ಹೊಳೆಸಮುದ್ರ: ದಸರಾ - ನವರಾತ್ರಿ - ಉತ್ಸವ
ಹೊಳೆಸಮುದ್ರ: ದಸರಾ - ನವರಾತ್ರಿ - ಉತ್ಸವ
ಕಮಲನಗರ :ತಾಲೂಕಿನ ಹೊಳೆಸಮುದ್ರ ಗ್ರಾಮದ ಐತಿಹಾಸಿಕ ಅಂಬಾ ಭವಾನಿ ದೇವಸ್ಥಾನದಲ್ಲಿ ಘಟ ಸ್ಥಾಪನೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಭವಾನಿ ಮಾತೆ ಮಂದಿರದಲ್ಲಿ ಘಟ ಸ್ಥಾಪನೆ ಮಾಡಲಾಯಿತು. ಒಂಬತ್ತು ದಿನಗಳ ಕಾಲ ಸೇರಿ ಸೀಗಿ ಹುಣ್ಣಿಮೆ ವರಗೆ ನಿರಂತರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಈ ಘಟ ಸ್ಥಾಪನೆಯೊಂದಿಗೆ ಆರಂಭಗೊಂಡ ನವರಾತ್ರಿ ಉತ್ಸವ ಭವಾನಿ ದೇವಿ ದೇವಸ್ಥಾನ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನಿಂದ ಅಲಂಕಾರ ಮಾಡಿ ಆಕರ್ಷಕ ಅಲಂಕಾರಗೊಳಿಸಿದ್ದು ಭಕ್ತರನ್ನು ಗಮನ ಸೆಳೆಯುತ್ತಿದೆ.
ಐತಿಹಾಸಿಕ ಅಂಬಾ ಭವಾನಿ ದೇವಸ್ಥಾನದಲ್ಲಿ ಘಟ ಸ್ಥಾಪನೆ ಯಾದ ನಂತರ 9 ದಿನಗಳ ಕಾಲ ಪ್ರತಿನಿತ್ಯ ಸಾಯಂಕಾಲ ಅಂಬಾ ಭವಾನಿ ಮಂದಿರಕ್ಕೆ ಭಕ್ತಾದಿಗಳು ಆಗಮಿಸಿ ಧಾರ್ಮಿಕ ವಿಧಿ ವಿಧಾನದಂತೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಮಂಗಳಾರತಿ ಮಾಡುತ್ತಾರೆ. ಜತೆಗೆ ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆ(ಮಾಧವರಾವ್ ಗುರುಲಿಂಗಪ್ಪ ಬೆಣ್ಣೆ) ಇವರಿಂದ ಮಾಡಲಾಯಿತು.
9 ದಿನಗಳ ಕಾಲ ವಿಭಿನ್ನ ಬಣ್ಣಗಳ ಸೀರೆ ಉಟ್ಟು ಸಡಗರದಿಂದ ಹೆಣ್ಣು ಮಕ್ಕಳು ಈ ಮಂದಿರಕ್ಕೆ ಬರುತ್ತಾರೆ.
ಈ ನಿಮಿತ್ತ 9 ದಿನಗಳು ಬಣ್ಣ ಬಣ್ಣದ ಉಡುಪು ಧರಿಸಿ ಬರುವುದರೊಂದಿಗೆ ಇಂದಿನ ಆರನೇ ದಿನದ ಕೆಂಪು ಬಣ್ಣದ ಉಡುಗೆ ಧರಿಸಿ ಸ್ತ್ರೀ ಪುರುಷರು ಬಂದಿರುತ್ತಾರೆ. ಪ್ರತಿ ದಿನ ವಿಶೇಷ ಪೂಜೆ ಮಾಡಲಾಗುತ್ತದೆ. ರಾತ್ರಿ ದೇವಿ ಪೂಜೆ ಸಾರ್ವಜನಿಕ ಭಜನೆ ಮಾಡುತ್ತಾರೆ.
ಷಷ್ಠಿ-ಕಾತ್ಯಯನಿ -ಕೆಂಪು
ಕಾತ್ಯಾಯಿನಿ ಪೂಜೆ ದುರ್ಗಾ ಮಾತೆ ಕಾತ್ಯಾಯಿನಿ ಗುರುಗ್ರಹವನ್ನು ನಿಯಂತ್ರಿಸುತ್ತಾರೆ. ಅವಳು ತನ್ನ ಆರಾಧಕರಿಗೆ ಧೈರ್ಯ ಮತ್ತು ಪರಾಕ್ರಮವನ್ನು ನೀಡುತ್ತಾಳೆ. ಆರನೇ ಅವತಾರದಲ್ಲಿ ದೇವಿ ಕೆಂಪು ಬಣ್ಣದ ಉಡುಗೆ ಧರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಕೆಂಪು ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿದೆ.ದೇವಿಯು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಈ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಅನೇಕರು ಭಕ್ತರು ಸೇರಿ ಉಪಸ್ಥಿತಿಯಲ್ಲಿ ಇರುತ್ತಾರೆ.