ಬಿ ಶ್ಯಾಮಸುಂದರ ದಕ್ಷಿಣ ಭಾರತದ ಅಂಬೇಡ್ಕರ್: ಡಾ ಅಂಬಾರಾಯ ಅಷ್ಠಗಿ ಬಣ್ಣನೆ
ಬಿ ಶ್ಯಾಮಸುಂದರ ದಕ್ಷಿಣ ಭಾರತದ ಅಂಬೇಡ್ಕರ್: ಡಾ ಅಂಬಾರಾಯ ಅಷ್ಠಗಿ ಬಣ್ಣನೆ
ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಬಿ ಶ್ಯಾಮ ಸುಂದರ ಅವರ ೧೧೬ನೇ ಜಯಂತೋತ್ಸವ ಕಾರ್ಯಕ್ರಮ ಆಯೋಜನೆ
ಕಲಬುರಗಿ : ಸಮಾಜ ಸುಧಾರಕ ಬಿ ಶ್ಯಾಮ ಸುಂದರ ಅವರು ಒಬ್ಬ ಕ್ರಾಂತಿಕಾರಿ ಬದಲಾವಣೆಯ ಹೋರಾಟಗಾರರಾಗಿ, ಶೋಷಿತ ವರ್ಗಗಳ ಕಲ್ಯಾಣಕ್ಕೆ ಹೋರಾಟ ನಡೆಸಿದ ದಕ್ಷಿಣ ಭಾರತದ ಅಂಬೇಡ್ಕರ್ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಅಭಿಪ್ರಾಯಪಟ್ಟರು.
ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ವತಿಯಿಂದ ನಗರದ ಕಲಾ ಮಂಡಳ ಸಭಾಂಗಣದಲ್ಲಿ ಆಯೋಜಿಸಿದ್ದ, ಸಮಾಜ ಸುಧಾರಕ ಹಾಗೂ ಮಾಜಿ ಉಪಸಭಾಪತಿ ಬಿ ಶ್ಯಾಮ ಸುಂದರ ಅವರ ೧೧೬ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಇತಿಹಾಸವನ್ನು ಅವಲೋಕಿಸಿದಾಗ, ಬಿ ಶ್ಯಾಮಸುಂದರ ಅವರು ಹೈದರಾಬಾದ್ ನಿಜಾಮ್ ಸರ್ಕಾರದಲ್ಲಿ ಮಂತ್ರಿಯಾಗಿ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಅವರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ ಅಲ್ಲಾವುದ್ದೀನ್ ಸಾಗರ, ದಲಿತ - ಮುಸ್ಲಿಂ ಸಮುದಾಯಗಳನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಅಪೂರ್ವ ಹೋರಾಟದ ಚಿಲುಮೆ ಬಿ ಶ್ಯಾಮ ಸುಂದರ ಆಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಡಾ.ದೇವೇಂದ್ರಪ್ಪ ಕಮಲಾಪುರ, ಸುನೀಲ್ ಕುಮಾರ್ ವಂಟಿ, ಮಾತನಾಡಿದರು.
ಶಿವಶಂಕರಪ್ಪ ಪಟ್ಪಣಕರ, ಲಕ್ಷ್ಮಿಕಾಂತ ಗಾರೆ ವೇದಿಕೆಯಲ್ಲಿದ್ದರು.
ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವಕುಮಾರ ಮಾಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ ಶ್ಯಾಮಸುಂದರ ಅವರ ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಬೀದರಿನ ಪೂಜ್ಯ ಭಂತೆ ಧಮ್ಮದೀಪ ಅವರು ಸಾನಿಧ್ಯ ವಹಿಸಿದ್ದರು, ಕಸಸೈ ದಳದ ಜಿಲ್ಲಾಧ್ಯಕ್ಷ ಈರಣ್ಣ ಜಾನೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ ನಿರೂಪಿಸಿದರು, ಮಹಾದೇವ ನಾಟೀಕರ್ ವಂದಿಸಿದರು, ಮಲ್ಲಿಕಾರ್ಜುನ ಉದಯಕರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಪದಾಧಿಕಾರಿಗಳಾದ, ವಿಜಯಕುಮಾರ್ ಉದ್ದ ಶಿವಲಿಂಗಮ್ಮ ಸಾವಳಗಿ, ಮಹಾದೇವಿ ಬಾಪುನಗರ್, ಯಶೋಧ ಕುಸನೂರ್ ಸಿದ್ದಾರ್ಥ ಕಣಮಸ್, ಖತಲಪ್ಪ ಕಟ್ಟಿಮನಿ, ಮಲ್ಲಮ್ಮ ಜಗತಿ , ಶಿವಮೂರ್ತಿ ಬಲಿಚಕ್ರವರ್ತಿ, ಜ್ಞಾನಪ್ರಕಾಶ ಮೂಲಭಾರತಿ, ಅಮೃತರಾವ್ ನಾಯ್ಕೋಡಿ,ಮಲ್ಲು ನಂದೂರ , ಕಪೀಲ ಜಾನೆ, ಸೂರ್ಯಕಾಂತ ಅಂಬಲಗಿ, ಮಾರುತಿ ಲೇಂಗಟಿ, ಜಯಾನಂದ ಕೊಳ್ಳುರ , ಭೀಮರಾವ ಕೇಲಕೇರಿ , ವಿಜಯಕುಮಾರ ಸಾವಳಗಿ,ಭಾರತಿಬಾಯಿ ಕಾಂಬಳೆ,ಕಾವೇರಿ ಗೊರಂಪಳ್ಳಿ, ರೇವಣಸಿದ್ದಪ್ಪ ಅಲಂಕಾರ, ಶಿವಶರಣಪ್ಪ ಬೆಳಮಗಿ, ಪದ್ಮಾವತಿ ಅಟ್ಟುರಕರ, ಮಹಾದೇವಿ ರಾಜಾಪುರ, ಶ್ಯಾಮ ತಾರಫೈಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
[ ದೇಶದ ಸಂಪತ್ತನ್ನು ರಾಷ್ಟ್ಳೀಕರಣ ಮಾಡಬೇಕು ಮತ್ತು ಬಡವರಿಗೆ ಅದರ ವಿನಿಯೋಗವಾಗಬೇಕೇಂಬುದು ಅವರ ಬಯಕೆಯಾಗಿತ್ತು]
-ಡಾ ಅಂಬಾರಾಯ ಅಷ್ಠಗಿ,ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಕಲಬುರಗಿ