ಪ್ರಧಾನಿ ಮೋದಿಯವರು ವಕ್ಫ್ ಕಾನೂನಿನಲ್ಲಿ ತಿದ್ದುಪಡಿ – ಬಿ.ಜಯ ಸಿಂಗ್ ಸ್ವಾಗತ

ಪ್ರಧಾನಿ ಮೋದಿಯವರು ವಕ್ಫ್ ಕಾನೂನಿನಲ್ಲಿ ತಿದ್ದುಪಡಿ – ಬಿ.ಜಯ ಸಿಂಗ್ ಸ್ವಾಗತ

ಪ್ರಧಾನಿ ಮೋದಿಯವರು ವಕ್ಫ್ ಕಾನೂನಿನಲ್ಲಿ ತಿದ್ದುಪಡಿ – ಬಿ.ಜಯ ಸಿಂಗ್ ಸ್ವಾಗತ  

ಕಲಬುರಗಿ: ನವದೆಹಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾನೂನಿನಲ್ಲಿ ತಿದ್ದುಪಡಿ ಮಾಡುವ ನಿರ್ಧಾರ ಕೈಗೊಂಡಿದ್ದು, , "ಈ ತಿದ್ದುಪಡಿ ದೇಶದ ಹಿಂದೂಗಳ ಆಸ್ತಿಯನ್ನು ಸಂರಕ್ಷಣೆ ಮಾಡಲಿದೆ" ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಯ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಹಲವಾರು ಹಿಂದೂ ಸಂಘಟನೆಗಳು ಮತ್ತು ಮುಖಂಡರು ಪ್ರಧಾನಮಂತ್ರಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಈ ತಿದ್ದುಪಡಿಯಿಂದ ಹಿಂದೂಗಳ ಆಸ್ತಿಗಳ ಮೇಲೆ ಯಾವುದೇ ಅನ್ಯಾಯ ನಡೆಯದಂತೆ ತಡೆಯಲಾಗುತ್ತದೆ. ಪ್ರಧಾನಿ ಮೋದಿಯವರು ನಮ್ಮ ಹಕ್ಕುಗಳ ಪರ ಹೋರಾಟ ನಡೆಸಿದಂತಾಗಿದೆ. ಎಲ್ಲಾ ಹಿಂದೂಗಳು ಅವರಿಗೆ ಶರಣಾಗಿರುತ್ತೇವೆ" ಎಂದು ಬಿ. ಜಯಸಿಂಗ್ ಹೇಳಿದ್ದಾರೆ.

ಸಂಸತ್ತಿನಲ್ಲಿ ಈ ತಿದ್ದುಪಡಿ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದ್ದು, ಇದನ್ನು ಕಾನೂನಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು , ಹಿಂದೂ ಜನತೆ, ಕರ್ನಾಟಕದ ಎಲ್ಲಾ ಜನರ ಪರವಾಗಿ ತಮ್ಮನ್ನು ಸ್ವಾಗತಿಸುತ್ತೇವೆ ಎಂದರು.