ಡಾ. ಫ.ಗು. ಹಳಕಟ್ಟಿ ಜನ್ಮದಿನ ಆಚರಣೆ – ಪಾಟೀಲ ಕೋಳಕೂರ

ಡಾ. ಫ.ಗು. ಹಳಕಟ್ಟಿ ಜನ್ಮದಿನ ಆಚರಣೆ – ಪಾಟೀಲ ಕೋಳಕೂರ

ಡಾ. ಫ.ಗು. ಹಳಕಟ್ಟಿ ಜನ್ಮದಿನ ಆಚರಣೆ – ಪಾಟೀಲ ಕೋಳಕೂರ

ಕಲಬುರ್ಗಿ, ಜು.2: ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಕಲಬುರ್ಗಿಯ ವತಿಯಿಂದ ಬಯಲು ಅನುಭವ ಮಂಟಪ, ವೀರೇಂದ್ರ ಪಾಟೀಲ್ ಬಡಾವಣೆ, ಸೇಡಂ ರಸ್ತೆಯಲ್ಲಿ ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಶಾಂತಲಿಂಗ ಪಾಟೀಲ್ ಕೋಳಕೂರ್ ವಹಿಸಿದ್ದರು. ಅವರು ಪ್ರಾಸ್ತಾವಿಕ ಭಾಷಣದ ಮೂಲಕ ಎಲ್ಲರನ್ನೂ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಪಾಟೀಲ್ ತೆಗಲಪ್ಪಿ, ಪರಿಷತ್ತಿನ ಮಹಾಪೋಷಕರಾದ ಶಿವಶರಣಪ್ಪ ಕಲ್ಶೆಟ್ಟಿ, ಗೌರವಾಧ್ಯಕ್ಷ ವಿಶ್ವನಾಥ್ ಕೋರ್ವಾರ್, ಕಾರ್ಯಕಾರಿಣಿ ಸದಸ್ಯರಾದ ಸೋಮಶೇಖರ್ ಮಾಲಿಪಾಟೀಲ್ ತಿಪ್ಪಿ, ನೂರೊಂದೇಸ್ವಾಮಿ ಸಾಲಹಳ್ಳಿ, ಜಗದೀಶ್ ಮೊನ್ಗೊಂಡ (ಕೊಡದುದೂರ), ರೇಣುಕಾಂತ್ ಬಿ. ಸಾಲಳ್ಳಿ, ಮಡಿವಾಳಯ್ಯ ಸ್ವಾಮಿ ತೆಂಗಳಿ, ಚನ್ನಬಸಪ್ಪ ಪಾಟೀಲ್ ರೇವೂರು ಹಾಗೂ ನೂರೊಂದೇಸ್ವಾಮಿ ಸಾಲಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೋಮಶೇಖರ್ ಮಾಲಿಪಾಟೀಲ್ ತೆಗತಿಪಿ ನಿರೂಪಿಸಿದರು ಹಾಗೂ ವಂದಿಸಿದರು.