ಎಳ್ಳ ಅಮವಾಸೆ ಹಬ್ಬ: ರೈತರ ಸಂಭ್ರಮದ ಹಬ್ಬ ಆಳಂದದಲ್ಲಿ ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಬಲುಜೋರು
ಎಳ್ಳ ಅಮವಾಸೆ ಹಬ್ಬ: ರೈತರ ಸಂಭ್ರಮದ ಹಬ್ಬ ಆಳಂದದಲ್ಲಿ ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಬಲುಜೋರು
ಆಳಂದ : ಉತ್ತರ ಕರ್ನಾಟಕದ ಒಂದು ಪ್ರಮುಖ ಹಬ್ಬವಾದ ಎಳ್ಳ ಅಮವಾಸೆ ಹಬ್ಬಕ್ಕಾಗಿ ರೈತರು ಬಿರುಸಿನ ಸಿದ್ಧತೆ ನಡೆಸಿದ್ದಾರೆ. ಆಳಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಖರೀದಿ ಮತ್ತು ಮಾರಾಟವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಿದೆ.
ಎಳ್ಳ ಅಮವಾಸೆ ಹಬ್ಬದ ವಿಶೇಷತೆ ಎಂದರೆ, ಈ ಹಬ್ಬವು ರೈತರ ಭೂಮಿಯ ಪೂಜೆಗೆ ಮತ್ತು ಭೋಜನದ ಸಾಂಪ್ರದಾಯಿಕ ಸಂಭ್ರಮಕ್ಕೆ ಹೆಸರುವಾಸಿಯಾಗಿದೆ. ರೈತರು ತಮ್ಮ ಬಾಂಧವರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಹೊಲಗಳಲ್ಲಿ ಚರಗಗಳನ್ನು ದೀಪವಿಡಿಸಿ, ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ನೈವೇದ್ಯವನ್ನು ಅರ್ಪಿಸಿ, ಬೆಳೆಗಳು ಸಮೃದ್ಧಿಯಾಗುವಂತೆ ಪ್ರಾರ್ಥಿಸುತ್ತಾರೆ.
ಈ ಹಬ್ಬದ ಪ್ರಮುಖ ತಿನಿಸುಗಳಾದ ಕಡಬು, ಭಜ್ಜಿ , ಚಟ್ನಿ ಮತ್ತು ಬೇಳೆಸಾರು ಕಡಬು, ಅಂಬ್ಲಿ ರೈತರ ಮನಮುದಿಗೊಳಿಸುವ ವಿಶಿಷ್ಟ ಆಹಾರವಾಗಿವೆ. ಅತಿಥಿಗಳಿಗಾಗಿ ಅನ್ನದಾಸೋಹವನ್ನೂ ಆಯೋಜಿಸಲಾಗುತ್ತಿದ್ದು, ಹಬ್ಬದ ಉತ್ಸಾಹಕ್ಕೆ ಇನ್ನಷ್ಟು ಬಣ್ಣ ತುಂಬುತ್ತಿದೆ.
ಆಳಂದದ ವಿಶೇಷ ವರದಿ ಆಳಂದ ತಾಲೂಕಿನ ರೈತರು ಎಳ್ಳ ಅಮವಾಸೆ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಿದ್ದಾರೆ. ಹೊಲದಲ್ಲಿ ಸರಳ ಪೂಜೆಗಳಿಂದ ಹಿಡಿದು, ವಿಶೇಷ ಊಟದವರೆಗೆ ಹಬ್ಬದ ಕಮ್ಮಟಗಳು ಕಣ್ಣಿನ ಎಳೆತವನ್ನು ಹೆಚ್ಚಿಸಿವೆ. ಹಿರಿಯರು ತಮ್ಮ ಮಕ್ಕಳಿಗೆ ಹಬ್ಬದ ಮಹತ್ವವನ್ನು ವಿವರಿಸುತ್ತಿದ್ದು, ಸಂಪ್ರದಾಯದ ಪಾಠವನ್ನು ಮುಂದಿನ ಪೀಳಿಗೆಗಳಿಗೆ ಕಲಿಸುತ್ತಿದ್ದಾರೆ.
ಅಗಾಧ ಸಂಭ್ರಮದ ಜೊತೆಗೆ, ಎಳ್ಳ ಅಮವಾಸೆ ಹಬ್ಬ ರೈತರ ಜೀವನದ ಹಸಿವು ಮಾತ್ರ ತಣಿಸುವುದಿಲ್ಲ, ಅವರ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಶ್ರದ್ಧೆ ಸಲ್ಲಿಸುವ ಆಧ್ಯಾತ್ಮಿಕ ತೃಪ್ತಿಯ ಹಬ್ಬವೂ ಆಗಿದೆ.
ವರದಿ ಡಾ ಅವಿನಾಶ S ದೇವನೂರ ಅಳಂದ