ಬಿಳವಾರ ಗ್ರಾಮದ ರೈತ ಮಹಿಳೆ ನಾಗಮ್ಮಗೆ ಹಾವು ಕಚ್ಚಿದಾಗ ಮೃತಪಟ್ಟಿದ್ದಾರೆ. ಪರಿಹಾರಕ್ಕೆ ಆಗ್ರಹ
ಬಿಳವಾರ ಗ್ರಾಮದ ರೈತ ಮಹಿಳೆನಾಗಮ್ಮಗೆ ಹಾವು ಕಚ್ಚಿದಾಗ ಮೃತಪಟ್ಟಿದ್ದಾರೆ. ಪರಿಹಾರಕ್ಕೆ ಆಗ್ರಹ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಶ್ರೀಮತಿ ನಾಗಮ್ಮ ಗಂ ಚಂದ್ರಶೇಖರ್ ಕಲ್ಲೂರ್ ಎನ್ನುವ ಕೂಲಿ ಕಾರ್ಮಿಕ ಮಹಿಳೆ ದಿನಾಂಕ 23/12/2024 ರಂದು ಹೊಲದಲ್ಲಿ ಹತ್ತಿ ಬಿಡಿಸುವ ಕೆಲಸದಲ್ಲಿ ನಿರತರಾದಾಗ ರೈತ ಮಹಿಳೆಯಾದ ನಾಗಮ್ಮ ಕಲ್ಲೂರ್ ಅವರ ಕಾಲಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿರುವ ದುರಂತ ಘಟನೆ ಬೀಳವಾರ ಗ್ರಾಮದಲ್ಲಿ ನಡೆದಿರುತ್ತದೆ ಈ ಪ್ರಕರಣದ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅದೇ ರೀತಿಯಾಗಿ ತಾಲೂಕಿನ ಸ್ಥಳೀಯ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಮೃತ ಮಹಿಳೆಯ ಕುಟುಂಬಸ್ಥರಿಗೆ ಭೇಟಿಯಾಗಬೇಕು ಸಂತ್ರಸ್ಥರ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ಧನ ವಿತರಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ
ವರದಿ ಜೇಟ್ಟೆಪ್ಪ ಎಸ್ ಪೂಜಾರಿ