ಗ್ರೇಡ್-೧ ಅಧಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಡಾ. ಲೋಕೇಶಗೆ ಸನ್ಮಾನ.

ಗ್ರೇಡ್-೧ ಅಧಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಡಾ. ಲೋಕೇಶಗೆ ಸನ್ಮಾನ.

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಶ್ರವಣ ನ್ಯೂನ್ಯತೆ ಮಕ್ಕಳ ಸರ್ಕಾರಿ ಶಾಲೆಗೆ ಬೀದರನಿಂದ ವರ್ಗಾವಣೆಗೊಂಡು ಗ್ರೇಡ್-1 ಅಧಿಕ್ಷಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡ ಡಾ. ಲೋಕೇಶ ಅವರಿಗೆ ಕಲಬುರಗಿ ಜಿಲ್ಲಾ ವಿಕಲಚೇತನ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಮಸಿ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಶಾರದಾ ಕಂದಗೂಳೆ, ಬಸವರಾಜ ಹೆಳವರ ಯಾಳಗಿ, ಭೀಮಷಾ ಘಾಳೆ, ಶಾಂತಪ್ಪ ಖ್ಯಾತನ್, ನೀತಿನ ರಂಗದಾಳ, ಜಗದೀಶ ಹಾಗೂ ಇನ್ನಿತರರು ಭಾಗವಹಿಸಿದ್ದರು.