ಸರಕಾರಿ ನೌಕರರ ಸಂಘ 2ನೇ ಬಾರಿಗೆ ಷಡಕ್ಷರಿ ಆಯ್ಕೆ-ಅಭಿನಂದನೆಗಳು

ಸರಕಾರಿ ನೌಕರರ ಸಂಘ 2ನೇ  ಬಾರಿಗೆ ಷಡಕ್ಷರಿ ಆಯ್ಕೆ-ಅಭಿನಂದನೆಗಳು

ಸರಕಾರಿ ನೌಕರರ ಸಂಘ 2ನೇ ಬಾರಿಗೆ ಷಡಕ್ಷರಿ ಆಯ್ಕೆ-ಅಭಿನಂದನೆಗಳು

ಇಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಘಟಕದ ಚುನಾವಣೆಯಲ್ಲಿ ನೌಕರರ ಕಣ್ಮಣಿ ಸಿ.ಎಸ್.ಷಡಕ್ಷರಿಯವರು ಅಯ್ಕೆಯಾಗಿರುವುದಕ್ಕೆ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮತ ಚಲಾಯಿಸಿ , ಮತ ಎಣಿಕೆಯ ನಂತರ ಮಾತನಾಡಿದ ಅವರು ಷಡಕ್ಷರಿಯವರು ಕಳೆದ 5 ವರ್ಷಗಳಲ್ಲಿ ಸರಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ನೌಕರರಿಗೆ 17% ಆಂತರಿಕ ಪರಿಹಾರ, 7ನೇ ವೇತನ ಆಯೋಗ ಜಾರಿ ಮಾಡಿ ನೌಕರರ ಸಂಬಳ ಹೆಚ್ಚಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳು ನೌಕರರ ಸಂಬಳ ಕಟಾವು ಮಾಡಿದರೆ, ಕರ್ನಾಟಕದಲ್ಲಿ ಷಡಕ್ಷರಿಯವರು ನೌಕರರಿಗೆ ಪೂರ್ಣ ಸಂಬಳ ಕೊಡಿಸಿದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ತಡೆ ಹಿಡಿದ ತುಟ್ಟಿಭತ್ಯೆ ಬಿಡುಗಡೆಗೊಳಿಸಿದ್ದಾರೆ. ಪ್ರಮುಖ 25 ಸರಕಾರಿ ಆದೇಶಗಳು ಹೊರಡಿಸಿದ್ದಾರೆ. ಹಳೆಯ ಪಿಂಚಣೆ ಜಾರಿಗೊಳಿಸುವಲ್ಲಿ, ನಗದು ರಹಿತ ಚಿಕಿತ್ಸೆ ಕೊಡಿಸುವ ಕಾರ್ಯ ಪ್ರಗತಿಯಲ್ಲಿದೆ. ಷಡಕ್ಷರಿಯವರು ನೌಕರರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವುದರಿಂದ ಇವತ್ತು ಸರಕಾರಿ ನೌಕರರು ಅವರನ್ನು ಗೆಲ್ಲಿಸಿದ್ದಾರೆ ಎಂದು ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ತಿಳಿಸಿದ್ದಾರೆ