ಆಳಂದ ರೈತರ ಆಕ್ರೋಶ ಧ್ವನಿ – ವಿಂಡ್ ಕಂಪನಿಗಳ ಶೋಷಣೆ ವಿರುದ್ಧ ಆಡಳಿತ ಸೌಧದಲ್ಲಿ ಬೃಹತ್ ಪ್ರತಿಭಟನೆ
ಆಳಂದ ರೈತರ ಆಕ್ರೋಶ ಧ್ವನಿ – ವಿಂಡ್ ಕಂಪನಿಗಳ ಶೋಷಣೆ ವಿರುದ್ಧ ಆಡಳಿತ ಸೌಧದಲ್ಲಿ ಬೃಹತ್ ಪ್ರತಿಭಟನೆ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ರೈತರ ಆಕ್ರೋಶದ ಗಾಳಿ ಬೀಸುತ್ತಿದೆ
ಪವನ ವಿದ್ಯುತ್ ಕಂಪನಿಗಳ ದೌರ್ಜನ್ಯಕ್ಕೆ ವಿರುದ್ಧ ನೂರಾರು ರೈತರು ಸಿದ್ದು ಹಿರೋಳಿ ನೇತೃತ್ವದಲ್ಲಿ ತಹಸಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹೋರಾಟಗಾರ ಡಾ. ರಾಘವೇಂದ್ರ ಚಿಂಚನಸುರ್, ಶ್ರೀಶೈಲ್ ಬೀಮ್ಪುರೆ, ನ್ಯಾಯವಾದಿ ಮಹದೇವ ಹತ್ತಿ ಮತ್ತು ಮಹಾದೇವ ಮೊಘ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
ರೈತರ ಆರೋಪ: ಕಂಪನಿಗಳು ಸರ್ಕಾರಿ ದರವನ್ನು (ಒಣ ಭೂಮಿಗೆ 30 ಲಕ್ಷ, ನೀರಾವರಿ ಭೂಮಿಗೆ 40 ಲಕ್ಷ ರೂ. ಪ್ರತಿ ಎಕರೆ) ತಿರಸ್ಕರಿಸಿ, ದಲ್ಲಾಳಿಗಳ ಮೂಲಕ ಕಡಿಮೆ ಬೆಲೆಯಲ್ಲಿ 2,000 ಎಕರೆ ಜಮೀನುಗಳನ್ನು ಕಸಿಯುತ್ತಿವೆ. ಭೀಮಾ ನದಿ ಯೋಜನೆಯ ನೀರಾವರಿ ಸೌಲಭ್ಯಗಳು ಬಂದಿರುವಾಗ ಈ ಶೋಷಣೆ ರೈತರ ಜೀವನಾಡಿಗೆ ಧಕ್ಕೆ ತರುತ್ತಿದೆ. ಇದರಿಂದ ಸ್ಥಳೀಯ ನಿರುದ್ಯೋಗಿಗಳಿಗೆ ಯಾವ ಪ್ರಯೋಜನವೂ ಇಲ್ಲ, ಕಂಪನಿಗಳು ಕೋಟಿಗಟ್ಟಳೆ ಲಾಭ ಮಾಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರುತ್ತವೆ ಎಂದು ಆಕ್ರೋಶ.
ಪ್ರಮುಖ ಬೇಡಿಕೆಗಳು: ಒಣ ಭೂಮಿಗೆ 50 ಲಕ್ಷ, ನೀರಾವರಿ ಭೂಮಿಗೆ 60 ಲಕ್ಷ ದರ ನಿಗದಿ. ಕಬ್ಬಿಗೆ ಏಕರೂಪ 3,500 ರೂ. ಪ್ರತಿ ಟನ್, ತೊಗರಿಗೆ GI ಟ್ಯಾಗ್ ಅಡಿಯಲ್ಲಿ 20,000 ರೂ. ಪ್ರತಿ ಕ್ವಿಂಟಾಲ್ MSP. ತೊಗರಿ ಕಟಾವು ಪ್ರಾರಂಭವಾಗಿರುವುದರಿಂದ ತಕ್ಷಣ ಖರೀದಿ ಕೇಂದ್ರಗಳು ತೆರೆಯಿರಿ. 15 ದಿನಗಳ ಕಾಲಮಿತಿಯೊಳಗೆ ಈಡೇರಿಸದಿದ್ದರೆ, ಕಂಪನಿ ವಾಹನಗಳ ಪ್ರವೇಶಕ್ಕೆ ನಿಷೇಧ!
ತಹಸಿಲ್ದಾರ್ ಮನವಿ ಸ್ವೀಕರಿಸಿದ್ದಾರೆ. ವರದಿ ಡಾ .ಅವಿನಾಶ S. ದೇವನೂರ
