೆಗೆ ನಾಗರಿಕರ ಸಹಕಾರ ಅಗತ್ಯ ಎಂದು ನಾಯಕರವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಎಸ್.ಜಿ. ಮಂಜುನಾಥ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ,ಪ್ರವೀಣ ಪಾಟೀಲ ಹರವಾಳ,ಕಿರಣ್ ದೇಶಮುಖ,ಕಿಶೋರ್ ಗಾಯಕವಾಡ್,ವಹಾಜ್ ಬಾಬಾ ಜುನೈದಿ,ಲಿಂಗರಾಜ ತಾರಫೈಲ್ ಸೇರಿದಂತೆ ಹಲವಾರು ನಾಯಕರು ಹಾಗೂ ಸದಸ್ಯರು ಹಾಜರಿದ್ದರು.