ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿ

ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿ

ಹೊಳೆಸಮುದ್ರದಲ್ಲಿ ಮಕ್ಕಳಿಂದ ಶಾಲೆ ಪೂರ್ವ ಶಿಕ್ಷಣದ ಚಟುವಟಿಕೆಗಳ ಪ್ರದರ್ಶನ

 ಬಾಲಮೇಳ ಕಾರ್ಯಕ್ರಮ|ಸಿಡಿಪಿಓ ಇಮಾಲಪ್ಪಾ ಡಿ.ಕೆ ಅಭಿಪ್ರಾಯ|

ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿ

ಕಮಲನಗರ:ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿಯಾಗಿದೆ. ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ ಎನ್ನುವ ಹಾಗೆ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದ ಮಹತ್ವ ಪಾತ್ರ ವಹಿಸುತ್ತದೆ ಭಾಷಾ ಬೆಳವಣಿಗೆಯಲ್ಲಿ ಕಲಿಕೆ ಸರ್ವಾಂಗೀಣ ಬೆಳವಣಿಗೆ ಹಂತವಾಗಲು ಬಾಲ ಮೇಳ ವೇದಿಕೆ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪಾ ಡಿ.ಕೆ. ಹೇಳಿದರು.

ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೀದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ಶಿಶು ಅಭಿವೃದ್ಧಿ ಯೋಜನೆ ಸಂತಪೂರ ಮತ್ತು ಗ್ರಾಮ ಪಂಚಾಯತ ಹೊಳೆಸಮುದ್ರ ಹಾಗೂ ಕಲಿಕಾ ಟಾಟಾ ಟ್ರಸ್ಟ್ ಬೀದರ ಸಂಯುಕ್ತಾಶ್ರಯದಲ್ಲಿ ನಡೆದ ಬಾಲ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ಮಾತನಾಡಿದರು.

ಅಂಗವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪ್ರಾಥನೆ ಗೀತೆ, ಆಟ, ಪಾಠ, ಚಟುವಟಿಕೆ ಮೂಲಕ, ಪರಿಸರ ಜೀವನದ ಒಂದು ಭಾಗವಾಗಿರುವ ಕಲಿಕೆ ಹೀಗೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ನೀಡಲಾಗುತ್ತದೆ. ಪೋಷಕರು ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕಬೇಡಿ ಎಂದು ಹೇಳಿದರು.

ಕಲಿಕೆ ಟಾಟಾ ಟ್ರಸ್ಟ್ ಪ್ರತಿನಿಧಿಯಾಗಿ ಮಲ್ಲಮ್ಮ ಬೀರಾದಾರ ಮಾತನಾಡಿ, ಶಾಲಾ ಪೂರ್ವ ಶಿಕ್ಷಣದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ಕಡಿಮೆ ಇರುತ್ತದೆ,ಹೀಗಾಗಿ ಮಕ್ಕಳಿಗೆ ವಸ್ತು ಗುರುತಿಸುವಿಕೆ, ಮುಕ್ತ ಆಟ, ಚಿತ್ರಗಳು ತೋರಿಸಿ,ಚಟುವಟಿಕೆ ಮೂಲಕ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣವನ್ನು ಅಂಗವಾಡಿ ಕೇಂದ್ರದಲ್ಲಿ ನೀಡಲಾಗುತ್ತದೆ. ಮುಗ್ದ ಮಕ್ಕಳ ಪ್ರತಿಭೆಯ ಅನಾವನ್ನು ಗೊಳಿಸಲು ಮಕ್ಕಳಿಗೆ ಕಲಿಕೆ ಚಟುವಟಿಕೆ ಮೂಲಕ ಪ್ರದರ್ಶನ ಮಾಡಲಾಗಿತ್ತು ಎಂದು ಹೇಳಿದರು.

ಗ್ರಾಮ ಪಂಚಾಯತ ಅಧ್ಯಕ್ಷೆ ಯೋಗೀತಾ ಆಳಂದೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು, ಶಿವಗಂಗಾ ಅಂಗನವಾಡಿ ಕಾರ್ಯಕರ್ತೆ ಅವರು ಮಕ್ಕಳಿಗೆ ಪ್ರಾಥನೆ ಗೀತೆಯನ್ನು ಹಾಡಿಸಿದರು.

ಹೊಳೆಸಮುದ್ರ ಗ್ರಾಮದ ವಲಯದ ಸಾವಳಿ ,ಬಸನಾಳ,ಡಿಗ್ಗಿ ಗ್ರಾಮದ ಅಂಗನವಾಡಿ ಮಕ್ಕಳು ಭಾಗವಹಿಸುವ ಮೂಲಕ ತಮ್ಮ ತಮ್ಮ ಪ್ರದರ್ಶನವನ್ನು ನೀಡಿದರು ಹಾಡು, ನೃತ್ಯ, ಮುಕ್ತ ಆಟ,ಪೊಣಿಸುವ,ಮನೆಜೋಡನೆ, ಪುಸ್ತಕ ನೋಡುವುದು,ಸಾಯಿಬಾಬಾ,ಒನಕೆ ಓಬವ್ವ ಕಿತ್ತೂರಾಣಿ ಚೆನ್ನಮ್ಮ, ಬಸವಣ್ಣ ಮೊದಲಾದವರ ವೇಷಭೂಷಣ ಧರಿಸಿ ವಿಜ್ರಂಭಿಸಿದ್ದರು.

ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮುದ್ದು ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು.

ಹೊಳೆಸಮುದ್ರ ಗ್ರಾಮ ಪಂಚಾಯತ ಪಿ.ಡಿ.ಓ ನಿರ್ಮಲಾ ಮೇಡಂ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ 8 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬ್ಯಾಗು (ಕೈಚೀಲಾ)ಗಳನ್ನು ಕೂಡಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವ ಪ್ರಯತ್ನ ಗ್ರಾಮ ಪಂಚಾಯತ ವತಿಯಿಂದ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸುಮಾ ಗಾಯಕವಾಡ ,ಸದಸ್ಯರಾದ ರಾಹುಲ ಪಾಟೀಲ, ಕೃಷ್ಣ ಕಾಳೆ ,ಶಿವಾನಂದ ಪಾಟೀಲ ,ಅಂಬಿಕಾ ಬೆಣ್ಣೆ , ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಭರತ ಕದಂ, ಕಾರ್ಯದರ್ಶಿ ಮಹಾದೇವ, ಮಾರುತಿ ಆಳಂದೆ, ಮತ್ತು ಜಿಜಾಬಾಯಿ ತುಕಾರಾಮ ಸಹಾಯಕ ಶಿ.ಅ.ಯೋ ಸಂತಪುರ, ಸಂಘದ ಅಧ್ಯಕ್ಷರು ಪದ್ಮಾವತಿ ಸ್ವಾಮಿ, ಮಹಾದೇವಿ ನೂದನೂರೆ,ವರ್ಷಾ, ಸುವರ್ಣಾ, ಅಮರ್ಪಾಲಿ, ನಂದಾಬಾಯಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿದಂತೆ ಎಲ್ಲಾ ಕೇಂದ್ರದ ಅಂಗನವಾಡಿ ಕಾರ್ಯಕರ್ತರು ಹಾಗೂ ಪೋಷಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿವಗಂಗಾ ಪ್ರಾರ್ಥನ ಗೀತೆ ಮಾಡಿದರೆ ಶೋಭಾವತಿ ರಾಠೋಡ್ ಸ್ವಾಗತಿಸಿದರು ಸವಿತಾ ಯುವರಾಜ ರಾಂಪುರೆ ವಂದನಾರ್ಪಣೆ ಮಾಡಿದರು.