ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ಸಲ್ಲದು ಶಶೀಲ್ ಜಿ ನಮೋಶಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ಸಲ್ಲದು  ಶಶೀಲ್ ಜಿ ನಮೋಶಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ಸಲ್ಲದು ಶಶೀಲ್ ಜಿ ನಮೋಶಿ 

ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಈ ಬಾರಿ ನಡೆದ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ವಿಷಯಗಳ ಚರ್ಚೆಗೆ ಅವಕಾಶ ನೀಡದೆ ಇರುವುದು ಅತ್ಯಂತ ದುರದೃಷ್ಟಕರ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಖೇದ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಕೇಂದ್ರ ಭಾಗವಾದ ಕಲಬುರ್ಗಿಯಲ್ಲಿ 19 ನೇಯ ರಾಜ್ಯ ಸಚಿವ ಸಂಪುಟ ಸಭೆ ನಡೆಸಿ 46 ನಿರ್ಣಯಗಳನ್ನು ಈ ಭಾಗದ ಕಲ್ಯಾಣಕ್ಕಾಗಿ ಘೋಷಣೆ ಮಾಡಿದರು ಈ ಘೋಷಣೆ ಮಾಡಿ ಎರಡು ತಿಂಗಳುಗಳ ಕಳೆದು ಈಗ ಚಳಿಗಾಲದ ಅಧಿವೇಶನದಲ್ಲಿ ಅದರ ಚರ್ಚೆಗೂ ಅವಕಾಶ ನೀಡದ ಸರ್ಕಾರ ಕಾರ್ಯಕ್ಕಿಂತ ಘೋಷಣೆ ಮುಖ್ಯ ಎಂಬುದನ್ನು ಸಾಬೀತು ಪಡಿಸಿದೆ. 46 ಘೋಷಣೆಗಳು ಘೋಷಣೆಯಾಗಿಯೆ ಉಳಿದಿವೆ.

ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್, ರಾಯಚೂರು,ಯಾದಗೀರ, ಕೊಪ್ಪಳ, ಬಳ್ಳಾರಿ,ವಿಜಯನಗರ ಸೇರಿ ಇಡಿ ಕಲ್ಯಾಣ ಕರ್ನಾಟಕ ವಿಶೇಷ ಅಭಿವೃದ್ಧಿಗಾಗಿ ಒತ್ತು ನೀಡಲೆಂದು ಸೆಪ್ಟೆಂಬರ್ 17 ರಂದು ಈ ಸಚಿವ ಸಂಪುಟವನ್ನು ಸರ್ಕಾರ ನಡೆಸಿತು.ಸಭೆಯಲ್ಲಿ ಹಲವಾರು ನಿರ್ಣಯ ತೆಗೆದುಕೊಂಡಿರುವದೆ ದೊಡ್ಡ ಸಾಧನೆಯಾಗಿದೆ.ಸಂಪುಟ ಸಭೆ ಮುಗಿದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು 46 ನಿರ್ಣಯಗಳಿಗೆ 11770 ಕೋಟಿ ರೂ ಮಿಸಲಿಟ್ಟಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು ಈಗ ಇಲ್ಲಿ ಇರುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರುಇದರ ಬಗ್ಗೆ ಏನು ಹೇಳುತ್ತಾರೆ.

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ನೀಡಲು ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳುವ ಪ್ರಮುಖ ನಿರ್ಧಾರ ಮಾಡಲಾಯಿತು.ನಂತರ ಖಾಲಿ ಇರುವ 17434 ಹುದ್ದೆಗಳನ್ನು ತಕ್ಷಣ ತುಂಬಿಕೊಳ್ಳಲು ನಿರ್ಧರಿಸಲಾಯಿತು.ಕೃಷಿ ಇಲಾಖೆಗೆ 100 ಕೋಟಿ ಮೂಡಿಸಲು ಸಹ ಇಡಲಾಯಿತು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ 1550 ಕೋಟಿ ಮಿಸಲಿಡಲಾಯಿತು.ಅರಣ್ಯ ಇಲಾಖೆಗೆ 32 ಕೋಟಿ ಮೀಸಲಿಡಲಾಯಿತು, ಆರೋಗ್ಯ ಇಲಾಖೆಗೆ 910 ಕೋಟಿ ಮೀಸಲಿಡಲಾಯಿತು ಕಲಬುರ್ಗಿ ಸ್ಮಾರ್ಟ್ ಸೀಟಿಗೆ 1685 ಕೋಟಿ ರೂ ಮೀಸಲಿಡಲಾಯಿತು, ಕಲಬುರ್ಗಿ ಬೀದರ್ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ 7200 ಕೋಟಿ ಮೀಸಲಿಡಲಾಯಿತು.ಬೀದರ ರಾಯಚೂರು ನಗರಸಭೆಗಳನ್ನು ಮೇಲ್ದರ್ಜೆಗೆರಿಸುವದು, ಬೀದರ್ ಅನುಭವ ಮಂಟಪದಿಂದ ಅಂಜನಾದ್ರಿವರೆಗಿನ ಎಲ್ಲಾ ಪ್ರವಾಸಿ ತಾಣಗಳ ಅಭಿವೃದ್ಧಿಗೆ 596 ಕೋಟಿ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರು ಆದರೆ ಈ ಯೋಜನೆಯಲ್ಲಿ ಒಂದು ನಿರ್ಣಯಗಳು ಕಾರ್ಯರೂಪಕ್ಕೆ ಬರದೆ ಇರುವುದು ನಮ್ಮ ಭಾಗದ ದುರ್ದೈವ ಈ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಭಾಗದ ಚರ್ಚೆಗೂ ಅವಕಾಶ ನೀಡದೆ ಇರುವುದು ಬೇಸರವಾಗಿದೆ.ಸಲ್ಲಿಸಿದರು.

ಪ್ರೊ. ಡಿ.ಎಂ.ನಂಜುಂಡಪ್ಪ ವರದಿ ಹಾಗೂ ಇತರೆ ವರದಿಗಳ ಆಧಾರದ ಮೇಲೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಈ ಭಾಗದ ಅನೇಕ ಹೋರಾಟಗಾರರ ಹೋರಾಟದ ಫಲವಾಗಿ 98ನೇ ಸಂವಿಧಾನದ ತಿದ್ದುಪಡಿ ಪ್ರಕಾರ 371 ಜೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಉದ್ಯೋಗ ಅವಕಾಶ ನೀಡಲು 2013ರಲ್ಲಿ ಸರ್ಕಾರ ಜಾರಿ ಮಾಡಿತು ಆದರೆ ಈಗ ದಶಕಗಳು ಕಳೆದರೂ ಸಮಸ್ಯೆಗಳು ಸಮಸ್ಯೆಗಳಾಗಿಯೆ ಉಳಿದಿವೆ. ಶಿಕ್ಷಣ, ಉದ್ಯೋಗ, ಅನುದಾನ ಮೀಸಲು, ಭಡ್ತಿ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕಲಂ 371(ಜೆ) ಉಲ್ಲಂಘನೆ ನಿರಂತರವಾಗಿದೆ. ಹೈಕ ಭಾಗದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿ ಶೇ.80 ಮೀಸಲಾತಿ ಅನುಷ್ಠಾನವಾಗಿದೆ. ಬೆಂಗಳೂರು ಸಚಿವಾಲಯ ಸೇರಿ ಖಾಸಗಿ ಶಾಲಾ-ಕಾಲೇಜು ಮತ್ತು ಭಡ್ತಿ ವಿಷಯದಲ್ಲಿ ಸರಕಾರ ಕಲಂ 371(ಜೆ)ಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಈಗಾಗಲೇ ಶಿಕ್ಷಣ ಸಚಿವರು 59000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ ಅದರಲ್ಲಿ ಬಹುಪಾಲು ಹುದ್ದೆಗಳು ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇವೆ ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಗ ಹಿಂದುಳಿಯಲು ಕಾರಣವಾಗಿದೆ.

01/02/2023 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 371j ನೇಮಕಾತಿ ಗೊಂದಲ ನಿವಾರಿಸಲು ತಿದ್ದುಪಡಿ ಮಾಡಿ ನಿರ್ಣಯ ಮಾಡಿದರು ಅದು ಇನ್ನೂ ಜಾರಿಯಾಗದೆ ಹಾಗೆ ಉಳಿದಿದೆ.

ಹೀಗೆ ಕಲ್ಯಾಣ ಕರ್ನಾಟಕದ ಮೀಸಲಾತಿ ಸೌಲಭ್ಯಕ್ಕೆ ಅನ್ಯಾಯ ಮಾಡುತ್ತ ಹೋದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮರಿಚಿಕೆಯಾಗಿಯೇ ಉಳಿಯುವದರಲ್ಲಿ ಸಂದೇಹವೆ ಇಲ್ಲ ನಮ್ಮ ಭಾಗದ ಖಾಲಿ ಹುದ್ದೆಗಳಿಗೆ 371j ಅಡಿಯಲ್ಲಿ ಹಣಕಾಸು ಇಲಾಖೆಯ ಅನುಮತಿಯ ಅವಶ್ಯಕತೆ ಇರದಿದ್ದರು ಸಹ ಖಾಲಿ ಹುದ್ದೆಗೆ ಹಣಕಾಸು ಇಲಾಖೆಯ ನೆಪ ಒಡ್ಡುತ್ತಿರುವದು ಸರಿಯಲ್ಲ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ನಿಡಿದ್ದವೇ ಎಂದು ಹೇಳಲಾಗಿದೆ ಇಲ್ಲಿಯವರೆಗೂ ಎಷ್ಟು ಖರ್ಚುಮಾಡಲಾಗಿದೆ ಎಂದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು